ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಮಹಿಳೆಯರಿಗೆ ಗಂಡನನ್ನು ಉಳಿಸಿಕೊಳ್ಳುವ ವೀರತೆ ಇರಲಿಲ್ಲ; ಪಹಲ್ಗಾಮ್‌ ದಾಳಿ ಸಂತ್ರಸ್ತರ ಕುರಿತು ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಆಪರೇಷನ್‌ ಸಿಂದೂರ್‌ನ ಭಾಗವಾಗಿದ್ದ ಮಹಿಳಾ ಅಧಿಕಾರಿ ಕರ್ನಲ್‌ ಸೋಫಿಯಾ ಖುರೇಷಿ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್‌ ಶಾ ಅವರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿತ್ತು. ಇದೀಗ ಬಿಜೆಪಿಯ ಮೊತ್ತಬ್ಬ ನಾಯಕ ಪಹಲ್ಗಾಮ್‌ ದಾಳಿಯ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ.

ಪಹಲ್ಗಾಮ್‌ ದಾಳಿಯ ಸಂತ್ರಸ್ತರ ಕುರಿತು ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

Profile Vishakha Bhat May 25, 2025 1:21 PM

ಚಂಡೀಗಢ: ಆಪರೇಷನ್‌ ಸಿಂದೂರ್‌ನ (Pahalgam Terror Attack) ಭಾಗವಾಗಿದ್ದ ಮಹಿಳಾ ಅಧಿಕಾರಿ ಕರ್ನಲ್‌ ಸೋಫಿಯಾ ಖುರೇಷಿ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್‌ ಶಾ ಅವರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿತ್ತು. ಇದೀಗ ಬಿಜೆಪಿಯ ಮೊತ್ತಬ್ಬ ನಾಯಕ ಪಹಲ್ಗಾಮ್‌ ದಾಳಿಯ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ (BJP MP) ತಮ್ಮ ಹೇಳಿಕೆಯಿಂದ ವಿವಾದವನ್ನು ಹುಟ್ಟು ಹಾಕಿದ್ದಾರೆ. ಪಹಲ್ಗಾಮ್‌ ದಾಳಿಯಲ್ಲಿ ತಮ್ಮ ಗಂಡನನ್ನು ಕಳೆದುಕೊಂಡ ಮಹಿಳೆಯರನ್ನು ಅವರು ಟೀಕಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಮತ್ತು ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಿಗೆ ಯೋಧ ಮಹಿಳೆಯರ ಮನೋಭಾವವಿಲ್ಲ ಎಂದು ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಶನಿವಾರ ಹೇಳಿದ್ದಾರೆ. ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ದಿನಾಚರಣೆಯ ಅಂಗವಾಗಿ ಭಿವಾನಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹರಿಯಾಣದ ಬಿಜೆಪಿ ಸಂಸದರು ಸಭೆಯನ್ನುದ್ದೇಶಿಸಿ ಮಾತನಾಡುವಾಗ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಹೋಳ್ಕರ್ ಅವರ ಇತಿಹಾಸವನ್ನು ಓದಿದ್ದರೆ, ಅವರ ಮುಂದೆ ಯಾರೋ ಬಂದು ತಮ್ಮ ಗಂಡನನ್ನು ಕೊಲ್ಲುವುದನ್ನು ನೋಡಿ ಸುಮ್ಮನಿರುತ್ತಿರಲಿಲ್ಲ. ಅಗ್ನಿವೀರ್ ಯೋಜನೆಯನ್ನು ಉಲ್ಲೇಖಿಸಿದ ಬಿಜೆಪಿ ಸಂಸದರು, ಪ್ರತಿಯೊಬ್ಬ ಪ್ರವಾಸಿಗರು ಅಗ್ನಿವೀರ್ ತರಬೇತಿಯನ್ನು ಪಡೆದಿದ್ದರೆ, ಅವರು ಭಯೋತ್ಪಾದಕರ ವಿರುದ್ಧ ಹೋರಾಡಬಹುದಿತ್ತು. ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್‌ ಸಿಂದೂರ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಧ್ಯಾಪಕನಿಗೆ ಮಧ್ಯಂತರ ಜಾಮೀನು

ಜಂಗ್ರಾ ಅವರ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ಬಿಜೆಪಿ ನಾಯಕರು "ಭಾರತೀಯ ಸೇನೆ ಮತ್ತು ಪಹಲ್ಗಾಮ್‌ ದಾಳಿಯಲ್ಲಿ ಮಡಿದವರನ್ನು ಅವಮಾನಿಸುತ್ತಾ ಬಂದಿದ್ದಾರೆ. ಅಧಿಕಾರದ ಅಮಲಿನಲ್ಲಿ ಬಿಜೆಪಿ ನಾಯಕರು ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ನಾಚಿಕೆಯಿಲ್ಲದಿರುವಿಕೆಗೂ ಒಂದು ಮಿತಿ ಇದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ. ಬಿಜೆಪಿ ಸಂಸದ ರಾಮ್ ಚಂದರ್ ಜಂಗ್ರಾ ಅವರು ಪಹಲ್ಗಾಮ್ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ... ನಾಚಿಕೆಯಿಲ್ಲದಿರುವಿಕೆಗೂ ಒಂದು ಮಿತಿ ಇದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಅದು "ಪಕ್ಷವಲ್ಲ, ಬದಲಾಗಿ ಮಹಿಳಾ ವಿರೋಧಿ ಪಕ್ಷ ಎಂದು ಅವರು ಹೇಳಿದ್ದಾರೆ.