ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ʻಪುಟ್ಟಕ್ಕನ ಮಕ್ಕಳುʼ ನಟಿ ಸಂಜನಾ ಬುರ್ಲಿ; ಇಲ್ಲಿವೆ ನಿಶ್ಚಿತಾರ್ಥದ ಫೋಟೋಗಳು
ಕನ್ನಡ ಕಿರುತೆರೆಯಲ್ಲಿ 'ಪುಟ್ಟಕ್ಕನ ಮಕ್ಕಳು', 'ಶ್ರೀ ಗಂಧದ ಗುಡಿ' ಮುಂತಾದ ಧಾರಾವಾಹಿಗಳಿಂದ ಮೂಲಕ ಮನೆಮಾತಾಗಿರುವ ನಟಿ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇವರ ಮದುವೆ ಎಂಗೇಜ್‌ಮಂಟ್ ಸಮಾರಂಭವು ಸಂಭ್ರಮದಿಂದ ನೆರವೇರಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಮರ್ಥ ಚನ್ನಗಿರಿ ಅವರೊಂದಿಗೆ ಸಂಜನಾ ಬುರ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸಂಜನಾ ಬುರ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
-
Avinash GR
Feb 8, 2026 7:41 PM
1/9
ನಟಿ ಸಂಜನಾ ಬುರ್ಲಿ ಮತ್ತು ಸಮರ್ಥ ಅವರ ನಿಶ್ಚಿತಾರ್ಥ ಸಮಾರಂಭವು ಈಚೆಗೆ ನೆರವೇರಿತು.
2/9
ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭ
3/9
ಬೆಂಗಳೂರಿನ ಬಸವನಗುಡಿಯಲ್ಲಿ ಸಂಜನಾ ಮತ್ತು ಸಮರ್ಥ ಅವರ ಎಂಗೇಜ್‌ಮೆಂಟ್ ನಡೆದಿದೆ.
4/9
ಸಂಜನಾ ಅವರ ಭಾವಿ ಪತಿ ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು.
5/9
ಸಮರ್ಥ ಅವರು ಎಂಬಿಬಿಎಸ್ (MBBS) ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್ನಲ್ಲಿ ಎಂಡಿ (MD) ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
6/9
ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
7/9
ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭಾವಿ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
8/9
ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ಸಂಜನಾ ಬುರ್ಲಿ ಅವರು ಸದ್ಯ ಶ್ರೀಗಂಧದ ಗುಡಿ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ.
9/9
ನಿಶ್ಚಿತಾರ್ಥದ ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಟಿ.