IPL 2025: ಆರ್ಸಿಬಿ ಎದುರು ಅಜೇಯ 94 ರನ್ ಸಿಡಿಸಿ ಫಾರ್ಮ್ಗೆ ಮರಳಿದ ಇಶಾನ್ ಕಿಶನ್!
RCB vs SRH: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತಮ್ಮ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿದ್ದರು. ಇದಾದ ಬಳಿಕ ಅವರು ಫಾರ್ಮ್ ಕಳೆದುಕೊಂಡಿದ್ದರು. ಆದರೆ, ಮೇ 23 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ 48 ಎಸೆತಗಳಲ್ಲಿ ಅಜೇಯ 94 ರನ್ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ.



ಬೆಂಗಳೂರು vs ಹೈದರಾಬಾದ್
ಶುಕ್ರವಾರ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತಿದ್ದ ಎಸ್ಆರ್ಎಚ್ ತಂಡ ಮೊದಲು ಬ್ಯಾಟ್ ಮಾಡುವಂತಾಗಿತ್ತು.

ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್
ಕಳೆದ ಹಲವು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಶಾನ್ ಕಿಶನ್, ಶುಕ್ರಾವರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಫಾರ್ಮ್ಗೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಎಡಗೈ ಬ್ಯಾಟ್ಸ್ಮನ್, ಕೊನೆಯವರೆಗೂ ಬ್ಯಾಟ್ ಮಾಡಿದರು ಹಾಗೂ ಆರ್ಸಿಬಿ ಬೌಲರ್ಗಳಿಗೆ ಕಾಡಿದರು.

48 ಎಸೆತಗಳಲ್ಲಿ 94 ರನ್ ಸಿಡಿಸಿದ ಕಿಶನ್
ಸ್ಪೋಟಕ ಬ್ಯಾಟ್ ಮಾಡಿದ ಇಶಾನ್ ಕಿಶನ್ ಆರ್ಸಿಬಿ ಬೌಲರ್ಗಳನ್ನು ದಂಡಿಸಿದರು. ಅವರು ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಬಿದ್ದರೂ ಮತ್ತೊಂದು ತುದಿಯಲ್ಲಿ ಇಶಾನ್ ಕಿಶನ್ ಅಬ್ಬರಿಸಿದರು. ಅವರು 48 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 94 ರನ್ ಸಿಡಿಸಿದರು.

231 ರನ್ ಕಲೆ ಹಾಕಿದ ಸನ್ರೈಸರ್ಸ್
ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತನ್ನ ಪಾಲಿನ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಆ ಮೂಲಕ ಆರ್ಸಿಬಿಗೆ 232 ರನ್ಗಳ ಗುರಿಯನ್ನು ನೀಡಿತು. ರೊಮಾರಿಯೊ ಶೆಫರ್ಡ್ 2 ಓವರ್ಗಳಲ್ಲಿ 14 ರನ್ಗಳಿಗೆ 2 ವಿಕೆಟ್ ಪಡೆದರು.

ಮಾರ್ಚ್ 23 ರಂದು ಶತಕ ಸಿಡಿಸಿದ್ದ ಇಶಾನ್
ಮಾರ್ಚ್ 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮೊದಲನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ 106 ರನ್ಗಳನ್ನು ಸಿಡಿಸಿದ್ದರು. ಇದೇ ಲಯವನ್ನು ಮುಂದಿನ ಪಂದ್ಯಗಳಲ್ಲಿ ಮುಂದುವರಿಸುವಲ್ಲಿ ಅವರು ವಿಫಲರಾಗಿದ್ದರು.

ಪ್ಲೇಆಫ್ಸ್ನಿಂದ ಹೊರಬಿದ್ದಿರುವ ಹೈದರಾಬಾದ್
ಸನ್ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಶುಭಾರಂಭ ಕಂಡಿತ್ತು. ಆದರೂ ನಂತರದ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿತ್ತು. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4ರಲ್ಲಿ ಮಾತ್ರ ಹಾಗೂ ಇನ್ನುಳಿದ 7ರಲ್ಲಿ ಸೋಲು ಅನುಭವಿಸಿತ್ತು. ಇದರ ಪರಿಣಾಮ ಎಸ್ಆರ್ಎಚ್ ಪ್ಲೇಆಫ್ಸ್ ರೇಸ್ನಿಂದ ಹೊರ ಬಿದ್ದಿದೆ.