ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವ್ಲಾಡಿಮಿರ್ ಪುಟಿನ್ ಭದ್ರತೆಗೆ ರಷ್ಯಾದಿಂದ ಆಗಮಿಸಿದ ಉನ್ನತ ಭದ್ರತಾ ಸಿಬ್ಬಂದಿ

ಎರಡು ದಿನಗಳ ಭಾರತ ಭೇಟಿಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಆಗಮಿಸಲಿದ್ದಾರೆ. ಇವರ ಭದ್ರತೆಗಾಗಿ ನವದೆಹಲಿ ಸಂಪೂರ್ಣ ಸಜ್ಜುಗೊಂಡಿದೆ. ಇದಕ್ಕಾಗಿ ಈಗಾಗಲೇ ರಷ್ಯಾದಿಂದ 50ಕ್ಕೂ ಹೆಚ್ಚು ಉನ್ನತ ಭದ್ರತಾ ಸಿಬ್ಬಂದಿ ಭಾರತಕ್ಕೆ ಆಗಮಿಸಿದ್ದಾರೆ. ಇವರಲ್ಲಿ ಕಮಾಂಡೋಗಳು, ಸ್ನೈಪರ್‌ಗಳು, ಡ್ರೋನ್‌ಗಳು ಸೇರಿವೆ.

ವ್ಲಾಡಿಮಿರ್ ಪುಟಿನ್ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತೇ

(ಸಂಗ್ರಹ ಚಿತ್ರ) -

ನವದೆಹಲಿ: ರಷ್ಯಾ ಅಧ್ಯಕ್ಷ (Russian president) ವ್ಲಾಡಿಮಿರ್ ಪುಟಿನ್ (Vladimir Putin) ಅವರು ಗುರುವಾರ ಭಾರತಕ್ಕೆ ಆಗಮಿಸಲಿದ್ದು, ಇವರಿಗೆ ಐದು ಹಂತದ ಉನ್ನತ ಭದ್ರತೆಯನ್ನು ಒದಗಿಸಲು ನವದೆಹಲಿ ಸಜ್ಜಾಗಿದೆ. ಪುಟಿನ್ ಅವರಿಗೆ ವಿದೇಶಿ ಪ್ರಯಾಣದ ಅವಧಿಯಲ್ಲಿ ಸಂಪೂರ್ಣ ರಕ್ಷಣೆ ಒದಗಿಸುವ ಉನ್ನತ ಭದ್ರತಾ ವ್ಯವಸ್ಥೆ (Russia's Presidential Security Service) ಸಂಪೂರ್ಣವಾಗಿ ಈಗಾಗಲೇ ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಎಐ ಮೇಲ್ವಿಚಾರಣೆ ಸಿಬ್ಬಂದಿ, ಕಮಾಂಡೋಗಳು, ಸ್ನೈಪರ್‌ಗಳು, ಡ್ರೋನ್‌ಗಳು ಸೇರಿವೆ. ಭಾರತದಲ್ಲಿ ಅವರ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಪುಟಿನ್ ಗಿಂತ ಮುಂಚಿತವಾಗಿ ರಷ್ಯಾದಿಂದ ನಾಲ್ಕು ಡಜನ್‌ಗೂ ಹೆಚ್ಚು ಉನ್ನತ ಭದ್ರತಾ ಸಿಬ್ಬಂದಿ ದೆಹಲಿ ತಲುಪಿದ್ದಾರೆ.

ರಷ್ಯಾದ ಅಧ್ಯಕ್ಷರಿಗೆ ಐದು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ರಷ್ಯಾದ ಅಧ್ಯಕ್ಷರ ಸೇವೆಯಿಂದ ಉನ್ನತ ತರಬೇತಿ ಪಡೆದ ಸಿಬ್ಬಂದಿ, ಭಾರತದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಉನ್ನತ ಕಮಾಂಡೋಗಳು, ಸ್ನೈಪರ್‌ಗಳು, ಡ್ರೋನ್‌ಗಳು, ಜಾಮರ್‌ಗಳು ಮತ್ತು ಎಐ ಮೇಲ್ವಿಚಾರಣೆ ಸೇರಿದೆ.

Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಸಂಜೆ ಭಾರತಕ್ಕೆ ಆಗಮಿಸಲಿದ್ದು, ಭಾರತ ಮತ್ತು ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುವಾರ ರಾತ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಊಟ ಮಾಡಲಿದ್ದಾರೆ.

ಮರುದಿನ ರಾಷ್ಟ್ರಪತಿ ಭವನದಲ್ಲಿ ಅವರಿಗೆ ವಿಧ್ಯುಕ್ತ ಸ್ವಾಗತ ದೊರೆಯಲಿದೆ. ಅನಂತರ ಶುಕ್ರವಾರ ಅವರು ರಾಜ್ ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಹೈದರಾಬಾದ್ ಹೌಸ್‌ನಲ್ಲಿ ನಡೆಯುವ ಶೃಂಗಸಭೆ ಮತ್ತು ಭಾರತ್ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಅವರು ಭಾಗವಹಿಸುವರು. ಈ ವೇಳೆ ಪುಟಿನ್ ಅವರ ಕಾರ್ಯ ಯೋಜನೆಯ ಭದ್ರತೆಯನ್ನು ರಷ್ಯಾದಿಂದ ಆಗಮಿಸಿರುವ ೫೦ಕ್ಕೂ ಹೆಚ್ಚು ಉನ್ನತ ಭದ್ರತಾ ಪರಿಶೀಲನೆ ನಡೆಸಲಿದ್ದಾರೆ.

ರಷ್ಯಾದಿಂದ ಆಗಮಿಸಿರುವ ಭದ್ರತಾ ಸಿಬ್ಬಂದಿಯು ದೆಹಲಿ ಪೊಲೀಸ್ ಮತ್ತು ಎನ್‌ಎಸ್‌ಜಿ ಅಧಿಕಾರಿಗಳ ಜೊತೆಗೆ ಸೇರಿ ಪುಟಿನ್ ಅವರ ಅಶ್ವದಳ ಹಾದುಹೋಗುವ ಪ್ರತಿಯೊಂದು ಮಾರ್ಗವನ್ನು ಪರಿಶೀಲನೆ ನಡೆಸಲಿದ್ದಾರೆ. ಅಧ್ಯಕ್ಷರ ಭದ್ರತೆಗಾಗಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯು ವಿಶೇಷ ಡ್ರೋನ್‌ಗಳ ಮೂಲಕ ಎಲ್ಲಾ ಸಮಯದಲ್ಲೂ ಅವರ ಅಶ್ವದಳದ ಮೇಲೆ ಕಣ್ಣಿಟ್ಟಿರುವುದನ್ನು ಖಚಿತಪಡಿಸುತ್ತದೆ. ಹಲವಾರು ಸ್ನೈಪರ್‌ಗಳು ಅಧ್ಯಕ್ಷರ ಬೆಂಗಾವಲಾಗಿ ಇರಲಿದ್ದಾರೆ. ಜಾಮರ್‌ಗಳು, ಎಐ ಮಾನಿಟರಿಂಗ್ ಮತ್ತು ಮುಖ ಗುರುತಿಸುವಿಕೆ ಕೆಮರಾಗಳು ಪುಟಿನ್ ಅವರ ಭದ್ರತೆಗಾಗಿ ಇರಿಸಲಾಗಿದೆ.

ಪುಟಿನ್ ಅವರು ಭಾರತಕ್ಕೆ ಬಂದಿಳಿದ ತಕ್ಷಣ ಎಲ್ಲ ಭದ್ರತಾ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಭದ್ರತಾ ವಿವರದಲ್ಲಿರುವ ಪ್ರತಿಯೊಬ್ಬರೂ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಎನ್‌ಎಸ್‌ಜಿ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಹೊರಗಿನ ಪದರಗಳ ಭಾಗವಾಗಿರುತ್ತಾರೆ. ರಷ್ಯಾದ ಅಧ್ಯಕ್ಷೀಯ ಭದ್ರತೆ ಒಳ ಪದರಗಳನ್ನು ರಷ್ಯಾದ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. ರಷ್ಯಾದ ಅಧ್ಯಕ್ಷರು ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಅವರೊಂದಿಗೆ ಇರುವಾಗ ಪ್ರಧಾನಿಗೆ ರಕ್ಷಣೆ ಒದಗಿಸುವ ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳು ಒಳ ಭದ್ರತಾ ವಲಯದಲ್ಲಿ ಸೇರಿರುತ್ತಾರೆ.

ಬ್ಯುಸಿನೆಸ್ ಟೈಕೂನ್ ಎಲಾನ್‌ ಮಸ್ಕ್ ಪುತ್ರನಿಗೆ ಭಾರತೀಯ ಹೆಸರು; ಇದರ ಹಿಂದಿದೆ ಕುತೂಹಲಕಾರಿ ಕಥೆ

ಪುಟಿನ್ ಅವರು ತಂಗಲಿರುವ ಹೊಟೇಲ್ ಅನ್ನು ಸಹ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ರಷ್ಯಾದ ಭದ್ರತಾ ಅಧಿಕಾರಿಗಳು ಕಣ್ಗಾವಲು ಇಟ್ಟಿದ್ದಾರೆ. ನಿರಂತರ ತಪಾಸಣೆ ನಡೆಸುತ್ತಿದ್ದಾರೆ. ಸಂಭಾವ್ಯ ಪೂರ್ವಸಿದ್ಧತಾ ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಪ್ರದೇಶಗಳು ನಿರಂತರ ತಪಾಸನೆಯಲ್ಲಿದೆ.

ಭಾರತದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಪ್ರಯಾಣಕ್ಕೆ ಅವರ ವಿಶೇಷ ಭದ್ರತಾ ಕಾರು ಕೂಡ ರಷ್ಯಾದಿಂದ ಬರಲಿದೆ. ಇದು ಭಾರೀ ಶಸ್ತ್ರಸಜ್ಜಿತ ಐಷಾರಾಮಿ ಲಿಮೋಸಿನ್ ಆರಸ್ ಸೆನಾಟ್. ಇದನ್ನು ಮಾಸ್ಕೋದಿಂದ ತರಿಸಲಾಗುತ್ತಿದ್ದು, ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಇದರಲ್ಲಿ ಸವಾರಿ ಮಾಡಿದರು. ರಷ್ಯಾದ ವಾಹನ ತಯಾರಕ ಆರಸ್ ಮೋಟಾರ್ಸ್ ತಯಾರಿಸಿರುವ ಸೆನಾಟ್ 2018ರಲ್ಲಿ ಪುಟಿನ್ ಅವರ ಬಳಕೆಗಾಗಿ ನಿಯೋಜಿಸಲಾಯಿತು.