Season Fashion 2026: ಮರಳಿ ಬಂತು ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ಫ್ಯಾಷನ್
ಬಾಲಿವುಡ್ ಸಿನಿಮಾಗಳ ಮೂಲಕ ದಶಕಗಳ ಹಿಂದೆ ಸಖತ್ ಟ್ರೆಂಡಿಯಾಗಿದ್ದ ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ಫ್ಯಾಷನ್ ಈ ಸೀಸನ್ನಲ್ಲಿ ಮರಳಿದ್ದು, ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತಿವೆ. ಈ ಕುರಿತಂತೆ ಇಲ್ಲಿದೆ ವಿವರ.
ಚಿತ್ರಗಳು: ಅನುಶ್ರೀ ನಾಯರ್, ನಟಿ -
ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ಮರಳಿವೆ. ಹೌದು, ದಶಕಗಳ ಹಿಂದೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸಖತ್ ಟ್ರೆಂಡಿಯಾಗಿದ್ದ ಬಗೆಬಗೆಯ ವಿನ್ಯಾಸದ ಕಲರ್ನ ಜಾರ್ಜೆಟ್ ಅನಾರ್ಕಲಿ ಚೂಡಿದಾರ್ಗಳು ಈ ಸೀಸನ್ನಲ್ಲಿ ಮತ್ತೇ ಮರಳಿದ್ದು, ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತಿವೆ.
ಮಾರಾಟ ಹೆಚ್ಚಿಸಿಕೊಂಡ ಅನಾರ್ಕಲಿ ಚೂಡಿದಾರ್
ಬಾಲಿವುಡ್ ನಟಿ ಅನುಶ್ರೀ ಧರಿಸಿದ್ಧ ಬ್ರಾಂಡ್ವೊಂದರ ರೆಡ್ ಜಾರ್ಜೆಟ್ ಚೂಡಿದಾರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚೂಡಿದಾರ್ ಪ್ರೇಮಿಗಳನ್ನು ಸೆಳೆದಿತ್ತು. ಅಲ್ಲದೇ, ಆನ್ಲೈನ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುವಂತೆ ಮಾಡಿತು. ಇದಕ್ಕೆ ಪೂರಕ ಎಂಬಂತೆ, ಆನ್ಲೈನ್ ರಿಟೇಲ್ಸ್ ಶಾಪ್ಗಳು ಕೂಡ ಜಾರ್ಜೆಟ್ ಅನಾರ್ಕಲಿ ಸೂಟ್ ಅಥವಾ ಚೂಡಿದಾರ್ ಸೆಟ್ಗಳನ್ನು ಬಿಡುಗಡೆಗೊಳಿಸಿ, ಮಾರಾಟ ಹೆಚ್ಚಿಸಿಕೊಂಡವು ಎನ್ನುತ್ತಾರೆ ಬೋಟಿಕ್ವೊಂದರ ಡಿಸೈನರ್ ದೀಕ್ಷಾ.
ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ವಿಶೇಷತೆ
ಜಾರ್ಜೆಟ್ ಫ್ಯಾಬ್ರಿಕ್ನಲ್ಲಿ ಸಿದ್ಧಪಡಿಸಲಾಗುವ ಅನಾರ್ಕಲಿ ಚೂಡಿದಾರ್ ಹೊಸ ಫ್ಯಾಷನ್ ಏನಲ್ಲ! ಆದರೆ, ಇವನ್ನು ಧರಿಸಿದಾಗ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಫ್ಲೋ ಆಗಿ ಕೂರುತ್ತವೆ. ದಪ್ಪಗಿರುವವರನ್ನು ಅಂದವಾಗಿ ಬಿಂಬಿಸುತ್ತವೆ. ಇನ್ನು, ಸ್ಲಿಮ್ ಆಗಿರುವವರಂತೂ ಮತ್ತಷ್ಟು ಚೆನ್ನಾಗಿ ಕಾಣಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ವಿನ್ಯಾಸ
ಸಾಕಷ್ಟು ಸ್ಟಿಚ್ಚಿಂಗ್ ಹೊಂದಿರುವ ಇವು ಅಂಬ್ರೆಲಾ ಡಿಸೈನ್ ಹೊಂದಿರುತ್ತವೆ. ಫುಲ್ ಸ್ಲೀವ್ ಇವುಗಳ ಸ್ಪೆಷಾಲಿಟಿ. ಇನ್ನು ಇತ್ತೀಚೆಗೆ ಪ್ರಚಲಿತದಲ್ಲಿರುವ ಲೆಗ್ಗಿಂಗ್ಸ್ನಂತೆಯೇ ಇವು ಕೂಡ ಟೈಟಾಗಿ ಕಾಲಿಗೆ ಕೂರುತ್ತವೆ.
ಜಾರ್ಜೆಟ್ ಅನಾರ್ಕಲಿ ಚೂಡಿದಾರ್ ಪ್ರಿಯರಿಗೆ ಟಿಪ್ಸ್
- ಫುಲ್ ಸ್ಲೀವ್ ಡಿಸೈನ್ ಟ್ರೆಂಡ್ನಲ್ಲಿದೆ.
- ಸಾಲಿಡ್ ಕಲರ್ಗಳ ಆಯ್ಕೆ ಮಾಡಿ.
- ಲೈಟ್ವೈಟ್ ಆಗಿರುವುದರಿಂದ ವರ್ಕಿಂಗ್ ವುಮೆನ್ಗೆ ಬೆಸ್ಟ್ ಫ್ಯಾಷನ್ವೇರ್.
- ಮಾನ್ಸೂನ್ನಲ್ಲಿ ಇವುಗಳ ಫ್ಯಾಷನ್ ಮ್ಯಾಚ್ ಆಗುತ್ತದೆ.