ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಮೋದಿ ಜತೆ ಇರು ಎಂದಿದ್ದರು ಪ್ರಣಬ್ ಮುಖರ್ಜಿʼʼ: ಸುವೇಂದು ಅಧಿಕಾರಿ ಹೇಳಿಕೆ ತಳ್ಳಿಹಾಕಿದ ಅಭಿಜಿತ್ ಮುಖರ್ಜಿ

Suvendu Adhikari: ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಟಿಎಂಸಿ ತೊರೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ಕೈಜೋಡಿಸುವಂತೆ ತಮಗೆ ಸಲಹೆ ನೀಡಿದ್ದರು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹೇಳಿಕೆಯನ್ನು ಪ್ರಣಬ್ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ತಳ್ಳಿ ಹಾಕಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ತಮ್ಮ ಕುಟುಂಬದ 130 ವರ್ಷಗಳ ಹಳೆಯ ದುರ್ಗಾ ಪೂಜೆ ಸಂಪ್ರದಾಯಕ್ಕೂ ಅಡ್ಡಿಪಡಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುವೇಂದು ಅಧಿಕಾರಿ ಹೇಳಿಕೆ ತಳ್ಳಿಹಾಕಿದ ಅಭಿಜಿತ್ ಮುಖರ್ಜಿ

ಅಭಿಜಿತ್ ಮುಖರ್ಜಿ, ಪ್ರಣಬ್ ಮುಖರ್ಜಿ, ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ) -

Jyoti S
Jyoti S Nov 26, 2026 4:49 PM

ನವದೆಹಲಿ, ನ. 26: ಟಿಎಂಸಿ ತೊರೆದು ಬಿಜೆಪಿ ಸೇರಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾಗಲು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ (Pranab Mukherjee) ತಮಗೆ ಸಲಹೆ ನೀಡಿದ್ದರು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಹೇಳಿಕೆಯನ್ನು ಪ್ರಣಬ್ ಪುತ್ರ ಹಾಗೂ ಮಾಜಿ ಸಂಸದ ಅಭಿಜಿತ್ ಮುಖರ್ಜಿ ತಳ್ಳಿಹಾಕಿದ್ದಾರೆ. ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ 66 ವರ್ಷದ ಅಭಿಜಿತ್ ಮುಖರ್ಜಿ, ಸುವೇಂದು ಅಧಿಕಾರಿ ಅವರ ಈ ಹೇಳಿಕೆಯನ್ನು ಅಸಂಬದ್ಧ ಎಂದು ಬಣ್ಣಿಸಿದ್ದು, ತಮ್ಮ ತಂದೆಯಿಂದ ಇಂತಹ ಸಲಹೆ ಪಡೆಯುವಷ್ಟು ಸುವೇಂದು ಅಧಿಕಾರಿ ಹಿರಿಯ ನಾಯಕರಾಗಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ, ಬಿರ್ಭೂಮ್ ಜಿಲ್ಲೆಯ ಮಿರಾಟಿ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ನಡೆದ 2026ರ ದುರ್ಗಾ ಪೂಜೆ ವೇಳೆ, ನೀರಾವರಿ ಇಲಾಖೆಯು ಕಂದೋರ್ ಕಾಲುವೆಗೆ ನೀರು ಬಿಡದ ಕಾರಣ 130 ವರ್ಷಗಳ ಹಳೆಯ 'ಕೊಲಾಬೌ ಸ್ನಾನ' ಮತ್ತು ದುರ್ಗಾ ಪ್ರತಿಮೆ ವಿಸರ್ಜನಾ ಸಂಪ್ರದಾಯವನ್ನು ಕೈಬಿಡುವಂತೆ ಸುವೇಂದು ಸರ್ಕಾರ ಒತ್ತಾಯಿಸಿದೆ ಎಂದೂ ಅಭಿಜಿತ್ ಮುಖರ್ಜಿ ಗಂಭೀರ ಆರೋಪ ಮಾಡಿದ್ದಾರೆ. 2011ರಲ್ಲಿ ಕಾಂಗ್ರೆಸ್ ಶಾಸಕರಾಗಿ, ಬಳಿಕ ಜಂಗೀಪುರದಿಂದ ಎರಡು ಬಾರಿ ಸಂಸದರಾಗಿ, 2021ರಲ್ಲಿ ಟಿಎಂಸಿ ಸೇರಿ ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದ ಅಭಿಜಿತ್ ಅವರ ಈ ಹೇಳಿಕೆಗಳು ಇದೀಗ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿವೆ.

ಸುವೇಂದು ಅಧಿಕಾರಿ ನೀಡಿದ್ದ ಹೇಳಿಕೆ ವಿಡಿಯೊ ನೋಡಿ:



ಸುವೇಂದು ಅಧಿಕಾರಿ ನೀಡಿದ್ದ ವಿವಾದಾತ್ಮಕ ಹೇಳಿಕೆ

ಇತ್ತೀಚೆಗೆ 'ದಿ ಎಕನಾಮಿಕ್ ಟೈಮ್ಸ್ ಬೆಂಗಾಲ್ ಅಸೆಂಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುವೇಂದು ಅಧಿಕಾರಿ, ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದ ವೇಳೆ (2012-2017) ರೈಸಿನಾ ಹಿಲ್‌ನಲ್ಲಿ ಭೇಟಿಯಾದಾಗ, ಟಿಎಂಸಿಯಲ್ಲಿ ಉದ್ಯೋಗಿಯಾಗಿ ಉಳಿಯುವ ಬದಲು ಸ್ವಂತ ಬಲದಲ್ಲಿ ಮುಂದುವರಿಯುವುದಾದರೆ ಮೋದಿಜಿಯವರ ಜತೆ ಸೇರುವಂತೆ ಸಲಹೆ ನೀಡಿದ್ದರು ಎಂದು ಹೇಳಿಕೊಂಡಿದ್ದರು. ಜತೆಗೆ ಟಿಎಂಸಿಯನ್ನು "ಬುವಾ-ಭತೀಜಾ ಪಾರ್ಟಿ" (ಅತ್ತೆ-ಸೋದರಳಿಯ ಪಕ್ಷ) ಹಾಗೂ ಕಾರ್ಪೊರೇಟ್ ಮಾದರಿಯ ಪಕ್ಷ ಎಂದು ಟೀಕಿಸಿದ್ದರು. ಆದರೆ, 2020ರ ಆಗಸ್ಟ್‌ನಲ್ಲಿ ಪ್ರಣಬ್ ಮುಖರ್ಜಿ ನಿಧನರಾದ ಬಳಿಕ ಡಿಸೆಂಬರ್‌ನಲ್ಲಿ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.

ಪಶ್ಚಿಮ ಬಂಗಾಳ ಹೆಸರು ಬದಲಾವಣೆ: ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಿಂದ ಮಹತ್ವದ ಹೆಜ್ಜೆ

30 ವರ್ಷಗಳ ದುರ್ಗಾ ಪೂಜೆ ಸಂಪ್ರದಾಯಕ್ಕೆ ಅಡ್ಡಿ ಆರೋಪ

ರಾಜಕೀಯ ಸಲಹೆಯ ವಿವಾದದ ಬೆನ್ನಲ್ಲೇ, ಬಂಗಾಳದ ಬಿಜೆಪಿ ಸರ್ಕಾರ ತಮ್ಮ ಕುಟುಂಬದ ಶತಮಾನದಷ್ಟು ಹಳೆಯ ಧಾರ್ಮಿಕ ಸಂಪ್ರದಾಯಗಳಿಗೆ ಅಡ್ಡಿಪಡಿಸಿದೆ ಎಂದೂ ಅಭಿಜಿತ್ ಮುಖರ್ಜಿ ಆರೋಪಿಸಿದ್ದಾರೆ. ಬಿರ್ಭೂಮ್ ಜಿಲ್ಲೆಯ ಮಿರಾಟಿ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ನಡೆದ 2026ರ ದುರ್ಗಾ ಪೂಜೆ ವೇಳೆ, ನೀರಾವರಿ ಇಲಾಖೆಯು ಕಂದೋರ್ ಕಾಲುವೆಗೆ ನೀರು ಬಿಡದ ಕಾರಣ 130 ವರ್ಷಗಳ ಹಳೆಯ 'ಕೊಲಾಬೌ ಸ್ನಾನ' ಮತ್ತು ದುರ್ಗಾ ಪ್ರತಿಮೆ ವಿಸರ್ಜನಾ ಸಂಪ್ರದಾಯವನ್ನು ಕೈಬಿಡುವಂತೆ ಸುವೇಂದು ಸರ್ಕಾರ ಒತ್ತಾಯಿಸಿದೆ ಎಂದು ಅವರು ದೂರಿದ್ದಾರೆ. ಆಗಸ್ಟ್ 2020ರಲ್ಲಿ 84ನೇ ವಯಸ್ಸಿನಲ್ಲಿ ನಿಧನರಾದ ಪ್ರಣಬ್ ಮುಖರ್ಜಿ, ಪ್ರತಿವರ್ಷ ಮಿರಾಟಿ ಗ್ರಾಮಕ್ಕೆ ತೆರಳಿ ನಾಲ್ಕು ದಿನಗಳ ದುರ್ಗಾ ಪೂಜೆ ವಿಧಿವಿಧಾನಗಳನ್ನು ಸ್ವತಃ ನೆರವೇರಿಸುತ್ತಿದ್ದರು.

ಅಭಿಜಿತ್ ಮುಖರ್ಜಿ ರಾಜಕೀಯ ಪಯಣ

2011ರಲ್ಲಿ ಬಿರ್ಭೂಮ್‌ನ ನಲ್ಹಾಟಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ರಾಜಕೀಯ ಪ್ರವೇಶಿಸಿದ ಅಭಿಜಿತ್ ಮುಖರ್ಜಿ, ಪ್ರಣಬ್ ಅವರು ರಾಷ್ಟ್ರಪತಿಯಾದ ಬಳಿಕ ಜಂಗೀಪುರ ಲೋಕಸಭಾ ಉಪಚುನಾವಣೆ ಹಾಗೂ 2014ರಲ್ಲಿ ಗೆದ್ದು ಎರಡು ಅವಧಿಗೆ ಸಂಸದರಾಗಿದ್ದರು (2019ರಲ್ಲಿ ಸೋಲು). 2021ರ ವಿಧಾನಸಭಾ ಚುನಾವಣೆ ಬಳಿಕ ಟಿಎಂಸಿ ಸೇರಿದ್ದ ಅವರು, ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿ, ಟಿಎಂಸಿ ಸೇರ್ಪಡೆಯನ್ನು ತಪ್ಪು ನಿರ್ಧಾರ ಎಂದು ಕರೆದಿದ್ದರು. ಇದೀಗ ಅವರ ಹೇಳಿಕೆಗಳು ಬಂಗಾಳ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.