ಶ್ವೇತಭವನದ ಭೋಜನಕೂಟದಲ್ಲಿ ಗುಂಡಿನ ದಾಳಿ: ಪ್ರಧಾನಿ ಮೋದಿ ಖಂಡನೆ
ವಾಷಿಂಗ್ಟನ್ ಡಿ.ಸಿ.ಯ ಶ್ವೇತಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ವರದಿಗಾರರ ಭೋಜನಕೂಟದಲ್ಲಿ ನಡೆದಿರುವ ಗುಂಡಿನ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿ ಯಾರಿಗೂ ಹಾನಿ ಮಾಡಿಲ್ಲ ಎಂದು ತಿಳಿದು ಸಮಾಧಾನವಾಯಿತು ಎಂದು ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. ವಾಷಿಂಗ್ಟನ್ ಡಿ.ಸಿ.ಯ (Washington, D.C.) ಶ್ವೇತಭವನದಲ್ಲಿ ಶನಿವಾರ ರಾತ್ರಿ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಆಯೋಜಿಸಿದ್ದ ವರದಿಗಾರರ ಭೋಜನಕೂಟದಲ್ಲಿ ನಡೆದಿರುವ ಗುಂಡಿನ ದಾಳಿಗೆ ಪ್ರತಿಕ್ರಿಯಿಸಿರುವ ಅವರು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ದಾಳಿ ಯಾರಿಗೂ ಹಾನಿ ಮಾಡಿಲ್ಲ ಎಂದು ತಿಳಿದು ಸಮಾಧಾನವಾಯಿತು. ಟ್ರಂಪ್ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ದಾಳಿ ಮಾಡಿದವರು ನಿರಾಶೆಗೊಂಡಿದ್ದಾರೆ ಎಂದು ಹೇಳಿದರು.
ಡೊನಾಲ್ಡ್ ಟ್ರಂಪ್ ಅವರು ಶನಿವಾರ ರಾತ್ರಿ ಆಯೋಜಿಸಿದ್ದ ಭೋಜನ ಕೂಟದ ಭದ್ರತಾ ತಪಾಸಣೆ ಪ್ರದೇಶದ ಬಳಿ ನಡೆದ ಗುಂಡಿನ ದಾಳಿಯು ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಘಟನೆ ನಡೆದ ತಕ್ಷಣವೇ ಟ್ರಂಪ್ ಮತ್ತು ಇತರ ಗಣ್ಯರನ್ನು ಸ್ಥಳದಿಂದ ಸ್ಥಳಾಂತರಿಸಲಾಯಿತು. ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಬಂಧಿಸಲಾಗಿದ್ದು, ಉನ್ನತ ಮಟ್ಟದ ಭದ್ರತೆಯನ್ನು ಆತ ಉಲ್ಲಂಘಿಸಿದ್ದು ಹೇಗೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ದಾಳಿಯ ಕುರಿತು ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
Trump- Modi: ಪುಟಿನ್ ಭಾರತ ಭೇಟಿ ಬೆನ್ನಲ್ಲೇ ಮೋದಿಗೆ ಕರೆ ಮಾಡಿದ ಟ್ರಂಪ್! ಆಗಿದ್ದೇನು?
ದಾಳಿಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ. ವಾಷಿಂಗ್ಟನ್ ಡಿಸಿಯಲ್ಲಿ ಇತ್ತೀಚೆಗೆ ನಡೆದ ಭದ್ರತಾ ವೈಫಲ್ಯ ಘಟನೆಯ ಅನಂತರ ಅಧ್ಯಕ್ಷ ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಸಮಾಧಾನವಾಯಿತು. ಅವರ ನಿರಂತರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಶುಭ ಹಾರೈಸುತ್ತೇನೆ. ಈ ಘಟನೆಯನ್ನು ನಿಸ್ಸಂದಿಗ್ಧವಾಗಿ ಎಲ್ಲರೂ ಖಂಡಿಸಬೇಕು ಎಂದು ತಿಳಿಸಿದ್ದಾರೆ.
Relieved to learn that President Trump, the First Lady and Vice President are safe and unharmed following the recent security incident at a Washington DC hotel. I extend my best wishes for their continued safety and well-being. Violence has no place in a democracy and must be…
— Narendra Modi (@narendramodi) April 26, 2026
ಶ್ವೇತಭವನದ ವರದಿಗಾರರ ಸಂಘದ ವಾರ್ಷಿಕ ಭೋಜನ ಕೂಟದಲ್ಲಿ ಘಟನಾ ಸ್ಥಳದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇತರ ಉನ್ನತ ಅಧಿಕಾರಿಗಳು ಇದ್ದರು. ದಾಳಿ ನಡೆದ ತಕ್ಷಣ ಅವರನ್ನೆಲ್ಲಾ ಸ್ಥಳಾಂತರಿಸಲಾಯಿತು. ಬಳಿಕ ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಂಕಿತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಡೊನಾಲ್ಡ್ ಟ್ರಂಪ್ ಅನ್ನು "ಅಸ್ವಸ್ಥ ವ್ಯಕ್ತಿ" ಎಂದು ಕರೆದಿದ್ದಾನೆ ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಶಂಕಿತ ವ್ಯಕ್ತಿಯು ಸುಮಾರು 50 ಗಜ ದೂರದಿಂದ ದಾಳಿ ಮಾಡಿದ್ದಾನೆ. ಆತ ಭೋಜನ ಕೂಟ ಆಯೋಜಿಸಿದ್ದ ಕೋಣೆಯಿಂದ ಬಹಳ ದೂರದಲ್ಲಿದ್ದನು. ನಿರಂತರವಾಗಿ ಚಲಿಸುತ್ತಿದ್ದನು. ಆತ ಒಬ್ಬನೇ ಬಂದಿದ್ದನು ಎಂದು ಅಧಿಕಾರಿಗಳು ನಂಬಿದ್ದಾರೆ ಎಂಟು ಹೇಳಿದರು.
ಹೈ ಸೆಕ್ಯುರಿಟಿ ಇದ್ದರೂ ಶ್ವೇತಭವನಕ್ಕೆ ಎಂಟ್ರಿ; ಟ್ರಂಪ್ ಮೇಲೆ ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು?
ಶ್ವೇತಭವನದ ವರದಿಗಾರರ ಸಂಘದ ವಾರ್ಷಿಕ ಭೋಜನಕೂಟದಲ್ಲಿ ಟ್ರಂಪ್ ಅವರ ಸಂಪುಟದ ಅನೇಕ ಸದಸ್ಯರು ಮತ್ತು ಇತರ ಹಿರಿಯ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಹಿಲ್ಟನ್ ಹೊಟೇಲ್‌ನ ನೆಲಮಾಳಿಗೆಯ ಬಾಲ್ ರೂಂನಲ್ಲಿ ನಡೆಯುತ್ತಿತ್ತು. ದಾಳಿಯ ಬಳಿಕ ಭೋಜನ ಕೂಟವನ್ನು ರದ್ದುಗೊಳಿಸಲಾಯಿತು.