ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Heritage Day 2026: ವಿಶ್ವ ಪರಂಪರೆ ದಿನ 2026: ಪಾರಂಪರಿಕ ತಾಣಗಳ ಸಂರಕ್ಷಣೆಯ ಮಹತ್ವ ಏನು?

ಪ್ರತಿ ವರ್ಷ ಏಪ್ರಿಲ್ 18ರಂದು ಆಚರಿಸಲಾಗುವ ವಿಶ್ವ ಪರಂಪರೆ ದಿನವು ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ತಾಣಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ. 2026ರ ಥೀಮ್ ಸಂಘರ್ಷ ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಪರಂಪರೆಯ ರಕ್ಷಣೆಯ ಮಹತ್ವವನ್ನು ಒತ್ತಿಹೇಳುತ್ತದೆ.

ವಿಶ್ವ ಪರಂಪರೆ ದಿನ: ಪರಂಪರೆ ಸಂರಕ್ಷಣೆ ನಮ್ಮ ಹೊಣೆ

ವಿಶ್ವ ಪರಂಪರೆ ದಿನ -

Profile
Sushmitha Jain Apr 18, 2026 8:28 AM

ಬೆಂಗಳೂರು: ವಿಶ್ವ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ದಿನವನ್ನು ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು “ವಿಶ್ವ ಪರಂಪರೆ ದಿನ”(World Heritage Day) ಅಥವಾ “ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ” ಎಂದು ಕೂಡ ಕರೆಯಲಾಗುತ್ತದೆ. ಈ ಆಚರಣೆಯ ಮುಖ್ಯ ಉದ್ದೇಶವು ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ತಾಣಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡುವ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.

ಈ ದಿನವನ್ನು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವುದರ ಜೊತೆಗೆ, ಅವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಪುರಾತನ ಸ್ಮಾರಕಗಳು ಕೇವಲ ಕಟ್ಟಡಗಳಲ್ಲ; ಅವು ಮಾನವ ನಾಗರಿಕತೆ, ಸಂಸ್ಕೃತಿ, ಕಲಾ ವೈಭವ ಮತ್ತು ಇತಿಹಾಸದ ಪ್ರತೀಕಗಳಾಗಿವೆ. ಇವುಗಳನ್ನು ರಕ್ಷಿಸುವುದು ಸಮಾಜದ ಒಟ್ಟಾರೆ ಜವಾಬ್ದಾರಿಯಾಗಿದೆ. ಹೀಗಾಗಿ ಪುರಾತನ ಸ್ಮಾರಕ ಹಾಗೂ ಸ್ಥಳಗಳ ಕುರಿತು ಇಂದಿನ ಪೀಳಿಗೆಗೆ ತಿಳಿಸಲು ಪ್ರತಿವರ್ಷ ಏ.18 ರಂದು ಜಗತ್ತಿನಾದ್ಯಂತ ವಿಶ್ವ ಪಾರಂಪರಿಕ ದಿನ ಆಚರಿಸಲಾಗುತ್ತದೆ.

ಹಾಗಾದ್ರೆ ಬನ್ನಿ ಈ ದಿನದ ಇತಿಹಾಸವೇನು..? ಮಹತ್ವ ಏನು..? ಥೀಮ್ ಏನು ಎಂಬುದನ್ನು ನೋಡೋಣ..

World’s Best Airport: 2026ರ ಟಾಪ್ 10 ವಿಶ್ವದ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ: ದೆಹಲಿ, ಮುಂಬೈಗೆ ಯಾವ ಸ್ಥಾನ ?

ಇತಿಹಾಸ

ಈ ದಿನದ ಇತಿಹಾಸ 1982ರಲ್ಲಿ ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿ (ICOMOS) ಏಪ್ರಿಲ್ 18 ಅನ್ನು ವಿಶೇಷ ದಿನವಾಗಿ ಆಚರಿಸಲು ಪ್ರಸ್ತಾಪ ಮಾಡಿದುದರಿಂದ ಆರಂಭವಾಗುತ್ತದೆ. ನಂತರ 1983ರಲ್ಲಿ ಯುನೆಸ್ಕೋ ತನ್ನ ಸಾಮಾನ್ಯ ಸಮ್ಮೇಳನದಲ್ಲಿ ಈ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು. ಆ ಬಳಿಕದಿಂದ ಪ್ರತಿವರ್ಷವೂ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೋವು ವಿಶ್ವದ ವಿವಿಧ ದೇಶಗಳಲ್ಲಿ ಇರುವ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳನ್ನು “ವಿಶ್ವ ಪರಂಪರೆ ತಾಣಗಳು” ಎಂದು ಗುರುತಿಸಿದೆ. ಪ್ರಸ್ತುತ 17೦ ದೇಶಗಳಲ್ಲಿ 1,248 ತಾಣಗಳು ಈ ಪಟ್ಟಿಯಲ್ಲಿ ಸೇರಿವೆ. ಈ ತಾಣಗಳನ್ನು ಸಂರಕ್ಷಿಸುವುದು ಮಾನವಕೋಟಿಯ ಆದ್ಯ ಜವಾಬ್ದಾರಿಯಾಗಿದೆ.

ಮಹತ್ವ

ಈ ದಿನದಂದು ವಾಸ್ತುಶಿಲ್ಪಿಗಳು, ಸಿವಿಲ್ ಇಂಜಿನಿಯರ್‌ಗಳು, ಭೂಗೋಳಶಾಸ್ತ್ರಜ್ಞರು, ಪುರಾತತ್ತ್ವ ಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ಕಲಾವಿದರು ಸೇರಿದಂತೆ ಪರಂಪರೆ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಎಲ್ಲರ ಸೇವೆಯನ್ನು ಗುರುತಿಸಲಾಗುತ್ತದೆ. ಅವರ ಪರಿಶ್ರಮದಿಂದಲೇ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಜೀವಂತವಾಗಿವೆ.

ವಿಶ್ವ ಪರಂಪರೆ ದಿನವು ಕೇವಲ ಸ್ಮಾರಕಗಳ ರಕ್ಷಣೆಗೆ ಸೀಮಿತವಾಗಿಲ್ಲ; ಇದು ಸಾಂಸ್ಕೃತಿಕ ಗುರುತು, ಪರಂಪರೆಯ ಮೌಲ್ಯಗಳು ಮತ್ತು ಸಾಮಾಜಿಕ ಏಕತೆಯನ್ನು ಕಾಪಾಡುವ ಪ್ರಮುಖ ದಿನವಾಗಿದೆ. ವಿಶೇಷವಾಗಿ ಯುವ ಪೀಳಿಗೆಗೆ ಪರಂಪರೆಯ ಮಹತ್ವವನ್ನು ತಿಳಿಸಿ, ಅದನ್ನು ಮುಂದಿನ ತಲೆಮಾರಿಗೆ ಸಾಗಿಸುವ ಜವಾಬ್ದಾರಿಯನ್ನು ಈ ದಿನ ನೆನಪಿಸುತ್ತದೆ.

World Water Day 2026: ನೀರನ್ನು ಉಳಿಸೋಣ, ಭವಿಷ್ಯವನ್ನು ಕಾಪಾಡೋಣ

ಈ ವರ್ಷದ ಥೀಮ್

2026ರ ವಿಶ್ವ ಪರಂಪರೆ ದಿನದ ಥೀಮ್ “ಸಂಘರ್ಷ ಮತ್ತು ವಿಪತ್ತುಗಳ ಸಂದರ್ಭದಲ್ಲಿ ಜೀವಂತ ಪರಂಪರೆಗೆ ತುರ್ತು ಪ್ರತಿಕ್ರಿಯೆ” ಆಗಿದ್ದು, ಯುದ್ಧ, ಪ್ರಕೃತಿ ವಿಕೋಪಗಳು ಅಥವಾ ಇತರ ಸಂಕಷ್ಟದ ಸಂದರ್ಭಗಳಲ್ಲಿ ಪರಂಪರೆಯನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಗಮನ ಸೆಳೆಯುತ್ತದೆ.

ವಿಶ್ವದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಭಾರತದ ತಾಜ್ ಮಹಲ್, ಕಾಂಬೋಡಿಯಾದ ಆಂಗ್ಕರ್ ವಾಟ್, ಜೋರ್ಡಾನ್‌ನ ಪೆಟ್ರಾ, ಪೆರುವಿನ ಮಾಚು ಪಿಚ್ಚು, ಚಿಲಿಯ ರಾಪಾ ನುಯಿ ರಾಷ್ಟ್ರೀಯ ಉದ್ಯಾನವನ, ಕ್ಯೂಬಾದ ಓಲ್ಡ್ ಹವಾನಾ, ಈಜಿಪ್ಟ್‌ನ ಪಿರಮಿಡ್‌ಗಳು, ಇಸ್ರೇಲ್‌ನ ಜೆರುಸಲೇಮ್ ಹಳೆಯ ನಗರ ಮತ್ತು ಗ್ರೀಸ್‌ನ ಅಥೆನ್ಸ್ ಅಕ್ರೊಪೊಲಿಸ್ ಪ್ರಮುಖವಾಗಿವೆ. ಇವುಗಳು ಮಾನವ ಇತಿಹಾಸದ ಅಮೂಲ್ಯ ಧನವಾಗಿದ್ದು, ವಿಶ್ವದ ಗಮನ ಸೆಳೆಯುವ ತಾಣಗಳಾಗಿವೆ.

ಒಟ್ಟಿನಲ್ಲಿ, ವಿಶ್ವ ಪರಂಪರೆ ದಿನವು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ. ಪರಂಪರೆಯನ್ನು ಕಾಪಾಡುವುದು ಅಂದರೆ ನಮ್ಮ ಭವಿಷ್ಯವನ್ನು ಕಾಪಾಡುವುದೇ ಆಗಿದೆ.