ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೊಲೀಸರು ಬೀಗ ಒಡೆದು, ಮನೆಗೆ ಪ್ರವೇಶಿಸಿ ಪ್ರತಿ ಕೊಠಡಿಯನ್ನು ಶೋಧಿಸಿದರು: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗಂಭೀರ ಆರೋಪ

ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆ ಸೋಲಿನ ಬಳಿಕ ತೃಣ ಮೂಲ ಕಾಂಗ್ರೆಸ್ ನಾಯಕರ ವಿರುದ್ಧ ತನಿಖಾ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಈಗಾಗಲೇ ಹಲವಾರು ಪ್ರಮುಖರ ಬಂಧನ ಕೂಡ ಆಗಿದೆ. ಇದೀಗ ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಎಂದೇ ಪರಿಗಣಿಸಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಇದನ್ನು ಅಭಿಷೇಕ್ ಬ್ಯಾನರ್ಜಿ, ಮಮತಾ ಬ್ಯಾನರ್ಜಿಯವರು ಖಂಡಿಸಿದ್ದಾರೆ.

ಮನೆಯಲ್ಲಿ ತೀವ್ರ ಶೋಧಕ್ಕೆ ಅಭಿಷೇಕ್ ಬ್ಯಾನರ್ಜಿ ಖಂಡನೆ

ಸಂಗ್ರಹ ಚಿತ್ರ -

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (Trinamool Congress National General Secretary), ಮಮತಾ ಬ್ಯಾನರ್ಜಿ (Mamatha banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (TMC leader Abhishek Banerjee) ಅವರ ನಿವಾಸದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಇದನ್ನು ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ ಅವರು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳ (west bengal) ವಿಧಾನ ಸಭಾ ಚುನಾವಣೆ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ತನಿಖಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಈಗಾಗಲೇ ಹಲವಾರು ಪ್ರಮುಖರ ಬಂಧನವನ್ನು ಕೂಡ ಮಾಡಲಾಗಿದೆ.

ಅಭಿಷೇಕ್ ಬ್ಯಾನರ್ಜಿ ಅವರ ಸಹಾಯಕ ಸುಮಿತ್ ರಾಯ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಲ್ಬನಿ ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆಯನ್ನು ನಡೆಸಿದರು.

ಭಾರತೀಯ ವಾಯುಪಡೆಯ AN-32 ಸಾರಿಗೆ ವಿಮಾನ ಪತನ; ಪೈಲಟ್‌ ಮೃತಪಟ್ಟಿರುವ ಶಂಕೆ

ಈ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, ನಾನು ಏನನ್ನಾದರೂ ಮರೆಮಾಡುತ್ತಿದ್ದೇನೆಯೇ? ಮನೆಯಲ್ಲಿ ಶೋಧ ನಡೆಸುವುದು ಏನಿದೆ ಎಂದು ಪ್ರಶ್ನಿಸಿರುವ ಅವರು ಶೋಧದ ಬಗ್ಗೆ ತನಿಖಾ ಸಂಸ್ಥೆಗಳನ್ನು ಕೇಳಬಹುದು ಎಂದರು.

ಪಶ್ಚಿಮ ಬಂಗಾಳದಾದ್ಯಂತ ತೃಣ ಮೂಲ ಕಾಂಗ್ರೆಸ್ ಪಕ್ಷದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ನಡುವೆ ತಮ್ಮ ಮನೆ ಮೇಲೆ ನಡೆದಿರುವ ದಾಳಿಯಿಯನ್ನು ಖಂಡಿಸಿರುವ ಅಭಿಷೇಕ್ ಬ್ಯಾನರ್ಜಿ, ಪೊಲೀಸರು ಮನೆ ಬೀಗವನ್ನು ಒಡೆದು, ಮನೆಯೊಳಗೆ ಪ್ರವೇಶಿಸಿ, ಪ್ರತಿ ಕೊಠಡಿಯನ್ನು ಶೋಧಿಸಿದರು ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಇದು ರಾಜಕೀಯ ಊಹಾಪೋಹಗಳನ್ನು ಮತ್ತಷ್ಟು ಹೆಚ್ಚಿಸಿತ್ತು. ಒಂದೆಡೆ ಚುನಾವಣೆ ಸೋಲು, ಇನ್ನೊಂದೆಡೆ ಪಕ್ಷದಲ್ಲಿ ಉಂಟಾಗಿರುವ ಒಡಕಿನ ನಡುವೆ ಪೊಲೀಸರ ದಾಳಿ ಪಕ್ಷದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ಅಭಿಷೇಕ್ ಮನೆ ಮೇಲೆ ದಾಳಿ

ಡೈಮಂಡ್ ಹಾರ್ಬರ್ ಸಂಸದರ ಆಪ್ತ ಸಹಾಯಕ ಸುಮಿತ್ ರಾಯ್ ಅವರನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಮೇದಿನಿಪುರದ ಶಲ್ಬಾನಿ ಪೊಲೀಸ್ ಠಾಣೆಯ ತಂಡಗಳು ಕೋಲ್ಕತ್ತಾ ಪೊಲೀಸರು ಮತ್ತು ಕೇಂದ್ರೀಯ ಪಡೆಯೊಂದಿಗೆ ಕೋಲ್ಕತ್ತಾದ ಪಟುವಾಪರಾ ಪ್ರದೇಶದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಶನಿವಾರ ಬೆಳಗ್ಗೆ 3 ಗಂಟೆಯ ಸುಮಾರಿಗೆ ದಾಳಿ ನಡೆಸಿತ್ತು. ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ಶೋಧ ಕಾರ್ಯ ನಡೆಸಿದೆ. ಅಭಿಷೇಕ್ ಮನೆಗೆ ಪೊಲೀಸರು ದಾಳಿ ನಡೆಸಿರುವ ಸುದ್ದಿ ತಿಳಿದ ತಕ್ಷಣವೇ ಮಮತಾ ಬ್ಯಾನರ್ಜಿ ಅಲ್ಲಿಗೆ ಆಗಮಿಸಿ, ಸ್ವಲ್ಪ ಸಮಯ ಕಳೆದರು.

ಕಾರ್ಯಾಚರಣೆಯ ವೇಳೆ ಸಹಾಯಕರಿಗೆ ಅಭಿಷೇಕ್ ಅವರ ನಿವಾಸದಲ್ಲಿ ಆಶ್ರಯ ನೀಡಲಾಗಿದೆಯೇ ಎಂಬುದನ್ನು ಪೊಲೀಸರು ಪ್ರಶ್ನಿಸಿದ್ದರು. ಆದರೆ ಅವರು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು ಎನ್ನಲಾಗಿದೆ. ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಕರಣದ ಕುರಿತು ನಿಖರವಾದ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಇದು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದೆ.

ಸಿಐಡಿ ಬೆನ್ನಲ್ಲೇ ಮತ್ತೊಂದು ದಾಳಿ

ಎರಡು ದಿನಗಳ ಹಿಂದೆಯಷ್ಟೇ ಅಭಿಷೇಕ್ ಬ್ಯಾನರ್ಜಿ ಅವರು ಸಿಐಡಿ ಮುಂದೆ ಹಾಜರಾಗಿದ್ದರು. ವಿಧಾನಸಭೆ ಸಹಿ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಆರು ಗಂಟೆಗಳ ಕಾಲ ಅವರನ್ನು ಪಶ್ಚಿಮ ಬಂಗಾಳ ಸಿಐಡಿ ವಿಚಾರಣೆ ನಡೆಸಿತ್ತು. ತಕ್ಷಣದ ಬಂಧನದಿಂದ ಕಲ್ಕತ್ತಾ ಹೈಕೋರ್ಟ್ ಅವರಿಗೆ ರಕ್ಷಣೆಯನ್ನು ನೀಡಿದ್ದರೂ ಕೂಡ ತನಿಖಾಧಿಕಾರಿಗಳೊಂದಿಗೆ ಸಹಕರಿಸುವಂತೆ ನಿರ್ದೇಶನವನ್ನು ನೀಡಿತ್ತು.

ಇಡಿ ದಾಳಿ

ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದರೂ ಇದರಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವನ್ನು ಟಿಎಂಸಿ ಮಾಡಿದೆ. ಪುರಸಭೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ವಿಚಾರವಾಗಿ ಟಿಎಂಸಿಯ ಹಿರಿಯ ನಾಯಕ ಮತ್ತು ಶಾಸಕ ಮದನ್ ಮಿತ್ರಾ ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ಪಕ್ಷದ ಮೇಲೆ ತೀವ್ರ ಒತ್ತಡವನ್ನು ಉಂಟು ಮಾಡಿದೆ.

ಮತ್ತೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ; ಏರ್ಪೋರ್ಟ್‌ ರೋಡ್‌ನಲ್ಲಿ ಡ್ರಾಫ್ಟಿಂಗ್‌

ಈ ನಡುವೆ ಟಿಎಂಸಿಯ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದಲ್ಲಿ ಆಗಿರುವ ಬಿಕ್ಕಟ್ಟಿಗೆ ಅಭಿಷೇಕ್ ಬ್ಯಾನರ್ಜಿಯೇ ಕಾರಣ ಎಂದು ಆರೋಪಿಸಿದ್ದಾರೆ. ಅವರ ದುರಹಂಕಾರದಿಂದಲೇ ಇಷ್ಟೆಲ್ಲ ನಡೆದಿದೆ. ಆತ ನನ್ನ ಮಗನಂತೆ. ಹೀಗಾಗಿ ತಪ್ಪನ್ನು ಹೇಳುವ ಅಧಿಕಾರವಿದೆ. ನಾಯಕರು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.