Festive Season Fashion 2026: ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಎಥ್ನಿಕ್ವೇರ್ಸ್
Festive Season Fashion: ಶ್ರಾವಣ ಮಾಸದಲ್ಲಿ ವಿನೂತನ ಬಗೆಯ ಟ್ರೆಡಿಷನಲ್ ಎಥ್ನಿಕ್ವೇರ್ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 3 ಬಗೆಯ ಡಿಸೈನರ್ವೇರ್ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ರೇಷ್ಮೆಯ ಮಿಕ್ಸ್ ಮತ್ತು ಮ್ಯಾಚ್ ಕಾನ್ಸೆಪ್ಟ್ನ ಡಿಸೈನರ್ ಲಂಗ -ದಾವಣಿ. ಟೂ ಇನ್ ವನ್ ಟ್ರೆಡಿಷನಲ್ ಲೆಹೆಂಗಾ, ಸಿಲ್ಕ್ ಗೌನ್ ಮಾದರಿಯವು ಹೆಚ್ಚು ಜನಪ್ರಿಯಗೊಂಡಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಕೃಪೆ : ಪಿಕ್ಸೆಲ್ -
ಶ್ರಾವಣ ಮಾಸದಲ್ಲಿ ವಿನೂತನ ಬಗೆಯ ಟ್ರೆಡಿಷನಲ್ ಎಥ್ನಿಕ್ವೇರ್ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 3 ಬಗೆಯ ಡಿಸೈನರ್ವೇರ್ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ರೇಷ್ಮೆಯ ಮಿಕ್ಸ್ ಮತ್ತು ಮ್ಯಾಚ್ ಕಾನ್ಸೆಪ್ಟ್ನ ಡಿಸೈನರ್ ಲಂಗ -ದಾವಣಿ. ಟೂ ಇನ್ ವನ್ ಟ್ರೆಡಿಷನಲ್ ಲೆಹೆಂಗಾ, ಸಿಲ್ಕ್ ಗೌನ್ ಮಾದರಿಯವು ಹೆಚ್ಚು ಜನಪ್ರಿಯಗೊಂಡಿವೆ.
ರೇಷ್ಮೆ ಡಿಸೈನರ್ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ನ ಲಂಗ ದಾವಣಿ
ಎಥ್ನಿಕ್ ಶೈಲಿಯ ರೇಷ್ಮೆಯ ಡಿಸೈನರ್ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ಗೆ ನಾಂದಿ ಹಾಡುವ ಲಂಗ - ದಾವಣಿ ಫೆಸ್ಟೀವ್ ಸೀಸನ್ಗೆ ಆಗಮಿಸಿವೆ. ಈ ಸೀಸನ್ನ ಹಬ್ಬ-ಹರಿದಿನ, ಮದುವೆ ಹಾಗೂ ಇತರೇ ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸಬಹುದಾದ ಉಡುಪುಗಳಿವು. ರೇಷ್ಮೆ ಫ್ಯಾಬ್ರಿಕ್ ಜತೆ ಇತರೇ ಫ್ಯಾಬ್ರಿಕ್ನ ದುಪಟ್ಟಾ ಇವಕ್ಕೆ ಮ್ಯಾಚ್ ಮಾಡಲಾಗಿರುತ್ತದೆ.
ಟೂ ಇನ್ ವನ್ ಲೆಹೆಂಗಾ
ಟೂ ಇನ್ ವನ್ ಸ್ಟೈಲಿಂಗ್ ಮಾಡಬಹುದಾದ ಟ್ರೆಡಿಷನಲ್ ಲುಕ್ ನೀಡುವ ಲೆಹೆಂಗಾಗಳು ಟ್ರೆಂಡ್ನಲ್ಲಿವೆ. ಶೀರ್ ಡಿಸೈನರ್ ದುಪಟ್ಟಾ ಹೊಂದಿರುವಂತಹ ಈ ಲೆಹೆಂಗಾಗಳು ಇಂಡೋ-ವೆಸ್ಟರ್ನ್ ಲುಕ್ನಲ್ಲೂ ಬಳಸುವಂತಹ ಶೈಲಿಯಲ್ಲಿ ಕಾಣಿಸಿಕೊಂಡಿವೆ. ಇವನ್ನು ಕೇವಲ ಹಬ್ಬದ ಸಮಾರಂಭಗಳಿಗೆ ಮಾತ್ರವಲ್ಲ, ಮದುವೆಯಂತಹ ಗ್ರ್ಯಾಂಡ್ ಸಮಾರಂಭಗಳಿಗೂ ಧರಿಸಬಹುದು.
ಮನಮೋಹಕ ಸಿಲ್ಕ್ ಎಥ್ನಿಕ್ ಗೌನ್
ಮನಮೋಹಕವಾಗಿ ಕಾಣಿಸುವ ಸಿಲ್ಕ್ ಫ್ಯಾಬ್ರಿಕ್ನ ಎಥ್ನಿಕ್ ಡಿಸೈನರ್ವೇರ್ ಲಿಸ್ಟ್ಗೆ ಸೇರುವಂತಹ ಟ್ರೆಡಿಷನಲ್ ಗೌನ್ಗಳು ಕೂಡ ಈ ಫೆಸ್ಟೀವ್ ಸೀಸನ್ನಲ್ಲಿ ಚಾಲ್ತಿಯಲ್ಲಿವೆ. ಎಲ್ಲಾ ವಯಸ್ಸಿನವರೂ ಧರಿಸಬಹುದಾದ ಇವು ಸದ್ಯ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ ದೀಕ್ಷಾ.
ಎಥ್ನಿಕ್ವೇರ್ಸ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ರೇಷ್ಮೆಯ ಫ್ಯಾಬ್ರಿಕ್ನವು ಅಂದವಾಗಿ ಬಿಂಬಿಸುತ್ತವೆ.
- ದಪ್ಪಗಿರುವವರು ಸೂಕ್ತ ಫ್ಯಾಬ್ರಿಕ್ನವನ್ನು ಚೂಸ್ ಮಾಡಬೇಕು.
- ಟ್ರೆಡಿಷನಲ್ ಮೇಕ್ ಓವರ್ ಮಾಡಿಕೊಳ್ಳಿ.
- ಟ್ರೆಡಿಷನಲ್ ಅಟೈರ್ ಧರಿಸಿದಾಗ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ.