ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸ್ಟಾರ್ ಪಟ್ಟಕ್ಕೇರಿದ ಬಾಲಿವುಡ್ ಕಲಾವಿದರು
ಅನೇಕರು ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಬಾಲಿವುಡ್ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಕೆಲವು ನಟ - ನಟಿಯರು ಆರಂಭದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದರು ಎಂದರೆ ನೀವು ನಂಬಲೇಬೇಕು. ಮೊದಲು ಅಸಿಸ್ಟೆಂಟ್ ಡೈರೆಕ್ಟರ್ (AD) ಆಗಿ ಕೆಲಸ ಮಾಡಿದ್ದ ಅಂತಹ ಸ್ಟಾರ್ಗಳ ಮಾಹಿತಿ ಇಲ್ಲಿದೆ.

Bollywood Actors


ಅಹಾನ್ ಪಾಂಡೆ
'ಸೈಯಾರ' ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ಅಹಾನ್ ಪಾಂಡೆ ಸದ್ಯ ದೇಶದ ಗಮನ ಸೆಳೆದಿದ್ದಾರೆ. ಇವರು ಬಾಲಿವುಡ್ಗೆ ನಾಯಕನಾಗಿ ಕಾಲಿಡುವುದಕ್ಕೂ ಮುನ್ನ ‘ರಾಕ್ ಆನ್ 2’, ‘ಮರ್ದಾನಿ 2’ ಮತ್ತು ‘ದಿ ರೈಲ್ವೆ ಮೆನ್’ ಹಿಂದಿ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಶನಾಯಾ ಕಪೂರ್
ಸೋನಂ ಕಪೂರ್ ಅವರ ಸೋದರ ಸಂಬಂಧಿ ಶನಾಯಾ ಕಪೂರ್ ʼಆಂಖೋನ್ ಕಿ ಗುಸ್ತಖಿ ಯಾನ್ʼ ಸಿನಿಮಾ ಮೂಲಕ ಈ ವರ್ಷ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಅವರು ಜಾನ್ವಿ ಕಪೂರ್ ನಟಿಸಿದ ‘ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು.

ಇಬ್ರಾಹಿಂ ಅಲಿ ಖಾನ್
‘ನದಾನಿಯಾಂ’ ಚಿತ್ರದ ಮೂಲಕ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ ನಟ ಇಬ್ರಾಹಿಂ, ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

ಶರ್ವಾರಿ ವಾಘ್
2021ರಲ್ಲಿ 'ಬಂಟಿ ಔರ್ ಬಬ್ಲಿ 2' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ ಶಾರ್ವರಿ ವಾಘ್ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಇವರು 'ಬಾಜೀರಾವ್ ಮಸ್ತಾನಿ', 'ಪ್ಯಾರ್ ಕಾ ಪಂಚ್ನಾಮಾ 2' ಮತ್ತು 'ಸೋನು ಕೆ ಟಿಟು ಕಿ ಸ್ವೀಟಿ' ಚಿತ್ರಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

ವೀರ್ ಪಹಾರಿಯಾ
‘ಸ್ಕೈ ಫೋರ್ಸ್’ ಸಿನಿಮಾ ಮೂಲಕ ನಾಯಕನಾಗಿ ಪರಿಚಿತರಾದ ವೀರ್ ಪಹಾರಿಯಾ ಮೊದಲು ‘ಭೇಡಿಯಾ’ ಚಿತ್ರದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

ಸಿದ್ಧಾರ್ಥ್ ಮಲ್ಹೋತ್ರಾ
‘ಪರಮ್ ಸುಂದರಿ’ ಖ್ಯಾತಿಯ ನಟ ಸಿದ್ಧಾರ್ಥ್, ‘ಮೈ ನೇಮ್ ಇಸ್ ಖಾನ್’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

ವರುಣ್ ಧವನ್
ಬಾಲಿವುಡ್ ಸ್ಟಾರ್ ವರುಣ್ ಕೂಡಾ ತಮ್ಮ ವೃತ್ತಿಜೀವನವನ್ನು ‘ಮೈ ನೇಮ್ ಇಸ್ ಖಾನ್’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಪ್ರಾರಂಭಿಸಿದ್ದರು. ಆ ಬಳಿಕ ʼಸ್ಟೂಡೆಂಟ್ ಆಫ್ ದಿ ಇಯರ್ʼ, ʼಮೇ ತೇರ ಹೀರೋʼ, ʼಹಮ್ಟಿ ಶರ್ಮಾ ಕಿ ದುಲ್ಹನಿಯಾʼ, ಬʼದ್ಲಾಪುರ್ʼ, ʼಬದರಿನಾಥ್ ಕಿ ದುಲ್ಹನಿಯಾʼ, ʼಭೇದಿಯಾʼ, ʼಬವಾಲ್ʼ ಇತ್ಯಾದಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.