Neena Gupta: ಮದುವೆಗೂ ಮುನ್ನವೇ ತಾಯ್ತನ, ನಂತರ ವೈವಾಹಿಕ ಬದುಕು- ನಟಿ ನೀನಾ ಗುಪ್ತಾ ಬದುಕಿನಲ್ಲಿ ಹಲವು ಏಳು-ಬೀಳುಗಳು!
ವಯಸ್ಸು 65 ಆದ್ರೂ ಸಕತ್ ಆ್ಯಕ್ಟೀವ್ ಆಗಿರುವ ಬಾಲಿವುಡ್ ನಟಿ ನೀನಾ ಗುಪ್ತಾ ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ನೀನಾ ಗುಪ್ತಾ ಕೆಲ ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಖ್ಯಾತ ನಟಿಯಾಗಿದ್ದು ವೈಯಕ್ತಿಕ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ.



ಕೋಲ್ಕತ್ತಾದಲ್ಲಿ ಜನಿಸಿದ ನೀನಾ ಗುಪ್ತಾ 1982 ರಲ್ಲಿ ಹಿಂದಿ ಚಿತ್ರ ಸಾಥ್ ಸಾಥ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮದುವೆಯಾಗದೆ 36ನೇ ವಯಸ್ಸಿನಲ್ಲಿ ತಾಯ್ತನವನ್ನು ಸ್ವೀಕರಿಸಿ ನಂತರ 49ನೇ ವಯಸ್ಸಿನಲ್ಲಿ ವಿವಾಹವಾದರು. 2008ರಲ್ಲಿ ದೆಹಲಿ ಮೂಲದ ಚಾರ್ಟೆಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ನೀನಾ ವರಿಸಿದ್ದರು. ಅಚ್ಚರಿ ಎಂದರೆ ಅವರಿಗೆ ಆಗ 49 ವರ್ಷ ವಯಸ್ಸು ಆಗಿತ್ತು.

ನಟಿ ನೀನಾ ಗುಪ್ತಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತು ತಮ್ಮ ಮಗಳು ಮಸಾಬಾಳನ್ನು ಒಂಟಿಯಾಗಿ ಬೆಳೆಸಿದ ಬಗ್ಗೆ ಮಾತನಾಡುತ್ತಾರೆ. ನೀನಾ ಗುಪ್ತಾ ಯೌವನದಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಅವರನ್ನು ಪ್ರೀತಿಸಿ ಮದುವೆಯಾಗದೆಯೇ ತಾಯಿ ಕೂಡ ಆಗಿದ್ದರು.

1980ರ ದಶಕದಲ್ಲಿ ಮಗಳು ಮಸಾಬಾ ಗುಪ್ತಾ ಗರ್ಭದಲ್ಲಿದ್ದಾಗ ನೀನಾ ಗುಪ್ತಾ ಮದುವೆಯಾಗಿರಲಿಲ್ಲ. ನೀನಾ ಗುಪ್ತಾ ಅವರು ಸಿಂಗಲ್ ಪೇರೆಂಟ್ ಆಗಿ ತಮ್ಮ ಮಗಳು ಮಸಬಾ ಗುಪ್ತಾ ಅವರನ್ನು ಬೆಳೆಸಿದರು. ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ರಿಲೆಷನ್ಶಿಪ್ ಹೊಂದಿದ್ದ ನೀನಾ, ಆನಂತರ ಅವರಿಂದ ದೂರವಾಗಿ, ಮಗಳನ್ನು ಒಬ್ಬಂಟಿಯಾಗಿ ಬೆಳೆಸಿದ್ದಾರೆ.

ತ್ರಿಕಾಲ್, ಮಂಡಿ ಮತ್ತು ಉತ್ಸವ್ ಸಿನಿಮಾಗಳಲ್ಲಿ ಗುಪ್ತಾ ಅವರು ನಟಿಸಿದ್ದು, ಈ ಸಿನಿಮಾಗಳು ಹೆಚ್ಚು ಹಿಟ್ ಕಂಡಿಲ್ಲ.ಆದರೆ 2018 ರ ‘ಬಧಾಯಿ ಹೋ’ ಚಿತ್ರದ ಮೂಲಕ ಮತ್ತೆ ಇವರು ಕಮ್ ಬ್ಯಾಕ್ ಮಾಡಿದರು. ಮೂರು ಬಾರಿ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದು 1994ರಲ್ಲಿ ತೆರೆಕಂಡಿದ್ದ 'ವಾಹ್ ಚೋಕ್ರಿ' ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವೋ ಚೋಕ್ರಿ (1994) ಮತ್ತು ಉಂಚೈ (2022) ಚಿತ್ರಗಳಿಗಾಗಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಬಜಾರ್ ಸೀತಾರಾಮ್ (1993)ಅತ್ಯುತ್ತಮ ನಾನ್-ಫೀಚರ್ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರು.ನಟಿ ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು 2021ರಲ್ಲಿ ನೆಟ್ಫ್ಲಿಕ್ಸ್ಲ್ಲಿ ಬಿಡುಗಡೆಯಾದ 'ಸರ್ದಾರ್ ಕಾ ಗ್ರ್ಯಾಂಡ್ಸನ್' ಸಿನಿಮಾದಲ್ಲಿ ನಟಿಸಿದ್ದರು.ಕೊನೆಯ ಬಾರಿಗೆ ಅವರು 'ಕೇಸರಿ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು