ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಹಮದಾಬಾದ್ ವಿಮಾನ ದುರಂತದ ತನಿಖೆಗೆ ಅವಶೇಷಗಳ ಸ್ಥಳಾಂತರ

Ahmedabad Plane Crash: ಜೂನ್ 12ರಂದು ಅಹಮದಾಬಾದ್‌ನ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿಯಾದ ಏರ್‌ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದ ಅವಶೇಷಗಳನ್ನು ಗುಜರಾತ್ ಪೊಲೀಸರು ನಗರದ ವಿಮಾನ ನಿಲ್ದಾಣದ ಸಮೀಪದ ಸ್ಥಳಕ್ಕೆ ಸ್ಥಳಾಂತರಿಸಲು ಆರಂಭಿಸಿದ್ದಾರೆ. ತನಿಖಾಧಿಕಾರಿಗಳು ಇಲ್ಲಿ ಅವಶೇಷಗಳನ್ನು ಜೋಡಿಸಿ ವಿಶ್ಲೇಷಣೆ ನಡೆಸಲಿದ್ದಾರೆ.

ಅಹಮದಾಬಾದ್ ವಿಮಾನ ದುರಂತ: ತನಿಖೆಗೆ ಅವಶೇಷಗಳ ಸ್ಥಳಾಂತರ

Profile Sushmitha Jain Jun 23, 2025 5:16 PM

ಗಾಂಧಿನಗರ: ಜೂ. 12ರಂದು ಅಹಮದಾಬಾದ್‌ನ (Ahmedabad) ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿಯಾದ ಏರ್‌ ಇಂಡಿಯಾದ ಬೋಯಿಂಗ್ (Boeing) 787 ಡ್ರೀಮ್‌ ಲೈನರ್ ವಿಮಾನದ ಅವಶೇಷಗಳನ್ನು ಗುಜರಾತ್ ಪೊಲೀಸರು (Gujarat Police) ನಗರದ ವಿಮಾನ ನಿಲ್ದಾಣದ (Airport) ಸಮೀಪದ ಸ್ಥಳಕ್ಕೆ ಸ್ಥಳಾಂತರಿಸಲು ಆರಂಭಿಸಿದ್ದಾರೆ. ತನಿಖಾಧಿಕಾರಿಗಳು ಇಲ್ಲಿ ಅವಶೇಷಗಳನ್ನು ಜೋಡಿಸಿ ವಿಶ್ಲೇಷಣೆ ನಡೆಸಲಿದ್ದಾರೆ.

ಅಧಿಕಾರಿಗಳ ಪ್ರಕಾರ 120 ಟನ್ ತೂಕದ ವಿಮಾನದ ಸಂಪೂರ್ಣ ಅವಶೇಷವನ್ನು ಸ್ಥಳಾಂತರಿಸಲು 48ರಿಂದ 72 ಗಂಟೆಗಳ ಕಾಲ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ 33 ಸೆಕೆಂಡ್‌ಗಳಲ್ಲಿ ವಿಮಾನವು ಹಾಸ್ಟೆಲ್‌ಗೆ ಡಿಕ್ಕಿಯಾಗಿ ಪತನವಾಗಿದೆ. ಈ ದುರಂತದಲ್ಲಿ 241 ಪ್ರಯಾಣಿಕರ ಜತೆ 30 ಜನರು ಮೃತಪಟ್ಟಿದ್ದಾರೆ.



ಈ ಸುದ್ದಿಯನ್ನೂ ಓದಿ: Ahmedabad Plane Crash: ಪತನಗೊಂಡ ವಿಮಾನದಲ್ಲಿದ್ರು ಗುಜರಾತ್‌ನ ಮಾಜಿ ಸಿಎಂ!

ಜೂ. 20ರಂದು ವರದಿಯಾಗಿದ್ದಂತೆ, ಅವಶೇಷಗಳನ್ನು ವಿಮಾನ ನಿಲ್ದಾಣದ ಬಳಿಯ ಗುಜರಾತ್ ಸ್ಟೇಟ್ ಏವಿಯೇಷನ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ (GUJSAIL) ಕಚೇರಿ ಸಮೀಪದ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಒಡೆತನದ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. "ವಿಮಾನದ ಮರುನಿರ್ಮಿತ ಭಾಗಗಳನ್ನು ಪರೀಕ್ಷಿಸಿ ದುರಂತದ ಕಾರಣವನ್ನು ಗುರುತಿಸಲಾಗುವುದು. ಬ್ಲಾಕ್ ಬಾಕ್ಸ್ ವಿಶ್ಲೇಷಣೆಯೂ ಇದರ ಭಾಗವಾಗಿರುತ್ತದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ವಿಮಾನ ದುರಂತ ತನಿಖಾ ಬ್ಯೂರೋ (AAIB) ಈ ಘಟನೆಯನ್ನು ತನಿಖೆ ಮಾಡುತ್ತಿದ್ದು, ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಂತಾರಾಷ್ಟ್ರೀಯ ತನಿಖೆಯನ್ನು ಮುನ್ನಡೆಸುತ್ತಿದೆ. ಇದುವರೆಗೆ 247 ಮೃತರನ್ನು ಡಿಎನ್‌ಎ ಮೂಲಕ ಗುರುತಿಸಲಾಗಿದ್ದು, 232 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ವಿಮಾನದ ಎರಡೂ ಫ್ಲೈಟ್ ರೆಕಾರ್ಡರ್‌ಗಳು (ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್) ಪತ್ತೆಯಾಗಿವೆ. ಮೊದಲ ಸೆಟ್ ಜೂನ್ 13ರಂದು ಮತ್ತು ಎರಡನೇ ಸೆಟ್ ಜೂನ್ 16ರಂದು ಸಿಕ್ಕಿದೆ. ಬೋಯಿಂಗ್ 787-8 ಮಾದರಿಯ ವಿಮಾನವು ಕಾಕ್‌ಪಿಟ್‌ನ ಕೆಳಗೆ ಮತ್ತು ಟೇಲ್ ಭಾಗದಲ್ಲಿ ಎರಡು ಬ್ಲಾಕ್ ಬಾಕ್ಸ್ ಸೆಟ್‌ಗಳನ್ನು ಹೊಂದಿರುತ್ತದೆ.

ಅವಶೇಷ ತೆರವು ಮತ್ತು ಸಾಗಣೆ ಪ್ರಕ್ರಿಯೆಯ ವೇಳೆ ವಿಮಾನದ ಘಟಕಗಳನ್ನು ಎಚ್ಚರಿಕೆಯಿಂದ ಕ್ಯಾಟಲಾಗ್ ಮಾಡಿ ಸಂರಕ್ಷಿಸಲಾಗುತ್ತದೆ. ದೊಡ್ಡ ರಚನಾತ್ಮಕ ಭಾಗಗಳನ್ನು ವಿಶೇಷ ಸೌಲಭ್ಯಗಳಿಗೆ ಸ್ಥಳಾಂತರಿಸಿ, ವಿಮಾನದ ಕೊನೆಯ ಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಲಾಗುತ್ತದೆ. ಇಂಜಿನ್‌ಗಳು ಮತ್ತು ನಿಯಂತ್ರಣ ಮೇಲ್ಮೈಗಳಂತಹ ನಿರ್ಣಾಯಕ ಘಟಕಗಳನ್ನು ವಿವರವಾಗಿ ವಿಶ್ಲೇಷಿಸಿ, ದೋಷಗಳನ್ನು ಗುರುತಿಸಲಾಗುತ್ತದೆ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.