ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಅಮೆಜಾನ್ ಪ್ರೈಮ್‌ ಗೆ 10ರ ಸಂಭ್ರಮ: ಗ್ರಾಹಕರ ನಂಬಿಕೆ ಗಳಿಸಲು ಕಾರಣರಾದ ತೆರೆಮರೆಯ ಶಕ್ತಿಗಳು

ಕಳೆದ ಹತ್ತು ವರ್ಷಗಳಲ್ಲಿ ಪ್ರೈಮ್ ಸೇವೆಯು ಕೇವಲ ಉಚಿತ ಮತ್ತು ವೇಗದ ಡೆಲಿವರಿಯನ್ನು ಮೀರಿ ವ್ಯಾಪಕವಾಗಿ ವಿಸ್ತರಣೆಗೊಂಡಿದೆ. ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳ ಮನರಂಜನೆ, ಪ್ರೈಮ್ ಡೇ ನಂತಹ ವಿಶೇಷ ಶಾಪಿಂಗ್ ಹಬ್ಬಗಳು ಹಾಗೂ ಗ್ರಾಹಕರ ಹಣ ಉಳಿತಾಯಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಈ ಸದಸ್ಯತ್ವವು ನಿರಂತರ ವಾಗಿ ವಿಕಸನಗೊಂಡಿದೆ.

ಭಾರತದಲ್ಲಿ ಅಮೆಜಾನ್ ಪ್ರೈಮ್‌ ಗೆ 10ರ ಸಂಭ್ರಮ

-

Profile
Ashok Nayak Jul 10, 2026 10:58 AM

ಸರಿಯಾಗಿ ಒಂದು ದಶಕದ ಹಿಂದೆ, ಅಮೆಜಾನ್ ಪ್ರೈಮ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಗ್ರಾಹಕರಿಗೆ ಅತ್ಯಂತ ವೇಗದ ಮತ್ತು ಸುಲಭವಾದ ಶಾಪಿಂಗ್ ಅನುಭವ ಒಂದಗಿಸುವ ಒಂದು ಸರಳ ಭರವಸೆ ನೀಡಿತ್ತು. ಈಗ ನೋಡಿದರೆ, ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಇಂದು ಪ್ರೈಮ್ ಕೇವಲ ಡೆಲಿವರಿ ವ್ಯವಸ್ಥೆಯಾಗಿ ಉಳಿದಿಲ್ಲ. ಬದಲಿಗೆ ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಶಾಪಿಂಗ್, ಬಂಪರ್ ಉಳಿತಾಯ, ಮನರಂಜನೆ ಮತ್ತು ದೈನಂದಿನ ಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಬೃಹತ್ ಡಿಜಿಟಲ್ ಕುಟುಂಬವಾಗಿ ಬೆಳೆದು ನಿಂತಿದೆ.

ಕಳೆದ ಹತ್ತು ವರ್ಷಗಳಲ್ಲಿ ಪ್ರೈಮ್ ಸೇವೆಯು ಕೇವಲ ಉಚಿತ ಮತ್ತು ವೇಗದ ಡೆಲಿವರಿಯನ್ನು ಮೀರಿ ವ್ಯಾಪಕವಾಗಿ ವಿಸ್ತರಣೆಗೊಂಡಿದೆ. ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳ ಮನರಂಜನೆ, ಪ್ರೈಮ್ ಡೇ ನಂತಹ ವಿಶೇಷ ಶಾಪಿಂಗ್ ಹಬ್ಬಗಳು ಹಾಗೂ ಗ್ರಾಹಕರ ಹಣ ಉಳಿತಾಯಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಈ ಸದಸ್ಯತ್ವವು ನಿರಂತರವಾಗಿ ವಿಕಸನಗೊಂಡಿದೆ. ಗ್ರಾಹಕರು ಈ ಎಲ್ಲಾ ಆಧುನಿಕ ಸೌಲಭ್ಯಗಳನ್ನು ನೇರವಾಗಿ ಅನುಭವಿಸುತ್ತಿದ್ದರೆ, ಇದರ ಯಶಸ್ಸಿನ ಹಿಂದೆ ಮತ್ತೊಂದು ರೋಚಕ ಕಥೆಯಿದೆ. ಅದುವೇ ಪ್ರೈಮ್ ಸೇವೆಯನ್ನು ಪ್ರತಿ ಹಂತದಲ್ಲೂ ಅತ್ಯುತ್ತಮವಾಗಿಸಲು ಹಗಲಿರುಳು ಶ್ರಮಿಸಿದ ತಾಂತ್ರಿಕ ಮತ್ತು ಕಾರ್ಯಕಾರಿ ತಂಡದ ಪರಿಶ್ರಮ.

ಅಮೆಜಾನ್ ಪ್ರೈಮ್‌ ನ ಸೀನಿಯರ್ ಮ್ಯಾನೇಜರ್ ಆದ ಪಲ್ಲವಿ ಸಿಂಗ್ ಅವರ ಪ್ರಕಾರ, ಕಳೆದ ಹತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಅವರು ಕಲಿತ ದೊಡ್ಡ ಪಾಠವೆಂದರೆ, ಗ್ರಾಹಕರ ನಿರೀಕ್ಷೆಗಳು ಎಂದಿಗೂ ಒಂದೇ ಕಡೆ ಸ್ಥಿರವಾಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿರುವುದು. ಈ ಕುರಿತು ಅವರು, "ಇಂದಿನ ಭಾರತದಲ್ಲಿ ಪ್ರೈಮ್ ಸೇವೆ ಇರೋದಕ್ಕೂ, ಹತ್ತು ವರ್ಷಗಳ ಹಿಂದೆ ಇದ್ದುದಕ್ಕೂ ಭಾರಿ ವ್ಯತ್ಯಾಸವಿದೆ. ಏಕೆಂದರೆ ನಮ್ಮ ಗ್ರಾಹಕರು ಈಗ ಬದಲಾಗಿದ್ದಾರೆ. ಸೌಕರ್ಯ, ವೇಗ, ಮೌಲ್ಯ ಮತ್ತು ಮನರಂಜನೆಯ ವಿಷಯದಲ್ಲಿ ಅವರ ನಿರೀಕ್ಷೆಗಳು ನಿರಂತರವಾಗಿ ವಿಕಸನ ಗೊಳ್ಳುತ್ತಿವೆ ಮತ್ತು ಅದಕ್ಕೆ ತಕ್ಕಂತೆ ನಾವೂ ಕೂಡ ನಮ್ಮನ್ನು ಬದಲಾಯಿಸಿಕೊಳ್ಳುತ್ತಾ ಸಾಗು ತ್ತಿದ್ದೇವೆ" ಎಂದು ಹೇಳುತ್ತಾರೆ.

ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ

ಇದೇ ಆಲೋಚನೆಯು ಆರಂಭದಿಂದಲೂ ಪ್ರೈಮ್ ಸೇವೆಯನ್ನು ರೂಪಿಸುತ್ತಾ ಬಂದಿದೆ. ಗ್ರಾಹಕರು ತಮ್ಮ ಸದಸ್ಯತ್ವದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಂತೆ, ಅವರ ದೈನಂದಿನ ಜೀವನವನ್ನು ಇನ್ನಷ್ಟು ಸುಲಭಗೊಳಿಸುವತ್ತ ಗಮನ ಹರಿಸಿದ ಪ್ರೈಮ್, ತನ್ನ ಕೊಡುಗೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಾ ಸಾಗಿತು. ಇದನ್ನು ಪಲ್ಲವಿ ಅವರು ಅತ್ಯಂತ ಸರಳವಾಗಿ, "ಯಾವುದೇ ಸೇವೆ ಅಥವಾ ಮೌಲ್ಯ ಎಂಬುದು ಎಂದಿಗೂ ಸ್ಥಿರವಾಗಿರುವುದಿಲ್ಲ" ಎಂದು ಹೇಳುತ್ತಾರು. ಗ್ರಾಹಕರು ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಆದರೆ ಸಮಯ ಕಳೆದಂತೆ ಅದರ ಮೇಲಿನ ಅವರ ನಿರೀಕ್ಷೆಗಳು ಬದಲಾಗುತ್ತವೆ. ಭಾರತದಲ್ಲಿ ಪ್ರೈಮ್‌ ನ ಈ ಅಭೂತಪೂರ್ವ ಬೆಳವಣಿಗೆಗೆ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ನಿರಂತರವಾಗಿ ಆಲಿಸು ವುದು ಮತ್ತು ಅದಕ್ಕೆ ತಕ್ಕಂತೆ ಸ್ಪಂದಿಸುವುದೇ ಪ್ರಮುಖ ಕಾರಣವಾಗಿದೆ.

ಗ್ರಾಹಕರು ಕೇವಲ ಕೊನೆಯ ಹಂತದ ಅತ್ಯುತ್ತಮ ಅನುಭವವನ್ನು ಮಾತ್ರ ಕಾಣುತ್ತಾರೆ. ಆದರೆ ಅದನ್ನು ಸಾಕಾರಗೊಳಿಸಲು ಅಮೆಜಾನ್‌ ನ ವಿವಿಧ ವಿಭಾಗಗಳ ತಂಡಗಳು ಪ್ರತಿ ದಿನವೂ ಒಟ್ಟಾಗಿ ಶ್ರಮಿಸುತ್ತವೆ. ಅಮೆಜಾನ್ ಸಪ್ಲೈ ಚೈನ್ ವಿಭಾಗದ ಪ್ರೋಗ್ರಾಂ ಮ್ಯಾನೇಜರ್ ಆಗಿರುವ ಪುಷ್ಪಾ ಸಿಂಗ್ ಅವರಿಗೆ, ಭಾರತದಲ್ಲಿ ಪ್ರೈಮ್ ಆರಂಭವಾದ ಆ ದಿನಗಳ ನೆನಪುಗಳು ಇಂದಿಗೂ ಅತ್ಯಂತ ಸರಳ ಹಾಗೂ ಸುಂದರವಾಗಿ ನೆನಪಾಗಿ ಉಳಿದಿವೆ. ಅವರು ಈ ಕುರಿತು, "ಭಾರತದಲ್ಲಿ ಪ್ರೈಮ್ ಲಾಂಚ್ ಆದ ಆ ದಿನ, ನಾನು ಫುಲ್‌ ಫಿಲ್‌ ಮೆಂಟ್ ಸೆಂಟರ್‌ ನ (ದಾಸ್ತಾನು ಮಳಿಗೆ) ನೆಲದ ಮೇಲೆಯೇ ನಿಂತು ನಮ್ಮ ಮೊದಲ ಸದಸ್ಯರಿಗಾಗಿ ವೆಲ್ಕಮ್ ಕಿಟ್ ಗಳನ್ನು ಜೋಡಿಸಲು ಸಹಾಯ ಮಾಡುತ್ತಿದ್ದ ನೆನಪು ಇಂದಿಗೂ ಹಸಿರಾಗಿದೆ. ಅವುಗಳೇನು ಅತ್ಯಂತ ದುಬಾರಿ ಪ್ಯಾಕೇಜ್‌ ಗಳಾಗಿರಲಿಲ್ಲ, ಆದರೆ ಆ ಪ್ರತಿಯೊಂದು ಕಿಟ್ ಅನ್ನು ಸಿದ್ಧಪಡಿಸುವಲ್ಲಿ ನಾವು ವಹಿಸಿದ ಕಾಳಜಿ ಮಾತ್ರ ಹಿರಿದಾಗಿತ್ತು. ನಾವು ಅಲ್ಲಿ ಕೇವಲ ಒಂದು ಬಾಕ್ಸ್ ಅನ್ನು ಪ್ಯಾಕ್ ಮಾಡುತ್ತಿರಲಿಲ್ಲ, ಬದಲಿಗೆ ಗ್ರಾಹಕರಿಗೆ ನೀಡಿದ ಒಂದು ಭರವಸೆಯನ್ನು ಪ್ಯಾಕ್ ಮಾಡುತ್ತಿದ್ದೆವು" ಎಂದು ಹೇಳುತ್ತಾರ, ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಆ ಒಂದು ಆರಂಭಿಕ ಭರವಸೆಯೇ ಇಂದು ಪ್ರಾಡಕ್ಟ್, ತಂತ್ರಜ್ಞಾನ, ಕಾರ್ಯಾಚರಣೆ, ದಾಸ್ತಾನು ನಿರ್ವಹಣೆ (ಫುಲ್‌ ಫಿಲ್‌ ಮೆಂಟ್), ಸಾರಿಗೆ ಮತ್ತು ಗ್ರಾಹಕ ಸೇವಾ ವಿಭಾಗಗಳಲ್ಲಿ ಪ್ರತಿದಿನ ನಡೆಯುವ ಕೆಲಸಗಳಿಗೆ ದಿಕ್ಸೂಚಿಯಾಗಿದೆ. ಪ್ರೈಮ್ ಡೇ ನಂತಹ ಬೃಹತ್ ಶಾಪಿಂಗ್ ಹಬ್ಬಗಳ ಯೋಜನೆಗಳು ಹಲವು ತಿಂಗಳುಗಳ ಮುಂಚಿತವಾಗಿಯೇ ಆರಂಭವಾಗುತ್ತವೆ. ಈ ವೇಳೆ ವಿವಿಧ ತಂಡಗಳು ಗ್ರಾಹಕರ ಬೇಡಿಕೆಯನ್ನು ಮುಂಚಿತವಾಗಿ ಅಂದಾಜಿಸುವುದು, ಉತ್ಪನ್ನಗಳನ್ನು ಗ್ರಾಹಕರಿಗೆ ಆದಷ್ಟು ಹತ್ತಿರದ ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹಿಸುವುದು ಹಾಗೂ ವಿತರಣಾ ಜಾಲವನ್ನು ಬಲಪಡಿಸುವ ಕೆಲಸ ಮಾಡುತ್ತವೆ. ಇದರೊಂದಿಗೆ, ಗ್ರಾಹಕರು ನಿರೀಕ್ಷಿತ ಅನುಭವನ್ನು ಪಡೆಯುವುದನ್ನು ಮುಂದುವರಿಸಲು ಅವರ ಪ್ರತಿಕ್ರಿಯೆಗಳಿಂದ ನಿರಂತರವಾಗಿ ಕಲಿಯುತ್ತಿರುತ್ತವೆ.

ಪುಷ್ಪಾ ಅವರ ಪ್ರಕಾರ, ಕಳೆದ ಒಂದು ದಶಕದ ಪಯಣದಲ್ಲಿ ಅವರು ಕಲಿತ ಅತ್ಯಂತ ದೊಡ್ಡ ಪಾಠವೆಂದರೆ, ನಂಬಿಕೆ ಎಂಬುದು ನಿರಂತರತೆಯಿಂದ ಮಾತ್ರ ನಿರ್ಮಾಣವಾಗುತ್ತದೆ ಎಂಬುದು. "ನಾವು ದಾಸ್ತಾನು ಮಾಡುವ ಪ್ರತಿಯೊಂದು ಉತ್ಪನ್ನ, ನಾವು ಯೋಜಿಸುವ ಪ್ರತಿಯೊಂದು ವಿತರಣಾ ಮಾರ್ಗ ಮತ್ತು ನಾವು ಪ್ರಕಟಿಸುವ ಪ್ರತಿಯೊಂದು ಮುನ್ಸೂಚನೆಯೂ ಗ್ರಾಹಕರ ನಂಬಿಕೆಯನ್ನು ವೃದ್ಧಿಸುತ್ತದೆ ಅಥವಾ ಅದನ್ನು ಮುರಿಯುತ್ತದೆ. ಅತಿ ವೇಗದ ಡೆಲಿವರಿಗಿಂತಲೂ ಗ್ರಾಹಕರಿಗೆ ನೀಡುವ ನಂಬಿಕಸ್ಥ ಸೇವೆಯೇ ಸದಾ ಗೆಲ್ಲುತ್ತದೆ" ಎಂದು ಅವರು ಹೇಳುತ್ತಾರೆ.

ಕಳೆದ ಹತ್ತು ವರ್ಷಗಳಲ್ಲಿ ಪ್ರೈಮ್ ಸೇವೆ ಲಕ್ಷಾಂತರ ಸದಸ್ಯರ ವಿಶ್ವಾಸವನ್ನು ಗಳಿಸಲು ಮೂಲ ಭೂತ ವಿಷಯಗಳನ್ನು ಅತ್ಯಂತ ನಿಖರವಾಗಿ ನಿರ್ವಹಿಸುವಲ್ಲಿ ಹೊಂದಿರುವ ಈ ಪಟ್ಟುಬಿಡದ ಹಠವೇ ಪ್ರಮುಖ ಕಾರಣವಾಗಿದೆ.

ಗ್ರಾಹಕರ ಧ್ವನಿಯನ್ನು ಆಲಿಸುವುದು ಪ್ರೈಮ್‌ ನ ಹೊಸತನದ ಹಾದಿಯನ್ನೂ ರೂಪಿಸಿದೆ. ಅಮೆಜಾನ್‌ ನ ಡೀಲ್ಸ್ ಮತ್ತು ಈವೆಂಟ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ಹಾಗೂ ಜೆನ್‌ ಎಐ ಮಾರ್ಕೆಟಿಂಗ್ ಲೀಡ್ ಆಗಿರುವ ವರುಣ್ ಬಜಾಜ್ ಅವರ ಪ್ರಕಾರ, ಗ್ರಾಹಕರ ಒಳನೋಟಗಳು ಕೇವಲ ಹೊಸತನದ ಪ್ರಕ್ರಿಯೆಯ ಒಂದು ಭಾಗ ಮಾತ್ರವಲ್ಲ. "ಗ್ರಾಹಕರ ಒಳನೋಟಗಳು ನಮ್ಮ ಹೊಸತನದ ಪ್ರಕ್ರಿಯೆಗೆ ಕೇವಲ ಒಂದು ಮಾಹಿತಿ) ಅಲ್ಲ. ಬದಲಿಗೆ, ಅವುಗಳೇ ನಮ್ಮ ಒಟ್ಟಾರೆ ಪ್ರಕ್ರಿಯೆಯಾಗಿವೆ" ಎಂದು ಹೇಳುತ್ತಾರೆ.

ಪ್ರೈಮ್ ಸದಸ್ಯತ್ವಕ್ಕೆ ಸೇರ್ಪಡೆಯಾದ ಪ್ರತಿಯೊಂದು ಅರ್ಥಪೂರ್ಣ ಸೌಲಭ್ಯವೂ ಸಹ ಗ್ರಾಹಕರು ನಿಖರವಾಗಿ ಏನನ್ನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರೊಂದಿಗೇ ಆರಂಭ ವಾಗಿದೆ. ಆ ಒಳನೋಟಗಳನ್ನು ಆಧರಿಸಿಯೇ ಶಾಪಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ಹೆಚ್ಚು ಪ್ರಯೋಜನಕಾರಿ ಮತ್ತು ಆನಂದದಾಯಕ ಅನುಭವವನ್ನಾಗಿ ಪರಿವರ್ತಿಸಲಾಗಿದೆ.

ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ವರುಣ್ ಬಜಾಜ್, "ಮುಂದಿನ ಅವಕಾಶಗಳು ಕೇವಲ ಗ್ರಾಹಕರ ಇಂದಿನ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮಾತ್ರ ಅಡಗಿಲ್ಲ, ಬದಲಿಗೆ ಅವರ ಭವಿಷ್ಯದ ಅಗತ್ಯಗಳನ್ನು ಮೊದಲೇ ಲೆಕ್ಕಾಚಾರ ಮಾಡುವುದರಲ್ಲಿದೆ. ಭವಿಷ್ಯ ಕ್ಕಾಗಿ ಹೊಸದನ್ನು ರೂಪಿಸುವುದು ಎಂದರೆ, ಇಂದಿನ ಗ್ರಾಹಕರೊಂದಿಗೆ ಅತ್ಯಂತ ನಿಕಟವಾಗಿ ಸಂಪರ್ಕದಲ್ಲಿರುವುದರ ಜೊತೆಗೆ, ಅವರು ಇನ್ನೂ ಕೇಳದ ಆದರೆ ಅವರಿಗೆ ಅಪಾರ ಸಂತೋಷ ನೀಡಬಲ್ಲ ಹೊಸ ಸೌಲಭ್ಯಗಳ ಮೇಲೆ ಹೂಡಿಕೆ ಮಾಡುವ ದೃಢ ವಿಶ್ವಾಸವನ್ನು ಹೊಂದಿರುವುದು. ಯಾವುದೇ ಅತ್ಯುತ್ತಮ ಹೊಸ ಆವಿಷ್ಕಾರ ಯಶಸ್ವಿಯಾದ ನಂತರ ಇದು ಸಹಜ ಎನಿಸುತ್ತದೆ, ಅದು ನಾವು ಗ್ರಾಹಕರ ನಾಡಿಮಿಡಿತವನ್ನು ಸರಿಯಾಗಿ ಆಲಿಸಿದ್ದೇವೆ ಎಂಬುದರ ಸಂಕೇತವಾಗಿದೆ" ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ಪ್ರೈಮ್ ಸೇವೆ ಇದೀಗ ತನ್ನ ಮುಂದಿನ ದಶಕದ ಪಯಣಕ್ಕೆ ಹೆಜ್ಜೆ ಇಡುತ್ತಿದ್ದು, ಗ್ರಾಹಕರ ದೈನಂದಿನ ಜೀವನಕ್ಕೆ ಈ ಸದಸ್ಯತ್ವವನ್ನು ಇನ್ನಷ್ಟು ಹತ್ತಿರವಾಗಿಸುವತ್ತ ಸಂಪೂರ್ಣ ಗಮನ ಹರಿಸಿದೆ. ಈ ಕುರಿತು ಪಲ್ಲವಿ ಸಿಂಗ್ ಅವರು ಮೆಲುಕು ಹಾಕುತ್ತಾ, "ಭಾರತದಲ್ಲಿ ಪ್ರೈಮ್‌ ನ ಮೊದಲ ದಶಕವು ಗ್ರಾಹಕರಿಗೆ ಈ ಸದಸ್ಯತ್ವದ ಪ್ರಯೋಜನಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಮುಂದಿನ ದಶಕವು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಸ ಸೌಲಭ್ಯ ಗಳನ್ನು ಸೃಷ್ಟಿಸುವ ಮೂಲಕ ಮತ್ತು ಕಾಲಕ್ಕೆ ತಕ್ಕಂತೆ ಅವರ ಜೀವನಾಡಿಯಾಗಿ ಬೆಳೆಯುವ ಮೂಲಕ, ಪ್ರೈಮ್ ಅನ್ನು ಅವರ ಜೀವನದ ಅತ್ಯಗತ್ಯ ಭಾಗವನ್ನಾಗಿ ರೂಪಿಸುವುದಾಗಿದೆ" ಎಂದಿದ್ದಾರೆ.

ಪ್ರೈಮ್‌ ನ ಮೊದಲ ದಶಕದ ಯಶೋಗಾಥೆಯು ಕೇವಲ ಇಂದು ಗ್ರಾಹಕರು ಅನುಭವಿಸುತ್ತಿರುವ ಸೌಲಭ್ಯಗಳಲ್ಲಿ ಮಾತ್ರವೇ ಅಡಗಿಲ್ಲ, ಬದಲಿಗೆ ಅದನ್ನು ನಿರಂತರವಾಗಿ ಕಟ್ಟಿ ಬೆಳೆಸುತ್ತಿರುವ ಉದ್ಯೋಗಿಗಳ ಶ್ರಮದಲ್ಲೂ ಅಡಗಿದೆ. ಗ್ರಾಹಕರ ಅಗತ್ಯಗಳು ಬದಲಾಗುತ್ತಿದ್ದಂತೆ, ಪ್ರೈಮ್‌ ನ ಮುಂದಿನ ಅಧ್ಯಾಯವನ್ನು ರೂಪಿಸುವ ಹೊಸ ಆಲೋಚನೆಗಳು, ಅನುಭವಗಳು ಮತ್ತು ಹೊಸತನಗು ಸಹ ಅದಕ್ಕೆ ತಕ್ಕಂತೆ ವಿಕಸನಗೊಳ್ಳಲಿವೆ.