ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

40 ಲಕ್ಷ ಭಾರತೀಯರು ಬಳಸುತ್ತಿದ್ದಾರೆ ವಿವಾಹೇತರ ಡೇಟಿಂಗ್ ಆ್ಯಪ್; ಅಗ್ರ ಸ್ಥಾನದಲ್ಲಿರುವ ನಗರ ಯಾವುದು ಗೊತ್ತೇ?

ದೇಶಾದ್ಯಂತ ಈಗ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ. ಇದಕ್ಕೆ ವೇದಿಕೆ ನಿರ್ಮಿಸಿಕೊಟ್ಟಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹುಡುಕಲು ಒಲವು ತೋರುತ್ತಿರುವುದು ಅದೇ ರೀತಿ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಿರುವುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.

ಅತೀ ಹೆಚ್ಚು ಡೇಟಿಂಗ್ ಆಪ್ ಬಳಸುತ್ತಿರುವ ಭಾರತದ ನಗರ ಯಾವುದು?

ಸಂಗ್ರಹ ಚಿತ್ರ -

ನವದೆಹಲಿ: ದೇಶದಲ್ಲಿ ವಿವಾಹ ಅತ್ಯಂತ ಪವಿತ್ರ ಬಂಧನ ಎಂದು ಪರಿಗಣಿಸಲಾಗುತ್ತದೆ. ಆದರೆ ಇದೀಗ ವಿವಾಹೇತರ ಸಂಬಂಧಗಳು (Extra-Marital affairs) ಹೆಚ್ಚಾಗುತ್ತಿವೆ. ಇದು ಬೆಳಕಿಗೆ ಬಂದಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ (Extra-Marital Dating App) ಬಳಕೆಯಲ್ಲಾಗುತ್ತಿರುವ ಹೆಚ್ಚಳದಿಂದ. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ (Dating App) ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹಾಗೂ ಹೆಚ್ಚಿನ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಬಯಸುತ್ತಿರುವುದನ್ನು ಅಂಕಿಅಂಶಗಳು ಬಹಿರಂಗ ಪಡಿಸಿವೆ.

ವಿವಾಹದ ಹೊರಗಿನ ಖಾಸಗಿ ಸಂಬಂಧಗಳು ಅಥವಾ ದೀರ್ಘಾವಧಿಯ ಸಂಬಂಧವನ್ನು ಬಯಸುವ ಜನರಿಗಾಗಿ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ವಿವಾಹೇತರ ಡೇಟಿಂಗ್ ವೇದಿಕೆ ಗ್ಲೀಡೆನ್‌ ಬಳಸುತ್ತಿರುವ ಸುಮಾರು ಶೇ. 65ರಷ್ಟು ಬಳಕೆದಾರರು ಪುರುಷರಾಗಿದ್ದು, ಶೇ. 35ರಷ್ಟು ಬಳಕೆದಾರರು ಮಹಿಳೆಯರಾಗಿದ್ದಾರೆ. ಈ ಆಪ್ ಅನ್ನು ಹೆಚ್ಚಾಗಿ ಬಳಸುತ್ತಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.

ಗುಜರಾತ್‌ಗೆ ತೆರಳುತ್ತಿದ್ದ ಥಾಯ್ ಸರಕು ಹಡಗಿನ ಮೇಲೆ ಹಾರ್ಮೊಜ್‌ ಜಲಸಂಧಿಯಲ್ಲಿ ದಾಳಿ; 20 ಸಿಬ್ಬಂದಿ ರಕ್ಷಣೆ

ಆಪ್ ಬಳಕೆಯ ಒಟ್ಟು ಬಳಕೆದಾರರಲ್ಲಿ ಸುಮಾರು ಶೇ. 18ರಷ್ಟು ಬಳಕೆದಾರರು ಬೆಂಗಳೂರಿನವರಾಗಿದ್ದಾರೆ. ಬಳಿಕ ಹೈದರಾಬಾದ್ ನಗರವಿದ್ದು, ಇಲ್ಲಿನ ಶೇ. 17ರಷ್ಟು ಮಂದಿ ಈ ಆಪ್ ಬಳಕೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಶೇ. 11, ಮುಂಬೈ ಶೇ. 9, ಪುಣೆ ಶೇ. 7ರಷ್ಟು ಬಳಕೆದಾರರನ್ನು ಹೊಂದಿದೆ.

ಮಹಾನಗರಗಳಲ್ಲಿ ಮಾತ್ರವಲ್ಲ ಬೆಳೆಯುತ್ತಿರುವ ನಗರಗಳಾದ ಲಕ್ನೋ, ಚಂಡೀಗಢ, ಸೂರತ್, ಕೊಯಮತ್ತೂರು, ಭುವನೇಶ್ವರ, ಪಾಟ್ನಾ, ಗುವಾಹಟಿ ಮತ್ತು ರಾಯ್‌ಪುರದಂತಹ ನಗರಗಳಲ್ಲಿಯೂ ಕೂಡ ಈ ಆಪ್ ಅನ್ನು ಬಳಸುತ್ತಿರುವವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಈ ಆಪ್ ಬಳಸುತ್ತಿರುವವರಲ್ಲಿ ಮಹಿಳಾ ಭಾಗವಹಿಸುವಿಕೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಅಪ್ಲಿಕೇಶನ್‌ಗೆ ಸೇರುವ ಮಹಿಳೆಯರ ಸಂಖ್ಯೆ ಸುಮಾರು ಶೇ. 148ರಷ್ಟು ಹೆಚ್ಚಳವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗ್ಲೀಡೆನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಿಬಿಲ್ ಶಿಡೆಲ್, ಇದು ದೊಡ್ಡ ಸಾಂಸ್ಕೃತಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿ ಈ ವೇದಿಕೆಗೆ ಇದೊಂದು ಮಹತ್ವದ ಕ್ಷಣ. ಡಿಜಿಟಲ್ ಅಳವಡಿಕೆ ವೇಗವಾಗಿ ಬೆಳೆಯುತ್ತಿದೆ ಮತ್ತು ಜನರು ಆಧುನಿಕ ಸಂಬಂಧಗಳನ್ನು ಹೇಗೆ ಸಮೀಪಿಸುತ್ತಾರೆ ಎಂಬುದರಲ್ಲಿ ಇದೊಂದು ರೀತಿಯ ಕ್ರಾಂತಿಯನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಆಪ್ ಬಳಕೆಯ ವಿಚಾರದಲ್ಲಿ ಹೆಚ್ಚಾಗಿ ಈ ಆಪ್ ನಲ್ಲಿ ಹೆಚ್ಚಿನ ಸದಸ್ಯರು ದಿನಕ್ಕೆ ಒಂದೂವರೆ ಗಂಟೆಗಳ ಕಾಲ ಚಾಟಿಂಗ್ ನಲ್ಲಿ ತೊಡಗಿಕೊಳ್ಳುತ್ತಾರೆ. ಇದರಲ್ಲಿ ಮಧ್ಯಾಹ್ನ ೧೨ ರಿಂದ 3 ಗಂಟೆಯ ನಡುವೆ ಹಾಗೂ ರಾತ್ರಿ 10 ರಿಂದ ೧೨ ಗಂಟೆಯ ನಡುವೆ ಹೆಚ್ಚಿನ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ.

ಇರಾನ್‌ ಯುದ್ಧಕ್ಕೆ ಉತ್ತರ ಕೊರಿಯಾ ಎಂಟ್ರಿ ಫಿಕ್ಸ್‌? ಪುತ್ರಿಯೊಂದಿಗೆ ಕ್ರೂಸ್ ಕ್ಷಿಪಣಿ ಪರೀಕ್ಷೆ ವೀಕ್ಷಿಸಿದ ಕಿಮ್ ಜಾಂಗ್ ಉನ್

ಇನ್ನು ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹಾಗೂ ಮಹಿಳೆಯರು ಸಾಮಾನ್ಯವಾಗಿ 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಾರೆ ಎಂಬುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ. ಇದರಲ್ಲಿ ವೈದ್ಯರು, ಹಿರಿಯ ಕಾರ್ಯನಿರ್ವಾಹಕರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಂತಹ ಆರ್ಥಿಕವಾಗಿ ಸ್ಥಿರವಾದ ವೃತ್ತಿಪರರನ್ನು ಅನೇಕ ಮಹಿಳೆಯರು ಇಷ್ಟಪಡುತ್ತಾರೆ ಎಂಬುದನ್ನು ಕೂಡ ಸೂಚಿಸುತ್ತದೆ.