ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಪದವಿಧರ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಬಿರುಸಿನ ಪ್ರಚಾರ: ಅಹಿಂದ ವರ್ಗಗಳ ಪದವಿಧರ ಮತದಾರರ ಬೆಂಬಲದ ವಿಶ್ವಾಸ

ನಿವೃತ್ತ ವೈದ್ಯಾಧಿಕಾರಿ, ಅಹಿಂದ ವರ್ಗಗಳ ಜಾಗೃತಿ ವೇದಿಕೆ ಅಧಕ್ಷರಾದ ಡಾ.ಬಿ. ಯಲ್ಲಪ್ಪ ಅವರು ಚಿಕ್ಕರಾಜು ಎಸ್. ಯಾದವ್ ಅವರನ್ನು ಬೆಂಬಲಿಸಿ ಕೆಲಸ ಮಾಡುತ್ತಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ ಅಹಿಂದ ವರ್ಗವು ಚಿಕ್ಕರಾಜು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಚಿಕ್ಕರಾಜು ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಪದವಿಧರ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಬಿರುಸಿನ ಪ್ರಚಾರ

-

Profile
Ashok Nayak Oct 20, 2026 12:05 PM

ತುಮಕೂರು: ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಕೀಲ ವೃತ್ತಿ ಮಾಡುತ್ತಿರುವ ನಗರದ ಚಿಕ್ಕರಾಜು, ಆಗ್ನೇಯ ಪದವಿಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಕ್ಷೇತ್ರದೆಲ್ಲೆಡೆ ವ್ಯಾಪಕ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ.

ಚಿಕ್ಕರಾಜು ಅವರು ಹಲವು ವರ್ಷಗಳಿಂದ ಅಹಿಂದ ವರ್ಗಗಳ ಜಾಗೃತಿ ವೇದಿಕೆಯಲ್ಲಿ ಸಕ್ರಿಯ ವಾಗಿ ಚಟುವಟಿಕೆಯಲ್ಲಿದ್ದು, ಆ ವರ್ಗದ ಸಂಘಟನೆ ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆ ಯಲ್ಲಿ ಅಹಿಂದ ವರ್ಗದ ಪದವಿಧರ ಮತದಾರರು ತಮ್ಮ ಬೆಂಬಲಕ್ಕಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tumkur Dasara: ತುಮಕೂರು ದಸರಾ ಕುಸ್ತಿ ಪಂದ್ಯಾವಳಿ: ಪ್ರಥಮ ಸ್ಥಾನ ಪಡೆದ ದೇಶದ ಗರಡಿಮನೆಯ ಕುಸ್ತಿಪಟು ಸಂತೋಷ್

ನಿವೃತ್ತ ವೈದ್ಯಾಧಿಕಾರಿ, ಅಹಿಂದ ವರ್ಗಗಳ ಜಾಗೃತಿ ವೇದಿಕೆ ಅಧಕ್ಷರಾದ ಡಾ.ಬಿ. ಯಲ್ಲಪ್ಪ ಅವರು ಚಿಕ್ಕರಾಜು ಎಸ್. ಯಾದವ್ ಅವರನ್ನು ಬೆಂಬಲಿಸಿ ಕೆಲಸ ಮಾಡುತ್ತಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ ಅಹಿಂದ ವರ್ಗವು ಚಿಕ್ಕರಾಜು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಚಿಕ್ಕರಾಜು ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಶಿಕ್ಷಕರು, ವಕೀಲರು, ಉಪನ್ಯಾಸಕರು, ಬ್ಯಾಂಕ್ ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳು, ವಿವಿಧ ಕಚೇರಿಗಳಿಗೆ ತೆರಳಿ ಪದವಿಧರ ಮತದಾರರನ್ನು ಖುದ್ದು ಭೇಟಿ ಮಾಡಿ, ಈ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿರುವುದಾಗಿ ಹೇಳಿದ್ದಾರೆ.

ತುಮಕೂರು ವಿಶ್ವವಿದ್ಯಾಲಯ(Tumkur University) ಆವರಣದಲ್ಲಿ ವಾಯುವಿಹಾರಕ್ಕೆ ಬಂದಿದ್ದ ಪದವಿಧರ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.