Photos: ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣಗೆ ಡಬಲ್ ಸಂಭ್ರಮ; ಅತ್ತೆಯೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ!
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯುಗಾದಿ ಹಬ್ಬದ ದಿನವೇ ಎರಡು ಡಬಲ್ ಸಂಭ್ರಮಗಳು ಸಿಕ್ಕಿವೆ. ಅದೇನಪ್ಪ ಅಂದರೆ, ಅವರು ಕಳೆದ ವರ್ಷ ನಟಿಸಿದ್ದ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾಕ್ಕೆ ಎರಡು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ. ಆ ಪ್ರಶಸ್ತಿಗಳು ಸಿಕ್ಕ ಖುಷಿಯಲ್ಲಿ ಅವರು ತಮ್ಮ ಅತ್ತೆ ಮಾಧವಿ ಜೊತೆಗೆ ಸಂಭ್ರಮಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, "ನಾನು ಚಿಕ್ಕವಳಿದ್ದಾಗ ಯಾರಾದರೂ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದರೆ, ಅವರನ್ನು ಒಬ್ಬ ಸೂಪರ್ ಸ್ಟಾರ್ ತರಹ ನೋಡುತ್ತಿದ್ದೆ. ಅವರು ಇದನ್ನು ಹೇಗೆ ಸಾಧಿಸಿದರು? ಅವರ ದಿನಚರಿ ಹೇಗಿರುತ್ತದೆ? ಅಂತೆಲ್ಲಾ ಆಶ್ಚರ್ಯಪಡುತ್ತಿದ್ದೆ. ನಿನ್ನೆ ಸಂಜೆ ಅಂತಹದ್ದೇ ಒಂದು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನನಗೆ ತುಂಬಾ ವಿಶೇಷ ಅನಿಸುತ್ತಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
-
"ನನ್ನ ಆ ಭಾವನೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಆದರೆ ನಾನು ತುಂಬಾ ದೂರ ಸಾಗಿ ಬಂದಿದ್ದೇನೆ ಎಂಬ ಅರಿವಾಗುತ್ತಿದೆ" ಎಂದಿದ್ದಾರೆ ರಶ್ಮಿಕಾ.
"ನನ್ನಲ್ಲಿ ಒಂದು ರೀತಿಯ ಹೆಮ್ಮೆ, ಸಂತೋಷ ಮತ್ತು ತೃಪ್ತಿಯ ಭಾವ ಮೂಡಿದೆ" ಎಂದ ರಶ್ಮಿಕಾ ಮಂದಣ್ಣ
"ಈ ವರ್ಷ ಅತೀ ಸುಂದರವಾಗಿ ಆರಂಭವಾಗಿದೆ, ಅದರಲ್ಲೂ ತೆಲಂಗಾಣ ರಾಜ್ಯ ನನ್ನನ್ನು ರಾಜ್ಯ ಪ್ರಶಸ್ತಿಯೊಂದಿಗೆ ಬರಮಾಡಿಕೊಂಡಿದ್ದು ಇನ್ನೂ ಸಂಭ್ರಮ ತಂದಿದೆ. ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳು" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಶ್ರೀ ಕಲಾ ಸುಧ ತೆಲುಗು ಅಸೋಸಿಯೇಷನ್ ಕೂಡ ರಶ್ಮಿಕಾ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದು, "ನಿಮಗೂ ಧನ್ಯವಾದಗಳು.. ಇದಕ್ಕಾಗಿ ನಾನು ಚಿರಋಣಿ! ಗರ್ಲ್‌ಫ್ರೆಂಡ್ ಚಿತ್ರವನ್ನು ಇಷ್ಟು ಅದ್ಭುತವಾಗಿ ರೂಪಿಸಿದ್ದಕ್ಕಾಗಿ ರಾಹುಲ್ ನಿನಗೂ ಧನ್ಯವಾದಗಳು" ಎಂದು ರಶ್ಮಿಕಾ ಹೇಳಿದ್ದಾರೆ.
ಮದುವೆಯಾಗಿ 1 ತಿಂಗಳು ತುಂಬುವುದರೊಳಗೆ ರಶ್ಮಿಕಾಗೆ ಅದೃಷ್ಟ ಕುದುರಿದೆ. ಎರಡು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಈ ಖುಷಿಯ ಸಂದರ್ಭದಲ್ಲಿ ಅತ್ತೆ ಮಾಧವಿ ಅವರ ಆಶೀರ್ವಾದ ಪಡೆದ ರಶ್ಮಿಕಾ ಮಂದಣ್ಣ