Minimum Balance Rules: ICICI ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್ 50,000, ಆದ್ರೆ ಈ ಬ್ಯಾಂಕ್‌ಗಳಲ್ಲಿ ಝೀರೊ ಆದ್ರೂ ದಂಡ ಇಲ್ಲ!
ಐಸಿಐಸಿಐ ಬ್ಯಾಂಕಿಂಗ್ ಇಂಡಸ್ಟ್ರಿಯಲ್ಲಿಯೇ ಅತಿ ಹೆಚ್ಚು ಮಿನಿಮಮ್ ಬ್ಯಾಲೆನ್ಸ್ ಅಗತ್ಯವನ್ನು ಜಾರಿಗೊಳಿಸಿದ ಬ್ಯಾಂಕ್ ಆಗಿದೆ. ಇದಕ್ಕೆ ಕೆಲವರು ಟೀಕೆಗಳನ್ನೂ ಮಾಡಿದ್ದಾರೆ. ಮುಖ್ಯವಾಗಿ ಜನ ಸಾಮಾನ್ಯರಿಗೆ ಇದರಿಂದ ಐಸಿಐಸಿಐ ಬ್ಯಾಂಕ್‌ನ ಸೇವೆಗಳನ್ನು ಪಡೆಯಲು ಸಾಧ್ಯವಾಗದು ಎಂಬ ಆರೋಪ ಇದೆ. ಈ ಕನಿಷ್ಠ ಬ್ಯಾಲೆನ್ಸ್ ತಪ್ಪಿದರೆ 500/- ದಂಡ ಇರಲಿದೆ.


ಮುಂಬೈ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ, 2025ರ ಆಗಸ್ಟ್ 1ರಿಂದ ನಗರ ಪ್ರದೇಶಗಳಲ್ಲಿ ಗ್ರಾಹಕರಿಗೆ ಹೊಸ ಉಳಿತಾಯ(Minimum Balance Rules) ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು 10,000/- ಗಳಿಂದ ಬರೋಬ್ಬರಿ 50,000 /-ಕ್ಕೆ ಹೆಚ್ಚಿಸಿದೆ. ಇದು ಪಟ್ಟಣ ಪ್ರದೇಶಗಳಲ್ಲಿ 25,000/- ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 10,000/- ಇರಲಿದೆ.
ಅಂದ್ರೆ ಆಗಸ್ಟ್ 1ರಿಂದ ಹೊಸ ಖಾತೆಗಳಿಗೆ ಇದು ಅನ್ವಯವಾಗುತ್ತದೆ. ಈಗಾಗಲೇ ಇರುವಂತಹ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಇದರಿಂದಿಗೆ ಐಸಿಐಸಿಐ ಬ್ಯಾಂಕಿಂಗ್ ಇಂಡಸ್ಟ್ರಿಯಲ್ಲಿಯೇ ಅತಿ ಹೆಚ್ಚು ಮಿನಿಮಮ್ ಬ್ಯಾಲೆನ್ಸ್ ಅಗತ್ಯವನ್ನು ಜಾರಿಗೊಳಿಸಿದ ಬ್ಯಾಂಕ್ ಆಗಿದೆ. ಇದಕ್ಕೆ ಕೆಲವರು ಟೀಕೆಗಳನ್ನೂ ಮಾಡಿದ್ದಾರೆ. ಮುಖ್ಯವಾಗಿ ಜನ ಸಾಮಾನ್ಯರಿಗೆ ಇದರಿಂದ ಐಸಿಐಸಿಐ ಬ್ಯಾಂಕ್‌ನ ಸೇವೆಗಳನ್ನು ಪಡೆಯಲು ಸಾಧ್ಯವಾಗದು ಎಂಬ ಆರೋಪ ಇದೆ. ಈ ಕನಿಷ್ಠ ಬ್ಯಾಲೆನ್ಸ್ ತಪ್ಪಿದರೆ 500/- ದಂಡ ಇರಲಿದೆ.
ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಟಿಎಂಗಳಲ್ಲಿ ನಗದು ಹಿಂತೆಗೆತಕ್ಕೂ ನಿರ್ದಿಷ್ಟ ಮಿತಿಯ ಬಳಿಕ ಶುಲ್ಕ ವಿಧಿಸುತ್ತಿದೆ. ಈ ದರವನ್ನು ಹೆಚ್ಚಿಸಲಾಗಿದೆ. ಗ್ರಾಹಕರು ಪ್ರತಿ ತಿಂಗಳು ಮೂರು ಸಲ ಉಚಿತವಾಗಿ ಹಣವನ್ನು ಎಟಿಎಂ ಮೂಲಕ ಹಿಂಪಡೆಯಬಹುದು. ಬಳಿಕ ಪ್ರತಿ ವರ್ಗಾವಣೆಗೂ 150/- ಶುಲ್ಕವನ್ನು ಕೊಡಬೇಕಾಗುತ್ತದೆ.
ಹೀಗಿದ್ದರೂ, ಭಾರತದಲ್ಲಿ ಹಲವು ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ಇರಬೇಕು ಎಂಬ ನಿಯಮವನ್ನೇ ರದ್ದುಪಡಿಸಿವೆ. ಬ್ಯಾಲೆನ್ಸ್‌ನಲ್ಲಿ ಒಂದು ರುಪಾಯಿ ಇಲ್ಲದಿದ್ದರೂ, ಶೂನ್ಯ ಬ್ಯಾಲೆನ್ಸ್ ಆದರೂ, ದಂಡವನ್ನು ವಿಧಿಸದಿರುವ ಬ್ಯಾಂಕ್‌ಗಳೂ ಇವೆ. ಉದಾಹರಣೆಗೆ ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕಾಗಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಕೂಡ ಕನಿಷ್ಠ ಬ್ಯಾಲೆನ್ಸ್ ತಪ್ಪಿದರೆ ದಂಡ ವಿಧಿಸುವುದಿಲ್ಲ. ಈ ಬ್ಯಾಂಕ್‌ಗಳು ಗ್ರಾಹಕರಿಗೆ ನೆಮ್ಮದಿಯ ನಿರಾಳ ಭಾವವನ್ನು ಮೂಡಿಸಿವೆ.
ಈಗ ಯಾವ ಬ್ಯಾಂಕ್‌ಗಳಲ್ಲಿ ಗ್ರಾಮೀಣ/ನಗರ-ಪಟ್ಟಣ ಶಾಖೆಗಳಲ್ಲಿ ಉಳಿತಾಯ ಖಾತೆ ಅಥವಾ ಸೇವಿಂಗ್ಸ್ ಅಕೌಂಟ್‌ಗೆ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು ಎಂಬ ವಿವರಗಳನ್ನು ನೋಡೋಣ.
ಈ ಸುದ್ದಿಯನ್ನೂ ಓದಿ: BRBNMPL Recruitment 2025: ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನಲ್ಲಿದೆ 88 ಹುದ್ದೆ; ಐಟಿಐ ಪಾಸಾದವರು ಅಪ್ಲೈ ಮಾಡಿ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಎಸ್‌ಬಿಐನಲ್ಲಿ ಗ್ರಾಮೀಣ ಶಾಖೆಗಳಲ್ಲಿ ಮತ್ತು ನಗರ, ಪಟ್ಟಣಗಳಲ್ಲಿ ಉಳಿತಾಯ ಖಾತೆಯಲ್ಲಿ ಝೀರೊ ಬ್ಯಾಲೆನ್ಸ್ ಇರಬಹುದು.
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಗ್ರಾಮೀಣ ಶಾಖೆಗಳಲ್ಲಿ ಚೆಕ್ ಬುಕ್ ಸಹಿತ ಉಳಿತಾಯ ಖಾತೆಗೆ 250/- ಮಿನಿಮಮ್ ಬ್ಯಾಲೆನ್ಸ್ ಅಗತ್ಯ. ನಗರ, ಪಟ್ಟಣಗಳಲ್ಲಿ ಉಳಿತಾಯ ಖಾತೆಯಲ್ಲಿ 1,000/- ಕನಿಷ್ಠ ಬ್ಯಾಲೆನ್ಸ್ ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಚೆಕ್ ಬುಕ್ ಇಲ್ಲದಿದ್ದರೆ 100/- ಮಿನಿಮಮ್ ಬ್ಯಾಲೆನ್ಸ್ ಹಾಗೂ ನಗರಗಳಲ್ಲಿ 500/- ಕನಿಷ್ಠ ಬ್ಯಾಲೆನ್ಸ್ ಅಗತ್ಯ.
- ಎಚ್‌ಡಿಎಫ್‌ಸಿ ಬ್ಯಾಂಕ್: ಗ್ರಾಮೀಣ ಪ್ರದೇಶಗಳಲ್ಲಿ 2,500/- ನಗರಗಳಲ್ಲಿ 10,000/- ಕನಿಷ್ಠ ಬ್ಯಾಲೆನ್ಸ್ ಬೇಕು.
- ಐಸಿಐಸಿಐ ಬ್ಯಾಂಕ್ : ಗ್ರಾಮೀಣ ಭಾಗದಲ್ಲಿ 10,000/- ನಗರಗಳಲ್ಲಿ 50,000/- ಮಿನಿಮಮ್ ಬ್ಯಾಲೆನ್ಸ್ ಅವಶ್ಯಕ.
- ಎಕ್ಸಿಸ್ ಬ್ಯಾಂಕ್: ಗ್ರಾಮೀಣ ಭಾಗದಲ್ಲಿ 2,500/- ನಗರಗಳಲ್ಲಿ 12,000/- ಮಿನಿಮಮ್ ಬ್ಯಾಲೆನ್ಸ್ ಅವಶ್ಯಕ.
- ಬ್ಯಾಂಕ್ ಆಫ್ ಬರೋಡಾ: ಗ್ರಾಮೀಣ ಭಾಗದಲ್ಲಿ 500/- ನಗರಗಳಲ್ಲಿ 2,000/- ಮಿನಿಮಮ್ ಬ್ಯಾಲೆನ್ಸ್ ಅವಶ್ಯಕ.
- ಬ್ಯಾಂಕ್ ಆಫ್ ಇಂಡಿಯಾ: ಗ್ರಾಮೀಣ-ನಗರಗಳಲ್ಲಿ ಝೀರೊ ಬ್ಯಾಲೆನ್ಸ್ ಇರಬಹುದು.
- ಕೆನರಾ ಬ್ಯಾಂಕ್: ಗ್ರಾಮೀಣ ಪ್ರದೇಶದಲ್ಲಿ 500/- ನಗರ ಪ್ರದೇಶದಲ್ಲಿ 2,000/- ಕನಿಷ್ಠ ಬ್ಯಾಲೆನ್ಸ್ ಇರಬೇಕು.