Actress Ramya: ವಿನಯ್ ರಾಜ್‌ಕುಮಾರ್ ಜತೆಗಿನ ಫೋಟೊ ವೈರಲ್ ಆದ ಬೆನ್ನಲ್ಲೇ ರಮ್ಯಾ ಸ್ಪಷ್ಟನೆ
ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ್ದ ಮೋಹಕ ತಾರೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನಾ ಹಲವು ವರ್ಷಗಳ ಕಾಲ ನಂಬರ್ ಒನ್ ಪಟ್ಟದಲ್ಲಿದ್ದರು. ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಅಖಾಡಕ್ಕೆ ಇಳಿದು ಸಂಸದೆ, ಮಾಜಿ ಸಂಸದೆಯೂ ಆದರು. ಹೀಗೆ ಚಿತ್ರರಂಗದಿಂದ ದೂರ ಸರಿದ ಅವರು ಬಳಿಕ ರಾಜಕೀಯದಿಂದಲೂ ಅಂತರ ಕಾಯ್ದುಕೊಂಡಿದ್ದರು. ಕೆಲವು ಸಮಯಗಳ ಬ್ರೇಕ್ ನಂತರ ಇದೀಗ ಅವರು ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಕ್ಯಾಮರಾ ಮುಂದೆ ಕಾಣಿಸತೊಡಗಿದ್ದಾರೆ. ಹೀಗಾಗಿ ಸದ್ಯದಲ್ಲೇ ಅವರದನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು ಎನ್ನುವ ಮಾತೂ ಕೇಳಿ ಬರುತ್ತಿದೆ. ಈ ಮಧ್ಯೆ ಅವರು ವಿನಯ್ ರಾಜ್‌ಕುಮಾರ್ ಜತೆಗಿನ ಫೋಟೊ ಹಂಚಿಕೊಂಡಿದ್ದು ಒಂದಷ್ಟು ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸ್ವತಃ ರಮ್ಯಾ ಸ್ಪಷ್ಟನೆ ನೀಡಿ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.

-


ರಾಜ್‌ಕುಮಾರ್ ಕುಟುಂಬದ ಜತೆಗೆ ಒಡನಾಟ
ಹಾಗೆ ನೋಡಿದರೆ ರಮ್ಯಾ ಅವರಿಗೆ ರಾಜ್‌ಕುಮಾರ್ ಕುಟುಂಬದೊಂದಿಗೆ ಮೊದಲಿನಿಂದಲೂ ಉತ್ತಮ ಒಡನಾಟವಿದೆ. ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಪಾರ್ವತಮ್ಮ ರಾಜ್‌ಕುಮಾರ್. ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಉತ್ತಮ ಸ್ನೇಹಿತರಾಗಿದ್ದರು. ಇವರು 3 ಬಾರಿ ತೆರೆ ಹಂಚಿಕೊಂಡಿದ್ದಾರೆ ಕೂಡ.

ಈಗಲೂ ಉತ್ತಮ ಬಾಂಧವ್ಯ
ರಮ್ಯಾ ಈಗಲೂ ರಾಜ್‌ಕುಮಾರ್ ಕುಟುಂಬದೊಂದಿಗೆ ಉತ್ತಮ ಒಡನಾಟದಲ್ಲಿದ್ದಾರೆ. ಅದರಲ್ಲಿಯೂ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಜತೆ ಆತ್ಮೀಯರಾಗಿದ್ದಾರೆ. ಇವರು ಆಗಾಗ ಜತೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಫೋಟೊ ವೈರಲ್
ಕೆಲವು ದಿನಗಳ ಹಿಂದೆ ರಮ್ಯಾ ಮತ್ತು ವಿನಯ್ ರಾಜ್‌ಕುಮಾರ್ ಜತೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಅಲ್ಲದೆ ಅವರಿಬ್ಬರು ಒಟ್ಟಿಗೆ ಪ್ರವಾಸ ಕೈಗೊಂಡಿದ್ದು ಆ ಫೋಟೊವನ್ನು ರಮ್ಯಾ ಶೇರ್ ಮಾಡಿದ್ದಾರೆ.

ಚರ್ಚೆ ಹುಟ್ಟುಹಾಕಿದ್ದ ಫೋಟೊ
ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಜತೆಗಿನ ಫೋಟೊ ಶೇರ್ ಮಾಡುತ್ತಿದ್ದಂತೆ ಚರ್ಚೆ ಆರಂಭವಾಗಿತ್ತು. ನೆಟ್ಟಿಗರು ಏನೆಲ್ಲ ಕಲ್ಪಿಸಿಕೊಂಡು ಕಮೆಂಟ್ ಮಾಡಲು ಆರಂಭಿಸಿದ್ದರು.

ವದಂತಿಗೆ ಬ್ರೇಕ್
ಇದೀಗ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ವದಂತಿಗೆ ಬ್ರೇಕ್ ಹಾಕಿರುವ ರಮ್ಯಾ, ʼʼವಿನಯ್ ರಾಜ್‌ಕುಮಾರ್ ನನಗೆ ತಮ್ಮನಿದ್ದಂತೆ. ಏನೇನೋ ಕಲ್ಪಿಸಬೇಡಿʼʼ ಎಂದು ಹೇಳಿದ್ದಾರೆ. ಆ ಮೂಲಕ ಗಾಳಿಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ವಿನಯ್ ಮತ್ತು ರಮ್ಯಾ ಅವರೊಂದಿಗೆ ಪ್ರವಾಸದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಕೂಡ ಇದ್ದರು.