ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಅಹಮಾದಾಬಾದ್‌ ವಿಮಾನ ದುರಂತ, ಪಹಲ್ಗಾಮ್‌ ಟೆರರ್‌ ಅಟ್ಯಾಕ್‌: 2025ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ದುರಂತಗಳಿವು

ನೋಡ ನೋಡುತ್ತಿದ್ದಂತೆ 2025 ಕಳೆದು ಹೋಗಿದೆ. 2026 ಅನನು ಸ್ವಾಗತಿಸಲು ಕೆಲವೇ ದಿನ ಬಾಕಿ. ಈಗ ನಿಂತು ಇಡೀ ವರ್ಷವನ್ನು ಅವಲೋಕಿಸಿದರೆ ದೇಶದಲ್ಲಿ ಬೆಚ್ಚಿ ಬೀಳಿಸುವ ಅನೇಕ ದುರಂತಗಳು ನಡೆದಿರುವುದು ಕಂಡು ಬಂದಿದೆ. ಈ ಕುರಿತಾದ ವಿವರ ಇಲ್ಲಿದೆ.

2025ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ದುರಂತಗಳಿವು

2025ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ದುರಂತಗಳಿವು -

Priyanka P
Priyanka P Dec 21, 2025 4:01 PM

ನವದೆಹಲಿ: 2025ರ ಕೊನೆಯ ಭಾಗದಲ್ಲಿದ್ದೇವೆ. ಈ ವರ್ಷ ಭಾರತದಲ್ಲಿ ಕೆಲವು ದುರಂತ ಮತ್ತು ಆಘಾತಕಾರಿ ಘಟನೆಗಳು ಸಂಭವಿಸಿವೆ. ಕಾಲ್ತುಳಿತ ಪ್ರಕರಣ, ವಿಮಾನ ಪತನದಿಂದ ಹಿಡಿದು ಭಯೋತ್ಪಾದಕಾ ದಾಳಿ ನಡೆದು ಅಪಾರ ಸಾವು-ನೋವು ಸಂಭವಿಸಿದೆ. 2025ರಲ್ಲಿ ದೇಶವನ್ನು ಶೋಕದಲ್ಲಿ ಮುಳುಗಿಸಿದ ಪ್ರಮುಖ ವಿಪತ್ತುಗಳ ಬಗ್ಗೆ ಇಲ್ಲಿದೆ ವಿವರ:

ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ಕಾಲ್ತುಳಿತ (ಜನವರಿ 29)

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ಸಮಯದಲ್ಲಿ, ಅತ್ಯಂತ ಶುಭ ಸ್ನಾನದ ದಿನವಾದ ಮೌನಿ ಅಮಾವಾಸ್ಯೆಯಂದು ದುರಂತ ಸಂಭವಿಸಿತು. ಲಕ್ಷಾಂತರ ಜನರು ಸಂಗಮ ಘಾಟ್‌ನಲ್ಲಿ ನೆರೆದಿದ್ದಾಗ, ಹಠಾತ್ ಜನಸಂದಣಿಯಿಂದಾಗಿ ಮಾರಕ ಕಾಲ್ತುಳಿತಕ್ಕೆ ನಡೆಯಿತು. ಇದರಿಂದ 37 ಮಂದಿ ಭಕ್ತರು ಮೃತಪಟ್ಟರು ಮತ್ತು 60ಕ್ಕೂ ಹೆಚ್ಚು ಜನರು ಗಾಯಗೊಂಡರು. ಪವಿತ್ರ ಸ್ನಾನ ಬ್ರಹ್ಮ ಬೇಲಾ ಸಮಯದಲ್ಲಿ ಕಾಲ್ತುಳಿತ ಸಂಭವಿಸಿತು. ಈ ವೇಳೆ 660 ಮಿಲಿಯನ್‌ಗಿಂತಲೂ ಹೆಚ್ಚು ಯಾತ್ರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಎಷ್ಟು ಮಂದಿ? ಇಲ್ಲಿದೆ ವಿವರ

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ (ಫೆಬ್ರವರಿ 15)

ಒಂದೇ ದಿನ, ಎರಡು ಪ್ರತ್ಯೇಕ ದುರಂತಗಳು ಸಂಭವಿಸಿದವು. ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಮತ್ತೊಂದು ಕಾಲ್ತುಳಿತವು ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ 18 ಯಾತ್ರಿಕರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಅವರಲ್ಲಿ 14 ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟರು. ಸುಳ್ಳು ಎಚ್ಚರಿಕೆಯಿಂದಾಗಿ ಜನಸಂದಣಿಯಲ್ಲಿ ಅಸ್ತವ್ಯಸ್ಥ ಉಂಟಾಗಿ ಈ ದುರಂತ ಸಂಭವಿಸಿತ್ತು. ಈ ಮಧ್ಯೆ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ 10 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಎಸ್‌ಯುವಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಅಪಾರ ಸಾವುನೋವು ಸಂಭವಿಸಿತು. ಎಸ್‌ಯುವಿಯಲ್ಲಿದ್ದ ಎಲ್ಲ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರು.

ಗುಜರಾತ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದಿಂದ ಬೆಂಕಿ (ಏಪ್ರಿಲ್ 1)

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಶಾದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿತು. ಇದು ತಕ್ಷಣವೇ ಇಡೀ ಘಟಕವನ್ನು ಆವರಿಸಿಕೊಂಡಿತು. ಬೆಂಕಿ ವೇಗವಾಗಿ ಹರಡುತ್ತಿದ್ದಂತೆ 17 ಕಾರ್ಮಿಕರು ಸಿಲುಕಿಕೊಂಡು ಮೃತಪಟ್ಟರು. ಈ ಘಟನೆಯು ಕೈಗಾರಿಕಾ ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿನ ಲೋಪಗಳನ್ನು ಒತ್ತಿ ಹೇಳುತ್ತದೆ. ಅಪಾಯಕಾರಿ ಉತ್ಪಾದನಾ ಘಟಕಗಳಲ್ಲಿನ ನಿಯಂತ್ರಕ ಮೇಲ್ವಿಚಾರಣೆಯ ಬಗ್ಗೆ ತೀವ್ರ ಟೀಕೆಗೆ ಗುರಿಯಾಯಿತು.

ಜಮ್ಮು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ (ಏಪ್ರಿಲ್ 22)

ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಹಿಂದೂ ಪ್ರವಾಸಿಗರ ಗುಂಪೊಂದರ ಮೇಲೆ ಶಸ್ತ್ರಸಜ್ಜಿತ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಕೋರರು ಗುಂಪಿನ ಮೇಲೆ ಗುಂಡು ಹಾರಿಸುವ ಮೊದಲು ಧರ್ಮ ಯಾವುದು ಎಂಬ ಬಗ್ಗೆ ಪ್ರಶ್ನಿಸಿದ್ದರು. ಇಂದೋರ್‌ನ ಕ್ರಿಶ್ಚಿಯನ್ ವ್ಯಕ್ತಿ ಮತ್ತು ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸಿದ ಸ್ಥಳೀಯ ಮುಸ್ಲಿಂ ಮಾರ್ಗದರ್ಶಿ ಸೇರಿದಂತೆ 26 ಪ್ರವಾಸಿಗರು ಮೃತಪಟ್ಟಿದ್ದರು. ಇದು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಗಡಿಯುದ್ದಕ್ಕೂ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು.

ಬೆಂಗಳೂರಿನಲ್ಲಿ ಐಪಿಎಲ್ ಆಚರಣೆಯ ಕಾಲ್ತುಳಿತ (ಜೂನ್ 4)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಚರಿಸುತ್ತಿದ್ದ ಸಮಯದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಮಾರಕ ಕಾಲ್ತುಳಿತ ಸಂಭವಿಸಿತ್ತು. ಕ್ರೀಡಾಂಗಣದ ಗೇಟ್‌ಗಳ ಹೊರಗೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು, 47 ಜನರು ಗಾಯಗೊಂಡರು. ಅಭಿಮಾನಿಗಳು ಅಗಾಧ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರಣ, ಪೊಲೀಸರಿಗೆ ನಿಯಂತ್ರಿಸಲು ಸಾಧ್ಯವಾಗದೆ ಈ ದುರಂತ ಸಂಭವಿಸಿತ್ತು.

ಬಿಹಾರ, ದಿಲ್ಲಿ ಚುನಾವಣೆ, ಉಪರಾಷ್ಟ್ರಪತಿ ಧಿಡೀರ್‌ ರಾಜೀನಾಮೆ...ಈ ವರ್ಷ ಭಾರತದ ರಾಜಕೀಯ ಸ್ಥಿತಿಗತಿ ಹೇಗಿತ್ತು?

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ (ಜೂನ್ 12)

ಮಧ್ಯಾಹ್ನ 1:38ರ ಸುಮಾರಿಗೆ ಅಹಮದಾಬಾದ್‌ನಲ್ಲಿ ಟೇಕಾಫ್ ಆಗುತ್ತಿದ್ದ ಏರ್ ಇಂಡಿಯಾ ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದ್ದು, ಇದುವರೆಗಿನ ಅತ್ಯಂತ ಭೀಕರ ದುರಂತ ಎನಿಸಿಕೊಂಡಿದೆ. ಈ ದುರಂತದಲ್ಲಿ 242 ಪ್ರಯಾಣಿಕರಲ್ಲಿ 241 ಜನರು ಸಾವನ್ನಪ್ಪಿದರು. ವಿಮಾನ ಅಪಘಾತದಿಂದಾಗಿ ಸ್ಥಳೀಯ ನಿವಾಸಿಗಳು ಸೇರಿದಂತೆ ಒಟ್ಟು ಸಾವಿನ ಸಂಖ್ಯೆ 275ಕ್ಕೆ ಏರಿತು. ಈ ಅಪಘಾತವನ್ನು ಭಾರತೀಯ ಇತಿಹಾಸದಲ್ಲಿ ಅತ್ಯಂತ ದುರಂತ ವಾಯುಯಾನ ವಿಪತ್ತುಗಳಲ್ಲಿ ಒಂದೆಂದು ಕರೆಯಲಾಗಿದೆ.

ಕರೂರ್ ದುರಂತ (ಸೆಪ್ಟೆಂಬರ್ 27)

ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ನೇತೃತ್ವದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಸಂಜೆ 7.30ರ ಸುಮಾರಿಗೆ ವಿಜಯ್ ಚೆನ್ನೈನಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಕರೂರಿನಲ್ಲಿ ಮಧ್ಯಾಹ್ನದಿಂದ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಟಿವಿಕೆ ಮುಖ್ಯಸ್ಥ ವಿಜಯ್ ಮಾತನಾಡುತ್ತಿದ್ದಾಗ ಕಾಲ್ತುಳಿತ ಸಂಭವಿಸಿತ್ತು.