ಪುರಿ ವಾರ್ಷಿಕ ರಥಯಾತ್ರೆ ವೇಳೆ ಭಕ್ತರ ನೆರವಿಗೆ ಧಾವಿಸಿದ ರಿಲಯನ್ಸ್ ಫೌಂಡೇಷನ್; ಅನ್ನ ದಾನ, ಪೊಲೀಸ್ ಸಹಾಯ ಕೇಂದ್ರ, ಜಾಗೃತಿ ಸೇರಿ ವಿವಿಧ ಸೇವೆ
Reliance Foundation: ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಪುರಿ ಜಗನ್ನಾಥ ವಾರ್ಷಿಕ ರಥಯಾತ್ರೆಯಲ್ಲಿ ರಿಲಯನ್ಸ್ ಫೌಂಡೇಷನ್‌ನಿಂದ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಆಡಳಿತದ ಜತೆಗೆ ಕೈ ಜೋಡಿಸಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಪುರಿ ಜಗನ್ನಾಥ ದೇವಸ್ಥಾನ -
ಭುವನೇಶ್ವರ, ಜು. 15: ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಪುರಿ ಜಗನ್ನಾಥ ವಾರ್ಷಿಕ ರಥಯಾತ್ರೆಯಲ್ಲಿ ರಿಲಯನ್ಸ್ ಫೌಂಡೇಷನ್‌ನಿಂದ (Reliance Foundation) ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಆಡಳಿತದ ಜತೆಗೆ ಕೈ ಜೋಡಿಸಲಾಗಿದೆ. ಅದಕ್ಕಾಗಿ ಸಮಗ್ರ ಪುರಿ ರಥ ಯಾತ್ರೆ ಸೇವಾ 2026 ಅನ್ನು ರಿಲಯನ್ಸ್ ಫೌಂಡೇಷನ್ ವತಿಯಿಂದ ಭಕ್ತರಿಗೆ, ಮುಂಚೂಣಿಯಲ್ಲಿನ ಅಧಿಕಾರಿಗಳಿಗೆ ಮತ್ತು ನಾಗರಿಕ ಸೇವಾ ಅಧಿಕಾರಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಇದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಸೇವೆ ಒದಗಿಸಿದಂತೆ ಆಗುತ್ತದೆ.
ರಿಲಯನ್ಸ್ ಫೌಂಡೇಷನ್‌ನ ಸೇವಾ ಉಪಕ್ರಮಗಳು
ಅನ್ನ ಸೇವೆ: ಜುಲೈ 15ರಿಂದ 27ರವರೆಗೆ ಕೇಂದ್ರೀಯ ಅಡುಗೆಮನೆಯ (Central Kitchen) ಮೂಲಕ ಯಾತ್ರಿಕರಿಗೆ ಮತ್ತು ಮುಂಚೂಣಿ ಸಿಬ್ಬಂದಿಗೆ ತಾಜಾವಾಗಿ ತಯಾರಿಸಿದ ಸಾತ್ವಿಕ ಆಹಾರ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಪುರಿಯ ಗ್ರ್ಯಾಂಡ್ ರೋಡ್‌ನಲ್ಲಿರುವ ಭೋಲಾನಾಥ್ ಪ್ರೌಢಶಾಲೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಸೇವಾ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಟೆಕ್ ಫಾರ್ ಸೇವಾ - ಪುರಿ ಅನ್ನಸೇವಾ 2026 ಜಿಐಎಸ್ ವೇದಿಕೆ: ಜಿಐಎಸ್ (GIS) ಆಧಾರಿತ ಈ ತಂತ್ರಜ್ಞಾನ ವೇದಿಕೆಯು ಸೇವಾ ಚಟುವಟಿಕೆಗಳ ಯೋಜನೆ, ಉಸ್ತುವಾರಿ, ಪರಿಶೀಲನೆ ಮತ್ತು ದಾಖಲೀಕರಣಕ್ಕೆ ಬೆಂಬಲ ನೀಡುತ್ತದೆ. ಜತೆಗೆ, ಇದು ಕ್ಷೇತ್ರ ಸಮನ್ವಯ ಹಾಗೂ ಕಾರ್ಯಾಚರಣೆಯ ನಿರ್ಧಾರ ಕೈಗೊಳ್ಳುವಿಕೆ ಬಲಪಡಿಸುತ್ತದೆ.
ಪೊಲೀಸ್ ಸಹಾಯ ಕೇಂದ್ರಗಳು: ದೇವಾಲಯದ ಪ್ರವೇಶ ಮಾರ್ಗಗಳು, ಸಾರಿಗೆ ಕೇಂದ್ರಗಳು, ವೈದ್ಯಕೀಯ ವಲಯಗಳು, ಪ್ರಮುಖ ಜಂಕ್ಷನ್‌ಗಳು ಮತ್ತು ಕರಾವಳಿ ಪ್ರದೇಶಗಳು ಸೇರಿದಂತೆ 50 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಪ್ರಮುಖ ಯಾತ್ರಾ ಮಾರ್ಗಗಳಲ್ಲಿ ಸುಮಾರು 90 ಪೊಲೀಸ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡಲಾಗುತ್ತಿದೆ.
ಮುಂಚೂಣಿ ಸಿಬ್ಬಂದಿಗೆ ಬೆಂಬಲ: ಸುದೀರ್ಘ ಕರ್ತವ್ಯದ ಸಮಯದಲ್ಲಿ ಪಾಳಿ (ಶಿಫ್ಟ್) ಆಧಾರದ ಮೇಲೆ ಕೆಲಸ ಮಾಡುವ ಸುಮಾರು 1,000 ಪೊಲೀಸ್ ಸಿಬ್ಬಂದಿಗೆ ನೀರು, ಒಆರ್‌ಎಸ್ (ORS), ಉಪಾಹಾರ ಮತ್ತು ಇತರ ಅಗತ್ಯ ನೆರವುಗಳನ್ನು ಒದಗಿಸಲು ಈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಜನಸಂದಣಿ ನಿರ್ವಹಣೆ ಮತ್ತು ಸ್ವಯಂಸೇವಕರ ಬೆಂಬಲ: ಸ್ವಯಂಸೇವಕರು ಯಾತ್ರಿಕರಿಗೆ ಮಾರ್ಗದರ್ಶನ, ಸುರಕ್ಷತಾ ಬೆಂಬಲ ಮತ್ತು ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ.
ಸ್ವಚ್ಛತಾ ಅಭಿಯಾನ: ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಪುರಿ ಪುರಸಭೆಯ ಮೂಲಕ ನೈರ್ಮಲ್ಯ ತಂಡಗಳು, ಸ್ವಯಂಸೇವಕರು ಮತ್ತು ಯಾತ್ರಿಕರ ಸೇವಾ ಸಂಸ್ಥೆಗಳಿಗೆ ಕಸದ ಚೀಲಗಳು ಹಾಗೂ ರಕ್ಷಣಾತ್ಮಕ ಕೈಗವಸುಗಳನ್ನು ವಿತರಿಸಲಾಗುತ್ತಿದೆ.
ಸಮುದಾಯದ ತಲುಪುವಿಕೆ ಮತ್ತು ಜಾಗೃತಿ: ಯಾತ್ರಿಕರು ಮತ್ತು ಸ್ಥಳೀಯ ಸಮುದಾಯಕ್ಕಾಗಿ ಆರೋಗ್ಯ, ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್
ಯಾತ್ರಿಕರ ಅನುಭವವನ್ನು ಉತ್ತಮಗೊಳಿಸುವುದು: ಈ ಎಲ್ಲ ಉಪಕ್ರಮಗಳು ಒಟ್ಟಾಗಿ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸುರಕ್ಷಿತ ಮತ್ತು ಶಿಸ್ತುಬದ್ಧ ಸಂಚಾರಕ್ಕೆ ಹಾದಿ ಸುಗಮಗೊಳಿಸಲಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಈ ಕುರಿತು ಮಾತನಾಡಿ, ʼಮಾನವ ಸೇವೆಯೇ ಮಾಧವ ಸೇವೆ (ಜನರ ಸೇವೆಯೇ ದೇವರ ಸೇವೆ). ಇದನ್ನು ನಾವು ಆಳವಾಗಿ ನಂಬುತ್ತೇವೆ. ಲಕ್ಷಾಂತರ ಜನರು ಒಟ್ಟುಗೂಡುವ ಇಂತಹ ಸಂದರ್ಭಗಳಲ್ಲಿ ಜನರಿಗೆ ಸೇವೆ ಸಲ್ಲಿಸುವ ನಮ್ಮ ಸುದೀರ್ಘ ಬದ್ಧತೆಯನ್ನು ಮುಂದುವರಿಸುತ್ತಾ, ಈ ವರ್ಷ ಪುರಿಯಲ್ಲಿ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದನ್ನು ನಾವು ನಿಜಕ್ಕೂ ಒಂದು ಆಶೀರ್ವಾದ ಎಂದು ಭಾವಿಸುತ್ತೇವೆ. ರಥಯಾತ್ರೆಯ ಸಮಯದಲ್ಲಿ ಯಾತ್ರಿಕರಿಗೆ ಮತ್ತು ಸಿಬ್ಬಂದಿಗೆ ಸೇವೆ ಸಲ್ಲಿಸುವ ಮೂಲಕ, ನಾವು ದೇವರಿಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಂಬುತ್ತೇವೆ. ಯಾತ್ರಾರ್ಥಿಗಳ ಪ್ರಯಾಣವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ, ಆಡಳಿತ ಮಂಡಳಿಗೆ ನೆರವಿನ ಹಸ್ತ ಚಾಚಲು, ಪೌಷ್ಟಿಕಾಂಶ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆʼ ಎಂದು ತಿಳಿಸಿದ್ದಾರೆ.