ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈಗಲೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೇಕೆ? ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಎಡವಿತಾ?

ಕೇಂದ್ರ ಸರ್ಕಾರವು ಅವಸರವಸರವಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿ ಸೋತಿದೆ. 2029ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೂ ಮುನ್ನ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಉದ್ದೇಶವನ್ನು ಇದು ಹೊಂದಿತ್ತು. ಆದರೆ ಬಹುಮತದ ಕೊರತೆಯಿಂದ ಮಹಿಳಾ ಮೀಸಲಾತಿ ಅಂಗೀಕರವಾಗಲಿಲ್ಲ. ಕೇಂದ್ರ ಸರ್ಕಾರ ಈಗಲೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೇಕೆ? ಯೋಜನೆಗಳು ಎಲ್ಲಿ ತಪ್ಪಿತು ಎಂಬುದಕ್ಕೆ ಇಲ್ಲಿದೆ ಉತ್ತರ.

ಮಹಿಳಾ ಮೀಸಲಾತಿ ಮಸೂದೆ ಈ ಸಮಯದಲ್ಲಿ ಏಕೆ?

ಸಂಗ್ರಹ ಚಿತ್ರ -

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು (Women's Reservation Bill) ಕೇಂದ್ರ ಸರ್ಕಾರ (central government) ಅವಸರವಸರವಾಗಿ ಜಾರಿಗೆ ತರಲು ಪ್ರಯತ್ನಿಸಿ ಸೋತಿದೆ. ಒಂದು ವೇಳೆ ಈ ಮಸೂದೆಯು ಸಂಸತ್ತಿನಲ್ಲಿ ಗುರುವಾರ ಅನುಮೋದನೆ ಪಡೆದಿದ್ದರೆ 2029 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ದೊರೆಯುತ್ತಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಎನ್ ಡಿಎಗೆ (NDA) ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಈ ಮಸೂದೆಗೆ 298 ಸದಸ್ಯರ ಬೆಂಬಲ ಸೂಚಿಸಿದ್ದು, 230 ಸದಸ್ಯರು ವಿರೋಧಿಸಿದರು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸಿಗದೇ ಇದ್ದುದರಿಂದ ಈ ಕುರಿತಾದ ಕೆಲವು ಪ್ರಶ್ನೆಗಳು ಉದ್ಭವಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳು ಇಂತಿವೆ.

ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಕಾಶ್ಮೀರದಲ್ಲಿ ಹೊಸ ನಿಯಮ; ಕ್ಯುಆರ್ ಕೋಡ್ ಆಧಾರಿತ ವಿಶಿಷ್ಟ ಗುರುತಿನ ವ್ಯವಸ್ಥೆ ಪರಿಚಯಿಸಿದ ಅಧಿಕಾರಿಗಳು

ಯಾವೆಲ್ಲಾ ಮಸೂದೆಗಳನ್ನು ಮಂಡಿಸಲಾಯಿತು?

ಕೇಂದ್ರ ಸರ್ಕಾರವು ಏಪ್ರಿಲ್ 16ರಂದು ಲೋಕಸಭೆಯಲ್ಲಿ ಮೂರು ಪ್ರಮುಖ ಶಾಸನಗಳನ್ನು ಪರಿಚಯಿಸಿತ್ತು. ಇವುಗಳಲ್ಲಿ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ 2026, ಸೀಮಾ ನಿರ್ಣಯ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2026 ಸೇರಿವೆ.

ಈ ಸಮಯದಲ್ಲಿ ಏಕೆ ?

2026ರ ಜನಗಣತಿಯ ಬಳಿಕ ಸೀಮಾ ನಿರ್ಣಯದ ಆಧಾರದ ಮೇಲೆ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರುವ ಯೋಜನೆ ಇತ್ತು. ಆದರೆ ಇದಕ್ಕೂ ಮುನ್ನವೇ ಮಸೂದೆ ಮಂಡನೆಯಾಗಿದೆ. ಯಾಕೆಂದರೆ ಜನಗಣತಿ ಮತ್ತು ಸೀಮಾ ನಿರ್ಣಯಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಸರ್ಕಾರ ಕಾದರೆ 2029 ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವುದು ಸಾಧ್ಯವಾಗುವುದಿಲ್ಲ.

ಮಸೂದೆ ಕಾನೂನುಗಳಾದರೆ ಏನು ಪ್ರಯೋಜನ?

ಮಸೂದೆಗಳು ಅಂಗೀಕಾರವಾಗಿ ಕಾನೂನು ಆದರೆ 2029 ರ ಸಾರ್ವತ್ರಿಕ ಚುನಾವಣೆಗೂ ಮೊದಲೇ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ದೊರೆಯುತ್ತಿತ್ತು.

ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ಪ್ರಸ್ತಾಪ ಯಾಕೆ?

ಲೋಕಸಭೆಯ ಸ್ಥಾನಗಳ ಮಿತಿಯನ್ನು 1976ರಲ್ಲಿ 550 ಕ್ಕೆ ನಿಗದಿಪಡಿಸಲಾಗಿತ್ತು. 1971ರಲ್ಲಿ ಭಾರತದ ಜನಸಂಖ್ಯೆ 54 ಕೋಟಿ ಆಗಿತ್ತು. ಈಗ ಅದು 140 ಕೋಟಿಗೆ ಏರಿರುವುದರಿಂದ ಲೋಕಸಭೆಯಲ್ಲಿ ಸ್ಥಾನಗಳನ್ನು 850 ಕ್ಕೆ ಹೆಚ್ಚಿಸುವ ಅವಶ್ಯಕತೆಯಿದೆ. ಇದು ಸಂಸತ್ತಿನಲ್ಲಿ ಜನರ ನ್ಯಾಯಯುತ ಪ್ರಾತಿನಿಧ್ಯವನ್ನು ಕೊಡಿಸುತ್ತದೆ.

ಡೀಲಿಮಿಟೇಶನ್ ಆಯೋಗ ಕಾಯ್ದೆ ಬದಲಾವಣೆ ಪ್ರಸ್ತಾಪ?

ಡೀಲಿಮಿಟೇಶನ್ ಆಯೋಗ ಕಾಯ್ದೆಗೆ ಯಾವುದೇ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟು ಹಾಗೆಯೇ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಕ್ಷಿಣ ಅಥವಾ ಸಣ್ಣ ರಾಜ್ಯಗಳ ಮೇಲೆ ಏನು ಪರಿಣಾಮ?

ಲೋಕಸಭೆಯಲ್ಲಿ ಸ್ಥಾನ ಹೆಚ್ಚಳದಿಂದ ಎಲ್ಲಾ ರಾಜ್ಯಗಳು ಸೀಟುಗಳಲ್ಲಿ ಏಕರೂಪವಾಗಿ ಹೆಚ್ಚಳವಾಗುತ್ತದೆ. ಇದು ಯಾವುದೇ ರಾಜ್ಯಗಳ ಪ್ರಾತಿನಿಧ್ಯಕ್ಕೆ ಹಾನಿ ಮಾಡುವುದಿಲ್ಲ.

2024ರ ಚುನಾವಣೆಗೆ ಮೊದಲು ಯಾಕೆ ಮಹಿಳಾ ಮೀಸಲಾತಿ ಜಾರಿಗೆ ತರಲಾಗಿಲ್ಲ?

ಮೀಸಲಾತಿ ಜಾರಿಗೆ ತರಲು ಸೀಟುಗಳ ಪುನರ್ವಿಂಗಡಣೆ ಅಗತ್ಯವಿದೆ. ಇದು ಒಂದು ವ್ಯಾಪಕ ಮತ್ತು ಸಮಾಲೋಚನಾ ಪ್ರಕ್ರಿಯೆಯಾಗಿದೆ. ಹೀಗಾಗಿ 2024ರ ಚುನಾವಣೆಗೆ ಮೊದಲು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ.

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿ ಸಾಧ್ವಿಗೆ ಒಲಿದ ಮಿಸ್ ಇಂಡಿಯಾ ಕಿರೀಟ

2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಏಕೆ ಪರಿಚಯಿಸಲಾಗಿತ್ತು?

ಮಹಿಳಾ ಮೀಸಲಾತಿ ಮಸೂದೆಯನ್ನು 2023ರಲ್ಲಿ ಅಂಗೀಕರಿಸಲಾಯಿತು. ಇದರ ಅಂಗೀಕಾರವು ನಾರಿ ಶಕ್ತಿ ವಂದನ ಆಡಳಿತವನ್ನು ಜಾರಿಗೆ ತರಲು ಅನುವು ಮಾಡಿಕೊಟ್ಟಿತು. ಇದು ತಕ್ಷಣದ ಜಾರಿಗಾಗಿ ಅಲ್ಲದೇ ಇದ್ದರೂ ಕಾನೂನು ಮತ್ತು ಸಾಂವಿಧಾನಿಕ ಚೌಕಟ್ಟನ್ನು ಸ್ಥಾಪಿಸಲು ಇದನ್ನು 2023ರಲ್ಲಿ ಅಂಗೀಕರಿಸಲಾಯಿತು.