ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಂದೂ ಧರ್ಮವನ್ನು ಕಾಪಾಡುವಲ್ಲಿ RSS ಪಾತ್ರ ಮಹತ್ವದ್ದು; ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು

ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಬಿಜೆಪಿಯ ಯಶಸ್ಸಿಗೆ ಸಂಘದ ಶಿಸ್ತು ಮತ್ತು ಸಂಘಟನಾ ಶಕ್ತಿಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಧರ್ಮವನ್ನು ಕಾಪಾಡುವಲ್ಲಿ RSS ಪಾತ್ರ ಮಹತ್ವದ್ದು; ಮೋಹನ್ ಭಾಗವತ್

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 20, 2026 11:08 AM

ನಾಗ್ಪುರ: ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಅವರು ಹೇಳಿದ್ದಾರೆ. ರೇಷ್ಮಿಬಾಗ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಉತ್ಸವ ಹಾಗೂ ಶಸ್ತ್ರ ಪೂಜೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

"ಬಿಜೆಪಿಯ ಯಶಸ್ಸಿಗೆ ಸಂಘದ ಶಿಸ್ತು ಮತ್ತು ಸಂಘಟನಾ ಶಕ್ತಿಯೇ ಕಾರಣ. ಹಿಂದೂ ಧರ್ಮವನ್ನು ಜೀವಂತವಾಗಿರಸಲು ಸಂಘವು ನಿರ್ಣಾಯಕ ಪಾತ್ರ ವಹಿಸಿದೆ. ಆ ನಿರಂತರ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಪ್ರಯತ್ನವಿಲ್ಲದಿದ್ದರೆ, ಧರ್ಮವು ಇನ್ನೂ ಹೆಚ್ಚಿನ ಸವೆತವನ್ನು ಎದುರಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ 101ನೇ ವರ್ಷದ ಸಂಸ್ಥಾಪನಾ ದಿನ ಹಾಗೂ ವಿಜಯದಶಮಿ ಉತ್ಸವದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ಪ್ರಸ್ತಾಪಿಸಿದ ಸಂತ ರವಿದಾಸ್ ಅವರ ಸಂದೇಶಗಳ ಕುರಿತು ಅವರು ಮಾತನಾಡಿ, ವಿದೇಶಿ ಆಕ್ರಮಣಕಾರರು ದೇಶದ ಮೇಲೆ ದಾಳಿ ಮಾಡಿ, ಭಾರತೀಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಕಠಿಣ ಕಾಲದಲ್ಲಿ ಸಂತ ರವಿದಾಸ್ ಅವರು ಯಾವುದೇ ಭಯವಿಲ್ಲದೆ ಭಕ್ತಿ ಮತ್ತು 'ಸ್ವಧರ್ಮ ನಿಷ್ಠೆ'ಯನ್ನು ಜಾಗೃತಗೊಳಿಸಿದರು.

ವಿಡಿಯೋ ನೋಡಿ



ಭಯದ ವಾತಾವರಣದ ನಡುವೆಯೂ ತಮ್ಮ ಸ್ವಂತ ಜೀವನದ ಉದಾಹರಣೆಗಳ ಮೂಲಕ ಇಡೀ ಹಿಂದೂ ಸಮಾಜಕ್ಕೆ ಧೈರ್ಯ ತುಂಬಿದರು ಮತ್ತು ಜನರ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಮನೋಬಲವನ್ನು ಎತ್ತಿಹಿಡಿದರು.ಸಮಾಜದಲ್ಲಿನ ಮೇಲು-ಕೀಳು ಎಂಬ ಭೇದಭಾವವನ್ನು ತೊಡೆದುಹಾಕಲು ಸಂತ ರವಿದಾಸ್ ಅವರು ನೀಡಿದ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರ ಮೂಲಕ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.

‘ಹಿಂದುತ್ವದ ಹೆಸರಿನಲ್ಲಿ ಧಾರ್ಮಿಕ ವಿಭಜನೆ’;RSS, VHP ವಿರುದ್ಧ ದಿಗ್ವಿಜಯ್ ಸಿಂಗ್ ಆರೋಪ

ಒಡಿಶಾದ ವನವಾಸಿ ಸಮುದಾಯಗಳಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಭಾಗವತ್ ಉಲ್ಲೇಖಿಸಿದ್ದಾರೆ. "ಪ್ರಸ್ತುತ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಅವರು ಒಡಿಶಾದ ವನವಾಸಿ ಸಮುದಾಯಗಳ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಸ್ವಂತ ನಂಬಿಕೆಯನ್ನು ರಕ್ಷಿಸುವ ಅಗತ್ಯತೆಯ ಅರಿವನ್ನು ಅವರಲ್ಲಿ ಜಾಗೃತಗೊಳಿಸುವಾಗ ತಮ್ಮ ಜೀವನವನ್ನು ತ್ಯಾಗ ಮಾಡಿದರು ಎಂದು ಹೇಳಿದ್ದಾರೆ.