ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೋಮನಾಥ ದೇವಾಲಯಕ್ಕೆ ಮೋದಿ ಭೇಟಿ; 72 ಗಂಟೆಗಳ ಓಂ ಪಠಣದಲ್ಲಿ ಪ್ರಧಾನಿ ಭಾಗಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಗುಜರಾತ್ ಭೇಟಿಯ ಭಾಗವಾಗಿ ಶನಿವಾರ ಸೋಮನಾಥಕ್ಕೆ ಭೇಟಿ ನೀಡಿದರು. ಅವರು ಸೋಮನಾಥ ಸ್ವಾಭಿಮಾನ್ ಪರ್ವ್' ಮತ್ತು ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸೋಮನಾಥ ದೇವಾಲಯಕ್ಕೆ ಮೋದಿ ಭೇಟಿ

ಸಂಗ್ರಹ ಚಿತ್ರ -

Vishakha Bhat
Vishakha Bhat Jan 11, 2026 8:57 AM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮೂರು ದಿನಗಳ ಗುಜರಾತ್ ಭೇಟಿಯ ಭಾಗವಾಗಿ ಶನಿವಾರ ಸೋಮನಾಥಕ್ಕೆ (Somnath Temple) ಭೇಟಿ ನೀಡಿದರು. ಅವರು ಸೋಮನಾಥ ಸ್ವಾಭಿಮಾನ್ ಪರ್ವ್' ಮತ್ತು ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಪಟ್ಟಣದ ಬಳಿಯ ಪ್ರಸಿದ್ಧ ಸೋಮನಾಥ ಮಹಾದೇವ ದೇವಾಲಯದ ಬಳಿಯ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರರು ಪ್ರಧಾನಿಯನ್ನು ಸ್ವಾಗತಿಸಿದರು.

ಸೋಮನಾಥ ದೇವಾಯಲದ ಭೇಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮೋದಿ, ನಮ್ಮ ನಾಗರಿಕತೆಯ ಧೈರ್ಯದ ಹೆಮ್ಮೆಯ ಸಂಕೇತವಾದ ಸೋಮನಾಥದಲ್ಲಿ ಇರುವುದು ಧನ್ಯವೆನಿಸುತ್ತದೆ. 1026 ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ ಸಾವಿರ ವರ್ಷಗಳನ್ನು ಆಚರಿಸಲು ಇಡೀ ರಾಷ್ಟ್ರವು ಒಟ್ಟಾಗಿ ಸೇರಿವೆ. ಆತ್ಮೀಯ ಸ್ವಾಗತಕ್ಕಾಗಿ ಜನರಿಗೆ ಕೃತಜ್ಞತೆಗಳು" ಎಂದು ಪ್ರಧಾನಿ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಜನವರಿ 8 ರಿಂದ 11 ರವರೆಗೆ ನಡೆಯಲಿರುವ 'ಸೋಮನಾಥ ಸ್ವಾಭಿಮಾನ್ ಪರ್ವ್' ಸರಣಿ ಕಾರ್ಯಕ್ರಮಗಳ ಭಾಗವಾಗಿ ಮೋದಿ, ಸಂಜೆ ಸೋಮನಾಥ ದೇವಾಲಯದಲ್ಲಿ 'ಓಂಕಾರ ಮಂತ್ರ' ಪಠಣದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ದೇವಾಲಯದ ಆವರಣದಲ್ಲಿ ಡ್ರೋನ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ದೇವಾಲಯಕ್ಕೆ ಸಂಬಂಧಿಸಿದ ಐತಿಹಾಸಿಕ ಘಟನೆಗಳನ್ನು ಮರುಸೃಷ್ಟಿಸಲು ಸುಮಾರು 3,000 ಡ್ರೋನ್‌ಗಳನ್ನು ಬಳಸಲಾಗುವುದು.

ಸೋಮನಾಥ ದೇವಾಲಯದ ಸ್ವಾಭಿಮಾನ ಪರ್ವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ: ಭೇಟಿಗೆ ಮುನ್ನ ಹೇಳಿದ್ದೇನು?

ಭಾನುವಾರ ಬೆಳಿಗ್ಗೆ 9:45 ಕ್ಕೆ ಪ್ರಧಾನಿಯವರು ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ 'ಶೌರ್ಯ ಯಾತ್ರೆ'ಯಲ್ಲಿ ಭಾಗವಹಿಸಲಿದ್ದಾರೆ. ನಂತರ, ಪ್ರಧಾನಿ ಮೋದಿ ಬೆಳಿಗ್ಗೆ 10:15 ಕ್ಕೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಬೆಳಿಗ್ಗೆ 11 ಗಂಟೆಗೆ ಸೋಮನಾಥ ಸ್ವಾಭಿಮಾನ್ ಪರ್ವ್ ಅನ್ನು ಗುರುತಿಸುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭವಿಷ್ಯದ ಪೀಳಿಗೆಯ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರೇರೇಪಿಸುತ್ತಿರುವ ದೇವಾಲಯವನ್ನು ರಕ್ಷಿಸಲು ತ್ಯಾಗ ಮಾಡಿದ ಭಾರತದ ಅಸಂಖ್ಯಾತ ನಾಗರಿಕರನ್ನು ಸ್ಮರಿಸಲು ಸೋಮನಾಥ ಸ್ವಾಭಿಮಾನ ಪರ್ವ್ ಅನ್ನು ನಡೆಸಲಾಗುತ್ತಿದೆ.