ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೀನಾಗೆ ತೆರಳಬೇಕಿದ್ದ ಹಡಗು ಯೂ ಟರ್ನ್: ಮಾರ್ಚ್‌ 21ರಂದು ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

Russian oil tanker: ಚೀನಾಕ್ಕೆ ತೆರಳಬೇಕಾಗಿದ್ದ, 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಟ್ಯಾಂಕರ್ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂ ಟರ್ನ್ ತೆಗೆದುಕೊಂಡು ಇದೀಗ ಭಾರತದತ್ತ ಬರುತ್ತಿದೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ಸುಮಾರು ಮೂರು ವಾರಗಳಲ್ಲಿ, ತೈಲ ಮತ್ತು ಅನಿಲ ದಾಸ್ತಾನುಗಳನ್ನು ಹೇರಿಕೊಂಡ, ಭಾರತೀಯ ಧ್ವಜ ಹೊತ್ತ ನಾಲ್ಕು ಹಡಗುಗಳು ಈಗಾಗಲೇ ಭಾರತಕ್ಕೆ ಬಂದಿವೆ.

ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

ಸಂಗ್ರಹ ಚಿತ್ರ -

Priyanka P
Priyanka P Mar 19, 2026 9:11 PM

ನವದೆಹಲಿ, ಮಾ. 19: ಚೀನಾಕ್ಕೆ ತೆರಳಬೇಕಾಗಿದ್ದ, 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಟ್ಯಾಂಕರ್ (Russian crude supply) ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂ-ಟರ್ನ್ ತೆಗೆದುಕೊಂಡು ಇದೀಗ ಭಾರತದತ್ತ ವೇಗವಾಗಿ ಸಾಗುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (Middle East crisis). ಕ್ಯಾಮರೂನ್‌ನಲ್ಲಿ ನೋಂದಾಯಿಸಲಾದ ಟ್ಯಾಂಕರ್ ಅಕ್ವಾ ಟೈಟಾನ್ ಜನವರಿ 18ರಂದು ರಷ್ಯಾದ ಬಂದರಿನಿಂದ ಹೊರಟಿದ್ದು, ಮಾರ್ಚ್ 21ರಂದು ಭಾರತದ ನವಮಂಗಳೂರು ಬಂದರಿಗೆ ಆಗಮಿಸಲಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಸಿನ್ಹಾ ತಿಳಿಸಿದ್ದಾರೆ.

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್‌ ಯುದ್ಧ ಮತ್ತು ಗಲ್ಫ್ ದೇಶಗಳ ಮೇಲೆ ಟೆಹರಾನ್‌ ನಡೆಸಿದ ದಾಳಿಗಳು ಮಧ್ಯಪ್ರಾಚ್ಯದಿಂದ ತೈಲ ಮತ್ತು ನೈಸರ್ಗಿಕ ಅನಿಲ ರಫ್ತಿಗೆ ಅಡ್ಡಿಯುಂಟು ಮಾಡಿದ್ದು, ಉತ್ಪಾದನೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿವೆ.

ಇಂಧನದ ಬಳಿಕ ಇಂಟರ್‌ನೆಟ್‌ಗೂ ಕುತ್ತು; ಹಾರ್ಮೊಜ್‌ನಲ್ಲಿರುವ ಕೇಬಲ್‌ ಕಡಿತಗೊಳಿಸುತ್ತಾ ಇರಾನ್‌?

ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ಸುಮಾರು ಮೂರು ವಾರಗಳಲ್ಲಿ, ತೈಲ ಮತ್ತು ಅನಿಲ ದಾಸ್ತಾನುಗಳನ್ನು ಹೊತ್ತ ನಾಲ್ಕು ಭಾರತೀಯ ಧ್ವಜ ಹೊತ್ತ ಹಡಗುಗಳು ಈಗಾಗಲೇ ಭಾರತಕ್ಕೆ ಬಂದಿವೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ, ವಿಶ್ವದ ಕಚ್ಚಾ ತೈಲದ ಐದನೇ ಒಂದು ಭಾಗ ಹರಿಯುವ ಗಲ್ಫ್ ಚಾಕ್‌ಪಾಯಿಂಟ್ ಆಗಿರುವ ಹೊರ್ಮುಜ್ ಜಲಸಂಧಿಯ ಪಶ್ಚಿಮ ವಲಯದಲ್ಲಿ ಭಾರತದ ಧ್ವಜ ಹೊತ್ತ 22 ಸರಕು ಹಡಗುಗಳು ಸಿಲುಕಿಕೊಂಡಿವೆ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ತಿಳಿಸಿದೆ.

ಭಾರತೀಯ ಧ್ವಜ ಹೊತ್ತ ಎರಡು ಸರಕು ಹಡಗುಗಳು, ಅವುಗಳಲ್ಲಿ ಒಂದು ತೈಲ ಟ್ಯಾಂಕರ್, ಪ್ರಸ್ತುತ ಹೊರ್ಮುಜ್ ಜಲಸಂಧಿಯ ಪೂರ್ವ ವಲಯದಲ್ಲಿವೆ. ಪ್ರಸ್ತುತ 22 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಮತ್ತು 611 ನಾವಿಕರು ಪರ್ಷಿಯನ್ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಎರಡು ಲೋಡ್ ಮಾಡಿದ ಭಾರತೀಯ ಧ್ವಜ ಹೊಂದಿರುವ ಸರಕು ಹಡಗುಗಳು ಹೊರ್ಮುಜ್ ಜಲಸಂಧಿಯ ಪೂರ್ವ ವಲಯದಲ್ಲಿವೆ.

ಹಡಗು ಮಾಲಕರು, ಆರ್‌ಪಿಎಸ್‌ಎಲ್ ಏಜೆನ್ಸಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳ ಸಮನ್ವಯದೊಂದಿಗೆ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ರಾಜೇಶ್ ಸಿನ್ಹಾ ಹೇಳಿದರು.

ಈ ಪ್ರದೇಶದ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು 24 ಗಂಟೆಗಳಲ್ಲಿ ಭಾರತೀಯ ನಾವಿಕರು ಭಾಗಿಯಾಗಿರುವ ಯಾವುದೇ ಹಡಗಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.

ಹೊರ್ಮುಜ್‌ ಜಲಸಂಧಿಯತ್ತ ಭಾರತದ ಯುದ್ಧನೌಕೆಗಳು!

ಕಳೆದ 20 ದಿನಗಳಿಂದ ಹೊರ್ಮುಜ್ ಜಲಸಂಧಿಯ ಸುತ್ತಮುತ್ತಲ ಪ್ರದೇಶದಲ್ಲಿ ಜಗತ್ತಿನಾದ್ಯಂತ ವಿವಿಧ ದೇಶಗಳ ಸುಮಾರು 700 ಹಡಗುಗಳು ಸಿಲುಕಿಕೊಂಡಿವೆ. ಇದರಿಂದಾಗಿ ಮಧ್ಯಪ್ರಾಚ್ಯದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಮಾಡಲಾಗುವ ಕಚ್ಚಾ ತೈಲದ ಸರಿಸುಮಾರು ಶೇ. 20ರಷ್ಟು ಗಮ್ಯಸ್ಥಾನವನ್ನು ತಲುಪಲು ವಿಫಲವಾಗುತ್ತಿದೆ.

ಈ ಬಿಕ್ಕಟ್ಟು ಭಾರತದಂತಹ ದೇಶಗಳ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತಿದೆ. ನಾವು ಕಚ್ಚಾ ತೈಲದ ಅಗತ್ಯದ ಸುಮಾರು ಶೇ. 85ರಷ್ಟು 40 ವಿವಿಧ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಹಡಗು ಸಚಿವಾಲಯದ ಪ್ರಕಾರ, ಹಡಗು ನಿರ್ದೇಶನಾಲಯ (ಡಿಜಿ ಶಿಪ್ಪಿಂಗ್) ಇದುವರೆಗೆ 472ಕ್ಕೂ ಹೆಚ್ಚು ಭಾರತೀಯ ನಾವಿಕರು ಭಾರತಕ್ಕೆ ಸುರಕ್ಷಿತವಾಗಿ ಮರಳಲು ಅನುಕೂಲ ಮಾಡಿಕೊಟ್ಟಿದೆ. 24 ಗಂಟೆಗಳಲ್ಲಿ 25 ನಾವಿಕರು ಸ್ವದೇಶಕ್ಕೆ ಮರಳಿದ್ದಾರೆ.