ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ವಿರಾಟ್‌ ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಅಲಾನ್‌ ಡೊನಾಲ್ಡ್‌!

Allan Donald on Virat Kohli's ODI World Cup Future: ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಅವರು ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಅಲಾನ್‌ ಡೊನಾಲ್ಡ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿಯ ವಿಶ್ವಕಪ್‌ ಭವಿಷ್ಯ ನುಡಿದ ಅಲಾನ್‌ ಡೊನಾಲ್ಡ್‌!

ವಿರಾಟ್‌ ಕೊಹ್ಲಿ ಬಗ್ಗೆ ಅಲಾನ್‌ ಬಾರ್ಡರ್‌ ದೊಡ್ಡ ಹೇಳಿಕೆ. -

Profile
Ramesh Kote Jan 11, 2026 9:59 PM

ನವದೆಹಲಿ: ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಬಹುಬೇಗ ನಿವೃತ್ತಿ ಘೋಷಿಸಿದ್ದರೆಂದು ದಕ್ಷಿಣ ಆಫ್ರಿಕಾ ಮಾಜಿ ಫಾಸ್ಟ್‌ ಬೌಲರ್‌ ಅಲಾನ್‌ ಡೊನಾಲ್ಡ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2025ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಕೊಹ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅದೇ ವರ್ಷ ಮೇ ತಿಂಗಳಲ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ವಿರಾಟ್‌ ಕೊಹ್ಲಿ ಬಹುಬೇಗ ಟೆಸ್ಟ್‌ಗೆ ವಿದಾಯ ಹೇಳಲಿದ್ದಾರೆಂದು ಯಾರು ಕೂಡ ಬಯಸಿರಲಿಲ್ಲ. ಅದರಂತೆ ದೆಹಲಿ ತಂಡದ ಪರ ರಣಜಿ ಟ್ರೋಫಿ ಪಂದ್ಯವನ್ನು ಕೂಡ ಆಡಿದ್ದರು. ಆದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಐಪಿಎಲ್‌ ಟೂರ್ನಿಯ ಸಂದರ್ಭದಲ್ಲಿ ಟೆಸ್ಟ್‌ಗೆ ಗುಡ್‌ಬೈ ಹೇಳಿದ್ದರು. ಅಂದ ಹಾಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ವಿರಾಟ್‌ ಕೊಹ್ಲಿ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆಂದು ಅಲಾನ್‌ ಬಾರ್ಡರ್‌ ಅಂದಾಜಿಸಿದ್ದಾರೆ.

Varyun Chakravarthy: ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಕೀ ಆಟಗಾರನನ್ನು ಆರಿಸಿದ ಸೌರವ್‌ ಗಂಗೂಲಿ!

"ನಿಮಗೆ ಗೊತ್ತಾ, ವಿರಾಟ್‌ ಕೊಹ್ಲಿಯಂತಹ ಹಸಿವಿರುವ ಆಟಗಾರನನ್ನು ನಾನು ನೋಡಿಯೇ ಇಲ್ಲ. ಅವರ ಬಗ್ಗೆ ನನಗೆ ದೊಡ್ಡ ಪ್ರಮಾಣದ ಗೌರವವಿದೆ. ಈ ಬಗ್ಗೆ ನಾನು ಡ್ರೆಸ್ಸಿಂಗ್‌ ರೂಂನಲ್ಲಿಯೇ ಮಾತನಾಡಿದ್ದೇನೆ ಹಾಗೂ ಚಾಂಪಿಯನ್‌ ಟ್ರೈನರ್‌ ಆಗಿ ನಾನು ಇದೆಲ್ಲವನ್ನು ಮೆಚ್ಚುಕೊಂಡಿದ್ದೇನೆ. ಅವರಷ್ಟು ಕಠಿಣವಾಗಿ ತರಬೇತಿ ಪಡೆಯುವ ಆಟಗಾರನನ್ನು ನಾನು ನೋಡಿಯೇ ಇಲ್ಲ. ಅವರು ಒಂದು ಮಶೀನ್‌ ರೀತಿ," ಎಂದು ಅಲಾನ್‌ ಡೊನಾಲ್ಡ್‌ ತಿಳಿಸಿದ್ದಾರೆ.

"ಅವರು ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದವನ್ನು ಕಳೆದುಕೊಂಡಿದ್ದಾರೆ. ನನಗೆ ಅನಿಸಿದ ಹಾಗೆ ಅವರು ಬಹುಬೇಗ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಸಲುವಾಗಿ ಅವರು ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿದ್ದಾರೆಂದು ನನಗೆ ಗೊತ್ತಿದೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಭವಿಷ್ಯ ನುಡಿದಿದ್ದಾರೆ.

IND vs NZ: ಅರ್ಷದೀಪ್‌ ಸಿಂಗ್‌ಗೆ ಅವಕಾಶ ನೀಡದ ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಕಿಡಿ!

2024ರಲ್ಲಿ ಅವರು ಭಾರತ ಪರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗೆದ್ದಿದ್ದರು. ಇದರ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಇದಾದ ಬಳಿಕ 10 ತಿಂಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇದೀಗ ಅವರು ನ್ಯೂಜಿಲೆಂಡ್‌ ವಿರುದ್ಧ ಪ್ರಸ್ತುತ ಸಾಗುತ್ತಿರುವ ಏಕದಿನ ಸರಣಿಯ ಭಾರತ ತಂಡದ ಭಾಗವಾಗಿದ್ದಾರೆ.

ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಕೊಹ್ಲಿ

ವಿರಾಟ್‌ ಕೊಹ್ಲಿ ಅವರು 2025-26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ದೆಹಲಿ ಪರ ಆಡಿದ್ದ ಎರಡು ಪಂದ್ಯಗಳಲ್ಲಿ ಮಿಂಚಿದ್ದರು. 15 ವರ್ಷಗಳ ಬಳಿಕ 50 ಓವರ್‌ಗಳ ಸ್ವರೂಪದ ದೇಶಿ ಕ್ರಿಕೆಟ್‌ಗೆ ಮರಳಿದ್ದ ಕೊಹ್ಲಿ, ಆಂಧ್ರ ವಿರುದ್ಧದ ಪಂದ್ಯದಲ್ಲಿ 101 ಎಸೆತಗಳಲ್ಲಿ 131 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಮೂರು ಸಿಕ್ಸರ್‌ ಹಾಗೂ 14 ಬೌಂಡರಿಗಳನ್ನು ಸಿಡಿಸಿದ್ದರು.

ಇದರೊಂದಿಗೆ ಅವರು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 16000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಇದಾದ ಬಳಿಕ ಗುಜರಾತ್‌ ವಿರುದ್ಧದ ಎರಡನೇ ಪಂದ್ಯದಲ್ಲಿ 77 ರನ್‌ ಬಾರಿಸಿದ್ದರು.