ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೃಣಮೂಲ ಕಾಂಗ್ರೆಸ್‌ಗೆ ತಪ್ಪದ ಸಂಕಷ್ಟ: 440 ಕೋಟಿ ರುಪಾಯಿಯ ಬ್ಯಾಂಕ್ ಖಾತೆ ಸ್ಥಗಿತ

Trinamool Congress Crisis: ಸುಮಾರು 440 ಕೋಟಿ ರುಪಾಯಿ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳ ಡೆಬಿಟ್ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ವಲಯದ ಬ್ಯಾಂಕಿನಲ್ಲಿ ನಿರ್ವಹಿಸಲಾಗುತ್ತಿದ್ದ ಈ ಮೂರು ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಎಂಸಿಯ 440 ಕೋಟಿ ರುಪಾಯಿಯ ಬ್ಯಾಂಕ್ ಖಾತೆ ಸ್ಥಗಿತ

ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್‌ ಬ್ಯಾನರ್ಜಿ (ಸಂಗ್ರಹ ಚಿತ್ರ) -

Priyanka P
Priyanka P Jun 20, 2026 6:53 PM

ಕೋಲ್ಕತಾ, ಜೂ. 20: ಪಕ್ಷದ ಬಂಡಾಯ ಶಾಸಕರು (TMC Rebell MLA’s) ನಿಧಿಯ ಮೂಲದ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ ಬಳಿಕ, ಸುಮಾರು 440 ಕೋಟಿ ರುಪಾಯಿ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ನ (Trinamool Congress) 3 ಬ್ಯಾಂಕ್ ಖಾತೆಗಳ ಡೆಬಿಟ್ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕ್ರಮವು ವಿರೋಧ ಪಕ್ಷದೊಳಗಿನ ಹಣಕಾಸಿನ ನಿಯಂತ್ರಣಕ್ಕೆ ಸಂಬಂಧಿಸಿದ ಆಂತರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಖಾಸಗಿ ವಲಯದ ಬ್ಯಾಂಕಿನಲ್ಲಿ ನಿರ್ವಹಿಸಲಾಗುತ್ತಿದ್ದ ಈ ಮೂರು ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರರ್ಥ ಹಣ ಹಿಂಪಡೆಯುವಿಕೆ ಅಥವಾ ಹೊರಹೋಗುವ ಹಣಕಾಸು ವಹಿವಾಟುಗಳನ್ನು ನಡೆಸುವುದು ಸಾಧ್ಯವಾಗುವುದಿಲ್ಲ. ಆದರೆ ಖಾತೆಗಳಿಗೆ ಹಣ ಜಮೆಯಾಗುವ (ಕ್ರೆಡಿಟ್) ವಹಿವಾಟುಗಳು ಮುಂದುವರಿಯಬಹುದು.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ನಂತರ, ಪಕ್ಷದ ಸಂಘಟನೆ ಮತ್ತು ಹಣಕಾಸು ವ್ಯವಸ್ಥೆಯ ಮೇಲಿನ ನಿಯಂತ್ರಣಕ್ಕಾಗಿ ಮಾಜಿ ಸಚಿವ ಅರೂಪ್ ಬಿಸ್ವಾಸ್ ಅವರ ಬಣ ಮತ್ತು ವಿರೋಧ ಪಕ್ಷದ ನಾಯಕ ಋತಬ್ರತಾ ಬ್ಯಾನರ್ಜಿ ಅವರ ಬಣಗಳ ನಡುವೆ ತೃಣಮೂಲ ಕಾಂಗ್ರೆಸ್ ಒಳಗೆ ಅಧಿಕಾರದ ಪೈಪೋಟಿ ತೀವ್ರಗೊಂಡಿದೆ.

ನೋ ಎಂಟ್ರಿ ಎಂದು ಹೇಳಿ ಬಳಿಕ ಟಿಎಂಸಿ ಬಂಡುಕೋರರನ್ನು ಸ್ವಾಗತಿಸಲು ರೆಡಿಯಾದ ಎನ್‌ಸಿಪಿಐ

ಬ್ಯಾನರ್ಜಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದ 10 ಶಾಸಕರು ಬಿಧಾನ್‌ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರುಗಳನ್ನು ಸಲ್ಲಿಸಿದ ನಂತರ, ಖಾತೆಗಳ ಮೇಲೆ ಎಫ್‌ಐಆರ್ ದಾಖಲಿಸಲು ಮತ್ತು ವಿವರವಾದ ತನಿಖೆ ನಡೆಸಲು ಕೋರಿದ್ದರು. ಶಾಸಕರು ತಮ್ಮ ದೂರುಗಳಲ್ಲಿ, ಖಾತೆಗಳಿಗೆ ಜಮಾ ಆಗಿರುವ ಹಣದ ಮೂಲವನ್ನು ಪ್ರಶ್ನಿಸಿದ್ದಾರೆ. ಅವರ ಮೂಲಕ ನಡೆದ ವಹಿವಾಟುಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಒಂದು ದೂರಿನ ಪ್ರತಿಯ ಪ್ರಕಾರ, ಹಣವು ಕಾನೂನುಬದ್ಧ ಮೂಲಗಳಿಂದ ಬಂದಿದೆಯೇ ಅಥವಾ ಗುತ್ತಿಗೆ ಮಂಜೂರಾತಿ ಹಣ ಸಂಗ್ರಹಣೆ, ಸಾರ್ವಜನಿಕ ನಿಧಿಯ ದುರ್ಬಳಕೆ ಮತ್ತು ಹಗರಣಗಳ ಆದಾಯ ಸೇರಿ ಕಾನೂನುಬಾಹಿರ ಚಟುವಟಿಕೆಗಳಿಂದ ಬಂದಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

ʼʼಪ್ರಭಾವದ ದುರುಪಯೋಗ, ಅಪ್ರಾಮಾಣಿಕ ಹಣಕಾಸು ವ್ಯವಹಾರಗಳು ಹಾಗೂ ಅಕ್ರಮವಾಗಿ ಹಣ ಸಂಗ್ರಹಿಸಿರುವ ಶಂಕೆ ಸೇರಿ ಕಾನೂನುಬಾಹಿರ ಚಟುವಟಿಕೆಗಳಿಂದ ಬಂದ ಕೆಲವು ಹಣವನ್ನು ವಿವಿಧ ಮಾರ್ಗಗಳ ಮೂಲಕ ವರ್ಗಾಯಿಸಿ ನಂತರ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂಬುದು ಗೊತ್ತಾಗಿದೆʼʼ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳದ ಬಿಕ್ಕಟ್ಟಿನ ನಡುವೆ ಟಿಎಂಸಿ ವಿಲೀನದ ವದಂತಿ ತಿರಸ್ಕರಿಸಿದ ಕಾಂಗ್ರೆಸ್

ಮಮತಾ ಬ್ಯಾನರ್ಜಿ ಅವರ ನಿಷ್ಠ ಹಿರಿಯ ಶಾಸಕರೊಬ್ಬರು, ಪೊಲೀಸ್ ಕ್ರಮದ ಬಗ್ಗೆ ತಮ್ಮ ಬಣಕ್ಕೆ ಮಾಹಿತಿ ಬಂದಿದ್ದು, ಆದರೆ ಔಪಚಾರಿಕ ಸಂವಹನಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ʼʼಮೂರು ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಶೀಘ್ರದಲ್ಲೇ ನಿಖರ ವಿವರ ತಿಳಿಯಲಿದೆʼʼ ಎಂದು ಹೇಳಿದರು.

ಪಕ್ಷದೊಳಗಿನ ನಾಯಕತ್ವದ ವಿವಾದ ಇತ್ಯರ್ಥವಾಗುವವರೆಗೆ ಖಾತೆಗಳ ರಕ್ಷಣೆ ಮತ್ತು ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಟಿಎಂಸಿಯ ಹಿರಿಯ ನಾಯಕ ಅರೂಪ್ ಬಿಸ್ವಾಸ್ ಬ್ಯಾಂಕಿಗೆ ಪತ್ರ ಬರೆದ ಕೆಲವು ದಿನಗಳ ನಂತರ ಇತ್ತೀಚಿನ ಬೆಳವಣಿಗೆ ಸಂಭವಿಸಿದೆ.