Saree Fashion 2026: ಸಾಕ್ಷಿ ಅಗರ್ವಾಲ್ ಹ್ಯಾಂಡ್ಲೂಮ್ ಸೀರೆ ಮೇಲೆ ಜೆನ್ ಜಿ ಯುವತಿಯರ ಕಣ್ಣು
ನಟಿ ಸಾಕ್ಷಿ ಅಗರ್ವಾಲ್ ಉಟ್ಟಿರುವ ಇಂಡಿಗೋ ವರ್ಣದ ಬ್ಲೋಕ್ ಪ್ರಿಂಟೆಡ್ ಹ್ಯಾಂಡ್ಲೂಮ್ ಸೀರೆ ಮೇಲೆ ಜೆನ್ ಜಿ ಯುವತಿಯರ ಕಣ್ಣು ಬಿದ್ದಿದೆ. ಇದ್ಯಾವ ಬಗೆಯ ಸೀರೆ? ಸಾಕ್ಷಿಯಂತೆ ಕಾಣಿಸುವುದು ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಸಾಕ್ಷಿ ಅಗರ್ವಾಲ್, ನಟಿ -
ನಟಿ ಸಾಕ್ಷಿ ಅಗರ್ವಾಲ್ ಉಟ್ಟಂತಹ ಬ್ಲೋಕ್ ಪ್ರಿಂಟೆಡ್ ಹ್ಯಾಂಡ್ಲೂಮ್ ಸೀರೆ ಮೇಲೆ ಜೆನ್ ಜಿ ಯುವತಿಯರ ಕಣ್ಣು ಬಿದ್ದಿದೆ.
ಸೀರೆ ಮೇಲೆ ಜೆನ್ ಜಿ ಯುವತಿಯರ ಕಣ್ಣು
ಕಳೆದ ಸೀಸನ್ನಲ್ಲಿ ಟ್ರೆಂಡಿಯಾಗಿದ್ದ ಈ ಸೀರೆಗೆ ಮಾರುಕಟ್ಟೆಯಲ್ಲಿ ಮರು ಬೇಡಿಕೆ ಸೃಷ್ಟಿಸಿಕೊಂಡಿದೆ. ಎಲಿಗೆಂಟ್ ಹಾಗೂ ಸಿಂಪಲ್ ಲುಕ್ ಬಯಸುವ ಜೆನ್ ಜಿ ಯುವತಿಯರನ್ನು ಸೆಳೆದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸಾಕ್ಷಿ ಅಗರ್ವಾಲ್ ಸೀರೆ ಸ್ಪೆಷಾಲಿಟಿ
ಹೌದು, ಇತ್ತಿಚೇಗೆ ಬಹುಭಾಷಾ ತಾರೆ ನಟಿ ಸಾಕ್ಷಿ ಅಗರ್ವಾಲ್ ಉಟ್ಟಿದ್ದ, ಬಿಳಿ ಮತ್ತು ನೀಲಿ ವರ್ಣದ ಎಲೆಯಾಕಾರದ ಬ್ಲೋಕ್ ಪ್ರಿಂಟ್ ಹೊಂದಿರುವ ಪಕ್ಕಾ ಹ್ಯಾಂಡ್ಲೂಮ್ ಸೀರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಗಳನ್ನು ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರನ್ನು ಆಕರ್ಷಿಸಿದೆ.
ಸೀರೆಯ ವಿಶೇಷತೆಯಾದರೂ ಏನು?
ಇದೊಂದು ಇಂಡಿಗೋ ಬ್ಲ್ಯೂ ಮತ್ತು ವೈಟ್ ಕಲರ್ನ ಹ್ಯಾಂಡ್ಬ್ಲೋಕ್ ಪ್ರಿಂಟ್ ಹೊಂದಿರುವ ಕಾಟನ್ ಸೀರೆಯಾಗಿದೆ. ಸೀರೆಯ ಮೇಲಿರುವ ಟ್ರೆಡಿಷನಲ್ ಜೆಮೆಟ್ರಿಕ್ ಲೀಫ್ (ಎಲೆಗಳ ಚಿತ್ತಾರ) ಗಳ ಮೊಟಿಫ್ಗಳು ಹಾಗೂ ಸ್ಟ್ರೈಪ್ ಬಾರ್ಡರ್ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಕ್ಷಿ ಅಗರ್ವಾಲ್ ಸೀರೆ ಲುಕ್ಗೆ 5 ಟಿಪ್ಸ್
- ಇಂಡಿಗೋ ನೀಲಿ ಕಲರ್ನ ಹ್ಯಾಂಡ್ಲೂಮ್ ಸೀರೆಯನ್ನೇ ಆಯ್ಕೆ ಮಾಡಿ, ಉಡಿ.
- ಮಾನೋಕ್ರೋಮ್ ಕಲರ್ನ ಬ್ಲೌಸ್ ಅಥವಾ ಕಾಂಟ್ರಾಸ್ಟ್ ಬ್ಲೌಸ್ ಕೂಡ ಈ ಸೀರೆಗೆ ಧರಿಸಬಹುದು.
- ಸಿಂಪಲ್ ಮೇಕೋವರ್ ಸಾಕು.
- ಮಿನಿಮಲ್ ಆಕ್ಸೆಸರೀಸ್ ಧರಿಸಿದರೂ ಓಕೆ.
- ಪಲ್ಲುವಿಗೆ ಸಿಂಗಲ್ ಪಿನ್ ಹಾಕಿ. ಎಲಿಗೆಂಟ್ ಆಗಿ ಕಾಣಿಸುತ್ತದೆ.