Christmas Shopping 2025: ವೀಕೆಂಡ್ನಲ್ಲಿ ಶುರುವಾಯ್ತು ಕ್ರಿಸ್ಮಸ್ ಶಾಪಿಂಗ್
ವೀಕೆಂಡ್ನಲ್ಲೆ ಕ್ರಿಸ್ಮಸ್ ಶಾಪಿಂಗ್ ಶುರುವಾಗಿದೆ. ಈ ಫೆಸ್ಟಿವ್ ಸೀಸನ್ಗೆ ತಕ್ಕಂತೆ ವೈವಿಧ್ಯಮಯ ಫ್ಯಾಷನ್ವೇರ್ಸ್ ಹಾಗೂ ಡೆಕೋರೇಷನ್ ಐಟಂಗಳು ಲಗ್ಗೆ ಇಟ್ಟಿವೆ. ಉದ್ಯಾನನಗರಿಯ ಬಹುತೇಕ ಎಲ್ಲಾ ಪ್ರತಿಷ್ಠಿತ ಮಾಲ್ಗಳು ಕ್ರಿಸ್ಮಸ್ ಸಂಭ್ರಮದಲ್ಲಿ ಅಲಂಕೃತಗೊಂಡಿವೆ. ಅಲ್ಲಿನ ಅತ್ಯಾಕರ್ಷಕ ಡೆಕೋರೇಷನ್ಸ್ ಗ್ರಾಹಕರನ್ನು ಬರಸೆಳೆಯುತ್ತಿವೆ. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.
ವಿವಿಧ ವಿನ್ಯಾಸದ ಉಡುಪುಗಳು (ಚಿತ್ರಗಳು: ಮಿಂಚು) -
ಪ್ರತಿಬಾರಿಯಂತೆ ಈ ಬಾರಿಯೂ ಎಲ್ಲೆಡೆ ಕ್ರಿಸ್ಮಸ್ ಶಾಪಿಂಗ್ ಶುರುವಾಗಿದೆ. ವರ್ಷದ ಕೊನೆಯ ತಿಂಗಳಲ್ಲಿ ಮಾಲ್ಗಳಲ್ಲಿ ಮಾತ್ರವಲ್ಲ, ನಾನಾ ಶಾಪಿಂಗ್ ಏರಿಯಾಗಳಲ್ಲಿ ಕ್ರಿಸ್ಮಸ್ ಶಾಪಿಂಗ್ ವೀಕೆಂಡ್ನಲ್ಲೆ ಆರಂಭಗೊಂಡಿದೆ.
ಎಲ್ಲಾ ಮಾಲ್ಗಳಲ್ಲೂ ಕ್ರಿಸ್ಮಸ್ ಶಾಪಿಂಗ್ ಮೇನಿಯಾ
ಉದ್ಯಾನನಗರಿಯ ಬಹುತೇಕ ಎಲ್ಲಾ ಪ್ರತಿಷ್ಠಿತ ಮಾಲ್ಗಳು ಕ್ರಿಸ್ಮಸ್ ಸಂಭ್ರಮದಲ್ಲಿ ಅಲಂಕೃತಗೊಂಡಿವೆ. ಅಲ್ಲಿನ ಅತ್ಯಾಕರ್ಷಕ ಡೆಕೋರೇಷನ್ಸ್ ಗ್ರಾಹಕರನ್ನು ಬರಸೆಳೆಯುತ್ತಿವೆ.
ಶಾಪಿಂಗ್ ಸ್ಟ್ರೀಟ್ಗಳ ಅಲಂಕಾರ
ಕಮರ್ಷಿಯಲ್, ಎಂಜಿ ರಸ್ತೆ, ಜಯನಗರದ ಕೆಲವೆಡೆ, ಕೋರಮಂಗಲದ ಕೆಲವು ರಸ್ತೆಗಳು, ಬ್ರೀಗೇಡ್ ರಸ್ತೆ ಸೇರಿದಂತೆ ನಗರದ ನಾನಾ ಶಾಪಿಂಗ್ ಹಾಗೂ ಫುಡ್ ಜಾಯಿಂಟ್ ಇರುವ ಬೀದಿಗಳು ಕ್ರಿಸ್ಮಸ್ ಅಲಂಕಾರದಿಂದ ಕಂಗೊಳಿಸುತ್ತಿವೆ.
ಸೀಸನ್ ಫ್ಯಾಷನ್ವೇರ್ಗಳ ಲಗ್ಗೆ
ಇಯರ್ ಎಂಡ್ನಲ್ಲಿ ಕ್ರಿಸ್ಮಸ್ ಆಗಮಿಸುವುದರಿಂದ ಈ ಸೀಸನ್ನಲ್ಲಿ ಹೆಚ್ಚಾಗಿ ಕಂಪ್ಲೀಟ್ ವೆಸ್ಟರ್ನ್ ಔಟ್ಫಿಟ್ಗಳು ಲಗ್ಗೆ ಇಡುತ್ತವೆ. ಕ್ರಿಸ್ಮಸ್ ಗೌನ್ನಿಂದಿಡಿದು ಫ್ರಾಕ್, ಮಿಡಿ ಮಿನಿ ಹೀಗೆ ಹೆಣ್ಣುಮಕ್ಕಳ ವಿಂಟರ್ ಡ್ರೆಸ್ಗಳು-ಕೋಟ್ಗಳು ಎಲ್ಲೆಡೆ ರಾರಾಜಿಸುತ್ತಿವೆ. ಇನ್ನು, ಯುವಕರಿಗೆ ಲೇಯರ್ ಲುಕ್ ನೀಡುವ ಜಾಕೆಟ್, ಕೋಟ್, ಸೂಟ್ ಸೆಟ್ಗಳು ಬಂದಿವೆ, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್ಪರ್ಟ್ಸ್.
ಡೆಕೋರೇಷನ್ ಐಟಂಗಳ ಎಂಟ್ರಿ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕ್ರಿಸ್ಮಸ್ ಸೀಸನ್ನಲ್ಲಿ ಫೆಸ್ಟಿವಲ್ ಸೀಸನ್ಗೆ ಅಗತ್ಯವಿರುವ ಟ್ರೀ ಬೆಲ್, ಟ್ರೀ ಹ್ಯಾಂಗಿಂಗ್ಸ್, ಅರ್ನಾಮೆಂಟಲ್ ಸ್ಟಾರ್ಸ್, ಸ್ನೋ ಮ್ಯಾನ್, ಲ್ಯಾಂಟೆರ್ನ್, ಲೈಟಿಂಗ್ಸ್, ವಾಲ್ ಡೆಕೋರೇಷನ್, ಶೈನಿಂಗ್ ಹ್ಯಾಂಗಿಂಗ್ಸ್, ಸಾಂತ ಹಾಗೂ ಸ್ನೋ ಮ್ಯಾನ್ ಸೇರಿದಂತೆ ನಾನಾ ಬಗೆಯ ಡೆಕೋರೇಷನ್ ಸಾಮಗ್ರಿಗಳು ಹೊಸ ರೂಪದಲ್ಲಿ ಎಂಟ್ರಿ ನೀಡಿವೆ. ಪರಿಣಾಮ ಶಾಪಿಂಗ್ ಪ್ರಿಯರನ್ನು ಸೆಳೆಯುತ್ತಿವೆ.