ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ದಾಳಿ ಬಳಿಕ ಸೌದಿ ಪ್ರವಾಸ ಮೊಟಕುಗೊಳಿಸಿದ ಪ್ರಧಾನಿ; ಪಾಕ್ ವಾಯುಪ್ರದೇಶ ಬಳಸದೇ ಭಾರತಕ್ಕೆ ವಾಪಾಸ್‌

Pahalgam Terror Attack: ಜಮ್ಮು ಕಾಶ್ಮೀರದಲ್ಲಿ ಧರ್ಮಾಂದ ಉಗ್ರರು ನರಮೇಧವನ್ನು ನಡೆಸಿದ್ದಾರೆ. ಪಹಲ್ಗಾಮ್ ನಲ್ಲಿ ನಿನ್ನೆ (ಮಂಗಳವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಸೌದಿ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಅವರು ಮಂಗಳವಾರ ತಡ ರಾತ್ರಿ ಭಾರತಕ್ಕೆ ಬಂದಿಳಿದಿದ್ದಾರೆ. ಸೌದಿ ಅರೇಬಿಯಾದಿಂದ ಹಿಂತಿರುಗುವಾಗ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ - ಏರ್ ಇಂಡಿಯಾ ಒನ್ - ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಬಂದಿಲ್ಲ.

ಸೌದಿಯಿಂದ ಪಾಕ್ ವಾಯುಪ್ರದೇಶ ಬಳಸದೇ ಭಾರತಕ್ಕೆ ಬಂದ ಮೋದಿ

Profile Vishakha Bhat Apr 23, 2025 2:21 PM

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಧರ್ಮಾಂದ ಉಗ್ರರು ನರಮೇಧವನ್ನು ನಡೆಸಿದ್ದಾರೆ. ಪಹಲ್ಗಾಮ್ ನಲ್ಲಿ ನಿನ್ನೆ (ಮಂಗಳವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಪ್ರಧಾನಿ ನರೇಂದ್ರ (Narendra Modi) ಮೋದಿ ಅವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದರು. ದಾಳಿಯನ್ನು ಅವರು ಖಂಡಿಸಿದ್ದು, ಇದೊಂದು ಹೇಯ ಕೃತ್ಯ. ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಹೇಳಿದ್ದರು. ಸೌದಿ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಅವರು ಮಂಗಳವಾರ ತಡ ರಾತ್ರಿ ಭಾರತಕ್ಕೆ ಬಂದಿಳಿದಿದ್ದಾರೆ. ಸೌದಿ ಅರೇಬಿಯಾದಿಂದ ಹಿಂತಿರುಗುವಾಗ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ - ಏರ್ ಇಂಡಿಯಾ ಒನ್ - ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಬಂದಿಲ್ಲ ಎನ್ನುವುದು ತಿಳಿದು ಬಂದಿದೆ.

ಮಂಗಳವಾರ ಬೆಳಿಗ್ಗೆ ರಿಯಾದ್‌ಗೆ ಪ್ರಯಾಣಿಸುವಾಗ ಪ್ರಧಾನಿ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ದಾಟಿ ಹೋಗಿತ್ತು. ಆದರೆ ವಾಪಾಸಾಗುವಾಗ ಬೇರೆ ಮಾರ್ಗದಿಂದ ಭಾರತ ತಲುಪಿದೆ. ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್‌ನ ದೃಶ್ಯಗಳು ದೃಢಪಡಿಸಿವೆ. ದೃಶ್ಯಗಳ ಪ್ರಕಾರ ಹಿಂದಿರುಗುವಾಗ ಅದು ಅರೇಬಿಯನ್ ಸಮುದ್ರದ ಮೇಲೆ ನೇರ ಮಾರ್ಗದಲ್ಲಿ ಹಾರಿತು, ನಂತರ ಭಾರತೀಯ ಪರ್ಯಾಯ ದ್ವೀಪವನ್ನು ದಾಟಿ - ಗುಜರಾತ್ ಮೂಲಕ ಪ್ರವೇಶಿಸಿತು. ನಂತರ ಉತ್ತರಕ್ಕೆ ದೆಹಲಿಗೆ ಹಿಂತಿರುಗಿತು. ಈ ಮಾರ್ಗವು ಪಾಕ್ ವಾಯುಪ್ರದೇಶವನ್ನು ತಪ್ಪಿಸಿತು.



ಈ ಮಾರ್ಗ ಬದಲಾವಣೆಯನ್ನು ಮುಖ್ಯವಾಗಿ ಸುರಕ್ಷತೆಯ ದೃಷ್ಟಿಯಿಂದ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನಿಯವರು ಮುಂಜಾನೆ ದೆಹಲಿಯ ಪಾಲಂ ವಾಯುಪಡೆ ನೆಲೆಯಲ್ಲಿ ಬಂದಿಳಿದ ತಕ್ಷಣ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಭೆ ನಡೆಸಿದರು. ದಾಳಿಯನ್ನು ಖಂಡಿಸಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, "ಈ ಹೇಯ ಕೃತ್ಯದ ಹಿಂದಿರುವವರನ್ನು ಬಿಡುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್‌ ದಾಳಿ; 26 ಜನರನ್ನು ಬಲಿ ಪಡೆದ ರಕ್ತಪಿಪಾಸುಗಳು ಇವರೇ ನೋಡಿ; ಉಗ್ರರ ಫೋಟೋ, ರೇಖಾಚಿತ್ರ ರಿಲೀಸ್‌

ಮೋದಿ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವ ಅಮಿತ್‌ ಶಾ ಅವರು ಮಂಗಳವಾರ ರಾತ್ರಿ ಶ್ರೀನಗರ ತಲುಪಿದ್ದಾರೆ. ಅಲ್ಲಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇದಕ್ಕೂ ಮೊದಲು ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜೆ & ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಜೆ & ಕೆ ಗವರ್ನರ್ ಮನೋಜ್ ಸಿನ್ಹಾ ಹಾಗೂ ರಾಜ್ಯ ಮತ್ತು ಫೆಡರಲ್ ಭದ್ರತಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ತುರ್ತು ವೀಡಿಯೊ ಕರೆ ಮಾಡಿದ್ದರು.