ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Solar Energy Revolution: ಸೌರ ವಿದ್ಯುತ್‌ ಬೆಲೆ ಪ್ರತಿ ಯೂನಿಟ್‌ಗೆ ಕೇವಲ 2.15 ರೂ.ಗೆ ಇಳಿಕೆ: ಪ್ರಲ್ಹಾದ್‌ ಜೋಶಿ

Pralhad Joshi: ಗುಜರಾತ್‌ನ ಮೆಹ್ಸಾನಾದ ಗಣಪತ್ ವಿಶ್ವವಿದ್ಯಾಲಯದಲ್ಲಿ 'ವೈಬ್ರಂಟ್ ಗುಜರಾತ್' ಪ್ರಾದೇಶಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಇಂದು ಸೌರ ಕ್ರಾಂತಿಯಾಗಿದೆ. ಸೌರ ವಿದ್ಯುತ್‌ ಬೆಲೆ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.

ಸೌರ ವಿದ್ಯುತ್‌ ಬೆಲೆ ಪ್ರತಿ ಯೂನಿಟ್‌ಗೆ 2.15 ರೂ.ಗೆ ಇಳಿಕೆ

-

Profile Siddalinga Swamy Oct 9, 2025 10:50 PM

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ (PM Narendra Modi) ನಿರಂತರ ಪರಿಶ್ರಮದ ಫಲವಾಗಿ ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಇಂದು ಸೌರ ಕ್ರಾಂತಿಯಾಗಿದೆ (Solar Energy Revolution). ಸೌರ ವಿದ್ಯುತ್‌ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಗುಜರಾತ್‌ನ ಮೆಹ್ಸಾನಾದ ಗಣಪತ್ ವಿಶ್ವವಿದ್ಯಾಲಯದಲ್ಲಿ 'ವೈಬ್ರಂಟ್ ಗುಜರಾತ್' ಪ್ರಾದೇಶಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆಯೇ ಸೌರಶಕ್ತಿಗೆ ನಾಂದಿ ಹಾಡಿದರು. ದೇಶದೆಲ್ಲೆಡೆ ಸೌರ ಶಕ್ತಿ ಉತ್ಪಾದನೆಗೆ ಉತ್ತೇಜನ ನೀಡಿ ಜಗತ್ತಿಗೇ ಬೆಳಕು ತೋರಿದರು ಎಂದು ಹೇಳಿದರು.

25 ವರ್ಷಗಳ ಹಿಂದೆ ಸೌರ ವಿದ್ಯುತ್‌ ಪ್ರತಿ ಯೂನಿಟ್‌ಗೆ ₹18 ರಿಂದ ₹20 ರಷ್ಟಿತ್ತು. ಪ್ರಧಾನಿ ಅವರ ಆಶಯದಂತೆ ಅದೀಗ ಕೇವಲ ₹2.15ಕ್ಕೆ ಇಳಿದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಇಷ್ಟು ಕನಿಷ್ಠ ಬೆಲೆಯಿದೆ. ಬ್ಯಾಟರಿ ಸಂಗ್ರಹಣೆಯೊಂದಿಗೆ ಸಹ ಪ್ರತಿ ಯೂನಿಟ್‌ಗೆ ₹2.70ನಷ್ಟು ಕಡಿಮೆ ಬೆಲೆ ದಾಖಲಾಗಿದೆ ಎಂದು ಸಚಿವ ಜೋಶಿ ವಿವರಿಸಿದರು.

ಸೌರ ಶಕ್ತಿ ಉತ್ಪಾದನೆಯನ್ನು ಆರಂಭದಲ್ಲಿ ಅನೇಕರು ಅನುಮಾನಿಸಿದರು. ಆದರಿಂದು ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತವನ್ನು ಸೌರಕ್ರಾಂತಿಯಲ್ಲಿ ಜಾಗತಿಕ ಮುಂಚೂಣಿಯಲ್ಲಿರಿಸಿದೆ ಎಂದು ಜೋಶಿ ಸಂತಸ ಹಂಚಿಕೊಂಡರು.

ಗುಜರಾತ್ ಈಗ ತನ್ನ ಸ್ಥಾಪಿತ ಸಾಮರ್ಥ್ಯದ ಶೇ.60ರಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದೆ. 2014ರಲ್ಲಿ ದೇಶದ ಒಟ್ಟು ಸೌರ ವಿದ್ಯುತ್ ಉತ್ಪಾದನೆ ಕೇವಲ 2.8 ಗಿಗಾವ್ಯಾಟ್ ಆಗಿತ್ತು. ಈಗ ಕೇವಲ ಸೌರಶಕ್ತಿಯಿಂದಲೇ 125 GW ವಿದ್ಯುತ್ ಪಡೆಯುತ್ತಿದೆ ಎಂದು ತಿಳಿಸಿದರು.

ಮೆಹ್ಸಾನಾವನ್ನು ಶ್ಲಾಘಿಸಿದ ಜೋಶಿ ಅವರು, ʼಮೆಹ್ಸಾನಾ ಅತ್ಯಂತ ಕ್ರಿಯಾತ್ಮಕ ಸ್ಥಳವಾಗಿದ್ದು, ಇದನ್ನು ಶುದ್ಧ ಶಕ್ತಿಯ ದಾರಿದೀಪವೆಂದು ಪರಿಗಣಿಸಲಾಗಿದೆʼ ಎಂದು ಹೇಳಿದರು. ಜಿಲ್ಲೆಯ ಮೊಧೇರಾ ಬಹುಶಃ 24x7 ಶುದ್ಧ ವಿದ್ಯುತ್ ಉತ್ಪಾದಿಸುವ ವಿಶ್ವದ ಏಕೈಕ ಗ್ರಾಮವಾಗಿದೆ, ಇದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಭೂಮಿ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚು

ನಾವು ಹೆಚ್ಚಿನ ಬೇಡಿಕೆಗಳಿಂದಾಗಿ ಪ್ರಕೃತಿ ಮತ್ತು ಜೀವವೈವಿಧ್ಯತೆಯನ್ನು ನಾಶಪಡಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿಯ ನಂತರ ಭೂಮಿಯ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಹಿಮಕರಡಿ ಮತ್ತು ಧ್ರುವ ನರಿಯಂತಹ ಜೀವಿಗಳ ಅಳಿವಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | CDAC Recruitment 2025: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿದೆ 687 ಹುದ್ದೆ; ಡಿಪ್ಲೊಮಾ ಪಾಸಾದವರು ಅಪ್ಲೈ ಮಾಡಿ

ಭೂಮಿ-ಜೀವವೈವಿಧ್ಯತೆ ರಕ್ಷಣೆ ಅಗತ್ಯ

ತಾಪಮಾನ 1.5 ಡಿಗ್ರಿ ಏರಿಕೆಯಾಗಲು ಗರಿಷ್ಠ 7 ವರ್ಷಗಳಿವೆ. ನಾವಿದನ್ನು ದಾಟಿದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಇಂದು ಭೂಮಿಯನ್ನು ರಕ್ಷಿಸಬೇಕಾದ ಸಮಯ ಎದುರಾಗಿದ್ದು, ಜೀವವೈವಿಧ್ಯತೆಯನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಪ್ರಾಯಿಸಿದರು.