ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಿಂಗ್​​​ ಬಳಿಕ ಯುವಕನ ಜೀವ ಕಸಿದ ಫ್ರೂಟಿ; ಪ್ಯಾಕ್ಡ್ ಪಾನೀಯ ಸೇವನೆಯಿಂದ ತಿಂಗಳ ಅಂತರದಲ್ಲಿ ಇಬ್ಬರು ಬಲಿ

Packaged Drink: ಪ್ಯಾಕ್ಡ್ ಪಾನೀಯ ಸೇವಿಸಿದ ನಂತರ 33 ವರ್ಷದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಮೃತನನ್ನು ಅಂಕುಶ್ ಎಂದು ಗುರುತಿಸಲಾಗಿದ್ದು, ಆತ ಪ್ಯಾಕ್ಡ್ ಪಾನೀಯ ಕುಡಿದ ಕೂಡಲೇ ವಾಂತಿ ಮಾಡಲು ಪ್ರಾರಂಭಿಸಿದ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪ್ಯಾಕ್ಡ್ ಪಾನೀಯ ಸೇವಿಸಿದ 33 ವರ್ಷದ ವ್ಯಕ್ತಿ ದುರ್ಮರಣ

ಸಾಂದರ್ಭಿಕ ಚಿತ್ರ -

Priyanka P
Priyanka P Jun 20, 2026 8:16 PM

ಚಂಡೀಗಢ, ಜೂ. 20: ಕೆಲವು ದಿನಗಳ ಹಿಂದೆ ಅತಿಯಾದ ಸ್ಟಿಂಗ್​​​ ಎನರ್ಜಿ ಡ್ರಿಂಕ್ಸ್ ಕುಡಿದು ಯುವಕನೋರ್ವ ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ಅಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಉಪವಾಸ ಮುರಿಯಲು ಫ್ರೂಟಿ ಜ್ಯೂಸ್‌ (Packaged Drink) ಸೇವಿಸುತ್ತಿದ್ದ 33 ವರ್ಷದ ವ್ಯಕ್ತಿಯೊಬ್ಬ ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ. ಈ ಘಟನೆ ಹರಿಯಾಣದ (Haryana) ಫರಿದಾಬಾದ್‌ನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫ್ರೂಟಿ ದೇಶದ ಜನಪ್ರಿಯ ಮಾವಿನ ಹಣ್ಣಿನ ಜ್ಯೂಸ್‌ ಬ್ರ್ಯಾಂಡ್‌.

ಮೃತನನ್ನು ಅಂಕುಶ್ ಎಂದು ಗುರುತಿಸಲಾಗಿದ್ದು, ಗುರುವಾರ (ಜೂನ್‌18) ರಾತ್ರಿ ಉಪವಾಸ ಆಚರಣೆಯನ್ನು ಬಿಡುವಾಗ ಹನುಮಾನ್ ನಗರ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಫ್ರೂಟಿ ಜ್ಯೂಸ್‌ ಸೇವಿಸಿದ್ದಾಗಿ ವರದಿಯಾಗಿದೆ. ಸಂಬಂಧಿಕರ ಪ್ರಕಾರ, ಆತ ಅದನ್ನು ಕುಡಿದ ಕೂಡಲೇ ವಾಂತಿ ಮಾಡಲು ಪ್ರಾರಂಭಿಸಿದ್ದ. ಆತನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು, ನಂತರ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು.

ಕುಟುಂಬವು ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು. ಆದರೆ ಗಂಭೀರ ಸ್ಥಿತಿಯಲ್ಲಿದುದರಿಂದ, ಅಲ್ಲಿನ ವೈದ್ಯರು ಫರಿದಾಬಾದ್‌ನ ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಸಿವಿಲ್ ಆಸ್ಪತ್ರೆಯಲ್ಲಿಯೂ ವೈದ್ಯರು ಕೈ ಚೆಲ್ಲಿದ್ದು, ಹೆಚ್ಚಿನ ಆರೈಕೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು.

ಕಲ್ಲಂಗಡಿ ಸೇವಿಸಿ ಮಧ್ಯಪ್ರದೇಶದಲ್ಲಿ ಓರ್ವ ಸಾವು, ಇನ್ನೋರ್ವ ಗಂಭೀರ

ಕುಟುಂಬವು ಆತನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದ್ದಾಗ, ಅಂಕುಶ್ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ದಾರಿಯಲ್ಲಿ ಆತ ಮೃತಪಟ್ಟ ಎಂದು ಕುಟುಂಬ ತಿಳಿಸಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಯಿತು. ವಿಚಾರಣೆಯ ಸಮಯದಲ್ಲಿ, ಅಂಕುಶ್ ಉಪವಾಸ ಮಾಡುತ್ತಿದ್ದ. ಉಪವಾಸ ಮುರಿಯಲು ಫ್ರೂಟಿ ಪಾನೀಯವನ್ನು ಸೇವಿಸಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕುಟುಂಬದ ದೂರನ್ನು ಔಪಚಾರಿಕವಾಗಿ ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಗತ್ಯ ಔಪಚಾರಿಕತೆಗಳ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಚ್ಚಿಬಿದ್ದಿದ್ದ ಯಾದಗಿರಿ

ಇತ್ತೀಚೆಗೆ ಅತಿಯಾದ ಕೂಲ್‌ ಡ್ರಂಕ್ಸ್‌ ಸೇವಿಸಿ ಯಾದಗಿರಿಯ ವ್ಯಕ್ತ ಬಲಿಯಾದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅತಿಯಾದ ಸ್ಟಿಂಗ್​​​ ಎನರ್ಜಿ ಡ್ರಿಂಕ್ಸ್ ಕುಡಿದು ಆಸ್ಪತ್ರೆ ಪಾಲಾಗಿದ್ದ ಯುವಕ ಬಾಲು ಅಲಿಯಾಸ್ ಬಾಲಪ್ಪ ಕೊನೆಯುಸಿರೆಳೆದಿದ್ದು, ಇನ್ಮುಂದೆ ಎನರ್ಜಿ ಡ್ರಿಂಕ್ಸ್ ಕುಡಿಯದಂತೆ ಗ್ರಾಮಸ್ಥರು ಶಪಥಗೈದಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಸ್ಟಿಂಗ್​ ಎನರ್ಜಿ ಡ್ರಿಂಕ್​ ಕುಡಿಯುತ್ತಿದ್ದ ಬಾಲಪ್ಪ ಕಿಡ್ನಿ ವೈಫಲ್ಯ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ. ಚಿಕಿತ್ಸೆ ಫಲಿಸದೆ ಯುವಕ ಕೊನೆಯುಸಿರೆಳೆದಿದ್ದ. ಈ ಘಟನೆ ದೇಶದ ಗಮನ ಸೆಳೆದಿತ್ತು.