IPL 2025: ಈಡನ್ ಗಾಡರ್ನ್ಸ್ನಲ್ಲಿ 1000 ರನ್ ಪೂರ್ಣಗೊಳಿಸಿದ ಆಂಡ್ರೆ ರಸೆಲ್!
Andre Russell Scored 1000 Runs in Eden Gardens: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಆಂಡ್ರೆ ರಸೆಲ್ ಈಡನ್ ಗಾರ್ಡನ್ಸ್ನಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಗೌತಮ್ ಗಂಭೀರ್ ಒಳಗೊಂಡ ಎಲೈಟ್ ಲಿಸ್ಟ್ಗೆ ಸೇರ್ಪಡೆಯಾಗಿದ್ದಾರೆ.



ಕೋಲ್ಕತಾ ನೈಟ್ ರೈಡರ್ಸ್ಗೆ ಜಯ
ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೇವಲ ಒಂದು ರನ್ನಿಂದ ರೋಚಕ ಗೆಲುವು ಸಾಧಿಸಿತು. ಈ ಜಯದ ಮೂಲಕ ಕೆಕೆಆರ್ ಪ್ಲೇಆಫ್ಸ್ ಆಸೆ ಜೀವಂತವಾಗಿದೆ.

ಆಂಡ್ರೆ ರಸೆಲ್ ಸ್ಪೋಟಕ ಅರ್ಧಶತಕ
ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ಪರ ಸ್ಪೋಟಕ ಬ್ಯಾಟ್ ಮಾಡಿದ್ದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಸ್ಪೋಟಕ ಅರ್ಧಶತಕವನ್ನು ಸಿಡಿಸಿದ್ದರು. ಅವರು ಆಡಿದ್ದ 25 ಎಸೆತಗಳಲ್ಲಿ 57 ರನ್ಗಳನ್ನು ಸಿಡಿಸಿದರು.

ಈಡನ್ ಗಾರ್ಡನ್ಸ್ನಲ್ಲಿ 1000 ರನ್ಗಳು
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸ್ಪೋಟಕ ಅರ್ಧಶತಕದ ಮೂಲಕ ಆಂಡ್ರೆ ರಸೆಲ್, ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಗಂಭೀರ್-ಉತ್ತಪ್ಪ
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೆಕೆಆರ್ ಮಾಜಿ ಆಟಗಾರರಾದ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ಇದ್ದಾರೆ. ಇದೀಗ ರಸೆಲ್ ಈ ಪಟ್ಟಿಗೆ ಸೇರಿದ್ದಾರೆ.

18ನೇ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಏಕೈಕ ಅಂಗಣದಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ 18ನೇ ಆಟಗಾರ ಎಂಬ ಕೀರ್ತಿಗೆ ಆಂಡ್ರೆ ರಸೆಲ್ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಘಟಾನುಘಟಿ ಬ್ಯಾಟ್ಸ್ಮನ್ಗಳು ಈ ಪಟ್ಟಿಯಲ್ಲಿದ್ದಾರೆ.

ವಿಶ್ವ ದಾಖಲೆ ಬರೆದ ರಸೆಲ್
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ 1000 ರನ್ಗಳನ್ನು ಏಕೈಕ ಕ್ರೀಡಾಂಗಣದಲ್ಲಿ ದಾಖಲಿಸಿದ ಮೊದಲು ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ಆಂಡ್ರೆ ರಸೆಲ್ ಬರೆದಿದ್ದಾರೆ. ಇವರು 42 ಇನಿಂಗ್ಸ್ಗಳಿಂದ 188.64ರ ಸ್ಟ್ರೈಕ್ ರೇಟ್ನಲ್ಲಿ 1000 ರನ್ ಗಳಿಸಿದ್ದಾರೆ.