ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

8 ತಿಂಗಳ ಹೆಣ್ಣು ಮಗುವಿಗೆ ಆ್ಯಸಿಡ್ ಕುಡಿಸಿದ ಪಾಪಿ ತಾಯಿ; ಅಮ್ಮನ ಕ್ರೌರ್ಯಕ್ಕೆ ಬೆಚ್ಚಿಬಿದ್ದ ದೇಶ

Acid attack on baby: 8 ತಿಂಗಳ ಮಗುವಿಗೆ ತಾಯಿಯೇ ಆ್ಯಸಿಡ್ ಕುಡಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಖೈರ್ತಾಲ್-ಭಿವಾಡಿ ಪಟ್ಟಣದಲ್ಲಿ ನಡೆದಿದೆ. ಮಗು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಮೂಗು, ಬಾಯಿಯಿಂದ ರಕ್ತಸ್ರಾವವಾಗುತ್ತಿದೆ. ಮಗುವಿನ ತಂದೆ ಮೋಹಿತ್ ಕೆಲಸಕ್ಕೆ ಹೋಗಿದ್ದಾಗ ತಾಯಿ ಈ ಕ್ರೂರ ಕೃತ್ಯ ಎಸಗಿದ್ದಾಳೆ.

8 ತಿಂಗಳ ಹೆಣ್ಣು ಮಗುವಿಗೆ ಆ್ಯಸಿಡ್ ಕುಡಿಸಿದ ಪಾಪಿ ತಾಯಿ

ಸಾಂದರ್ಭಿಕ ಚಿತ್ರ -

Priyanka P
Priyanka P May 19, 2026 6:01 PM

ಜೈಪುರ, ಮೇ 19: ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇಲ್ಲ ಅನ್ನೋ ಮಾತು ಕೇಳಿರಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ನಡೆದಿದೆ. 8 ತಿಂಗಳ ಮಗುವಿಗೆ ತಾಯಿಯೇ ಆ್ಯಸಿಡ್ ಕುಡಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಖೈರ್ತಾಲ್-ಭಿವಾಡಿ ಪಟ್ಟಣದಲ್ಲಿ ನಡೆದಿದೆ. ಮಗು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಮೂಗು, ಬಾಯಿಯಿಂದ ರಕ್ತಸ್ರಾವವಾಗುತ್ತಿದೆ. ಈ ಘಟನೆ ಭಿವಾಡಿಯ ಕ್ಯಾಪ್ಟನ್ ಚೌಕ್ ಪ್ರದೇಶದಲ್ಲಿ ನಡೆದಿದ್ದು, ಇದು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ, ಘಟನೆ ನಡೆದಾಗ ಶಿಶು ತನ್ನ ತಾಯಿಯೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿತ್ತು (crime news).

ಗಾಯಗೊಂಡಿರುವ ಮಗುವನ್ನು ಕಾವ್ಯ ಎಂದು ಗುರುತಿಸಲಾಗಿದೆ. ಮಗುವನ್ನು ಮೊದಲು ಭಿವಾಡಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ, ವೈದ್ಯರು ಬಳಿಕ ಅಲ್ವಾರ್ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಲ್ಲಿ ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಂದೆ ಮೋಹಿತ್ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಸಿದ ನಂತರ ತನ್ನ ಪತ್ನಿ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಅದಕ್ಕೂ ಮುನ್ನ ಇದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೇಳಿದ್ದಳು ಎಂದು ಮೋಹಿತ್ ಆರೋಪಿಸಿದ್ದಾರೆ. ʼʼಘಟನೆ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದೆ. ಆದರೆ ಅವಳು ನಿರಾಕರಿಸಿದಳು. ನಂತರ ಪೊಲೀಸರಿಗೆ ತಿಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಾಗ ಅವಳು ಮಗುವಿಗೆ ಆ್ಯಸಿಡ್ ಕುಡಿಸಿದ್ದಾಗಿ ಸತ್ಯವನ್ನು ಒಪ್ಪಿಕೊಂಡಳುʼʼ ಎಂದು ಅವರು ಹೇಳಿದರು.

ವೈದ್ಯರ ಮಾತು:



ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ತನಿಖೆಗೆ ಎಸ್ಐಟಿ ತಂಡ ರಚನೆ

ಆ್ಯಸಿಡ್ ಕುಡಿದ ಮಗು ಅನಿಯಂತ್ರಿತವಾಗಿ ಅಳಲು ಪ್ರಾರಂಭಿಸಿತು. ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಲು ಪ್ರಾರಂಭಿಸಿತು. ಇದು ಕುಟುಂಬ ಸದಸ್ಯರಲ್ಲಿ ಭೀತಿಯನ್ನು ಉಂಟುಮಾಡಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ʼʼಮಗುವಿಗೆ ಆಕೆಯ ತಾಯಿ ಆ್ಯಸಿಡ್ ಕುಡಿಸಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯ ಹಿಂದಿನ ಉದ್ದೇಶ ಸೇರಿ ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆʼʼ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮನ್ ಮೀನಾ ಹೇಳಿದ್ದಾರೆ.

ಇನ್ನು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ʼʼಆಕೆಯ ಆಂತರಿಕ ಅಂಗಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆʼʼ ಎಂದು ಹೇಳಿದ್ದಾರೆ. ʼʼರಾಸಾಯನಿಕವು ಎಷ್ಟು ದೂರ ಹರಡಿದೆ? ಅದು ಅನ್ನನಾಳಕ್ಕೆ (ಆಹಾರ ಕೊಳವೆ) ಹೋಗಿದೆಯೇ ಅಥವಾ ಉಸಿರಾಟದ ಪ್ರದೇಶಕ್ಕೆ ಹೋಗಿದೆಯೇ ಎಂಬುದನ್ನು ಎಂಡೋಸ್ಕೋಪಿ ಮತ್ತು ಬ್ರಾಂಕೋಸ್ಕೋಪಿ ಮೂಲಕ ಮಾತ್ರ ನಿರ್ಧರಿಸಬಹುದುʼʼ ಎಂದು ವೈದ್ಯರು ತಿಳಿಸಿದ್ದಾರೆ.

ʼʼಶಿಶುವನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಯಿತುʼʼ ಎಂದು ಡಾ. ರಾಶಿ ಸಿಂಗ್ ಕೌಶಿಕ್ ಹೇಳಿದ್ದಾರೆ. ಮಗುವನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ವಿಶೇಷ ವೈದ್ಯಕೀಯ ತಂಡವು ದಿನದ 24 ಗಂಟೆಗಳ ಕಾಲ ಚಿಕಿತ್ಸೆ ನೀಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.