ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ: ಮಹಿಳೆ ಮೇಲೆ ಕುಸಿದು ಬಿದ್ದ ಚಾವಣಿ; ಸಿಸಿಟಿವಿ ದೃಶ್ಯ ವೈರಲ್
Viral Video: ರಾಜಸ್ಥಾನದ ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯದ್ವಾರದ ಚಾವಣಿ ಕುಸಿದು ಬಿದ್ದಿದ್ದು ಮಹಿಳೆಯೊಬ್ಬರ ತಲೆಗೆ ತೀವ್ರ ಗಾಯವಾಗಿದೆ. ಮಹಿಳೆಯನ್ನು ಸರ್ಕಾರಿ ಬಗಾಡಿಯಾ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಜೈಪುರ, ಆ. 6: ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯದ್ವಾರದ ಚಾವಣಿ ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರ ತಲೆಗೆ ತೀವ್ರ ಗಾಯವಾಗಿದೆ. ಸದ್ಯ ಮಹಿಳೆಯನ್ನು ಸರ್ಕಾರಿ ಬಗಾಡಿಯಾ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ (Viral News) ಆಗಿದ್ದು ನೆಟ್ಟಿಗರು ಅಘಾತ ವ್ಯಕ್ತ ಪಡಿಸಿದ್ದಾರೆ.
ಈ ಘಟನೆ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಕಳವಳ ಮೂಡಿಸಿದೆ. ಬಾಲ್ಕನಿಯಿಂದ ಸಾರ್ವಜನಿಕರ ಮೇಲೆ ಸುಣ್ಣದ ಚೂರು, ಸಿಮೆಂಟ್ ಚೂರು ಬಿದ್ದಿದೆ. ಈ ಕುಸಿತವು ಆಸ್ಪತ್ರೆಯ ಆವರಣದಲ್ಲಿ ಭೀತಿ ಸೃಷ್ಟಿಸಿದೆ. ರೋಗಿಗಳು, ಸಹಾಯಕರು ಮತ್ತು ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪ್ರವೇಶದ್ವಾರವು ಜನ ದಟ್ಟಣೆಯಿಂದ ತುಂಬಿರಲಿಲ್ಲ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು ಎಂದಿದ್ದಾರೆ.
ವಿಡಿಯೊ ನೋಡಿ:
In Rajasthan's Churu district, a female patient had come to the government hospital for her treatment and suddenly the plaster of Roof fell off😨 pic.twitter.com/x0h36pU3Yf
— Ghar Ke Kalesh (@gharkekalesh) August 6, 2026
ಮಹಿಳೆಯೊಬ್ಬರಿಗೆ ಮಾತ್ರ ಗಾಯವಾಗಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಘಟನೆಯ ನಂತರ, ಸ್ಥಳೀಯ ನಿವಾಸಿಗಳು ಆಸ್ಪತ್ರೆ ಕಟ್ಟಡದ ತಾಂತ್ರಿಕ ಪರಿಶೀಲನೆಗೆ ಕರೆ ನೀಡಿದ್ದಾರೆ. ಪ್ರಸ್ತುತ ಮಹಿಳಾ ಆಸ್ಪತ್ರೆಯು ಹಳೆಯ ಟ್ರಾಮಾ ಸೆಂಟರ್ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದು, ಈ ಕಟ್ಟಡವು ಕಳೆದ ಕೆಲವು ಸಮಯದಿಂದ ದುರಸ್ತಿಯಲ್ಲಿದೆ.
ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ
ಹಳೆಯ ಸಾರ್ವಜನಿಕ ಕಟ್ಟಡಗಳನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ಇದೇ ರೀತಿಯ ಅಪಘಾತಗಳು ಉಂಟಾಗಬಹುದು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆರೋಗ್ಯ ಮೂಲಸೌಕರ್ಯಗಳ ಭದ್ರತೆ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯ ಬೇಜವಾಬ್ದಾರಿಯ ಬಗ್ಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಉಸ್ತುವಾರಿ "ನಾನು ಈಗಾಗಲೇ ಆಸ್ಪತ್ರೆಯ ಬಗ್ಗೆ ಪತ್ರ ಬರೆದಿದ್ದೇನೆ ಮತ್ತು ಶೀಘ್ರದಲ್ಲೇ ಸುಧಾರಣೆಗಳನ್ನು ಮಾಡಲಾಗುವುದು" ಎಂದು ತಿಳಿಸಿದ್ದಾರೆ.