Sreeleela: ನೋ ಮೇಕಪ್ ಲುಕ್ನಲ್ಲಿ ಶ್ರೀಲೀಲಾ; ಮಾನ್ಸೂನ್ ವೈಬ್ ಫೋಟೊಗಳಿಗೆ ಅಭಿಮಾನಿಗಳು ಫಿದಾ
ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಅವರಿಗೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ತೆಲುಗಿನಲ್ಲೂ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾನ್ಸೂನ್ ವೈಬ್ನ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Sreeleela


ನಟಿ ಶ್ರೀಲೀಲಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾನ್ಸೂನ್ ದಿನದ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಳೆಯ ವಾತಾವರಣವನ್ನು ಆನಂದಿಸುತ್ತಿರುವ ಅವರು ಫೋಟೊಗಳ ಜತೆಗೆ, "ಮಳೆಯಾಗುತ್ತಿದೆ...ಮುದ್ದಿನ ಸಾಕು ನಾಯಿ ಜೊತೆ ವಾಕ್ಗೆ ಹೋಗುವ ಸಮಯ" ಎಂದು ಅವರು ಬರೆದುಕೊಂಡಿದ್ದಾರೆ.

ಈ ಫೋಟೋಗಳಲ್ಲಿ ಶ್ರೀಲೀಲಾ ಯಾವುದೇ ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಕಾಣಿಸಿ ಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದು ಬಹಳಷ್ಟು ಕ್ಯೂಟ್ ಆಗಿ ಕಂಡಿದ್ದಾರೆ. ಈ ಫೋಟೊಗಳಿಗೆ ಬಹಳಷ್ಟು ಲೈಕ್, ಕಮೆಂಟ್ ಬಂದಿದೆ.

ಸುಂದರ ನಿಸರ್ಗದ ನಡುವೆ ನೀಲಿ ಛತ್ರಿಯನ್ನು ಬಳಸಿ ಫೋಟೊಕ್ಕೆ ಕ್ಯೂಟ್ ಎಕ್ಸ್ಪ್ರೆಷನ್ ನೀಡಿದ್ದಾರೆ. ಸದ್ಯ ಟಾಲಿವುಡ್ ಜತೆಗೆ ಬಾಲಿವುಡ್ಲ್ಲಿ ಶ್ರೀಲೀಲಾ ಬಹಳಷ್ಟು ಸದ್ದು ಮಾಡುತ್ತಿದ್ದಾರೆ.

'ಕಿಸ್' ಕನ್ನಡ ಸಿನಿಮಾ ಮೂಲಕ ಸಿನಿ ಪ್ರಯಣ ಆರಂಭ ಮಾಡಿದ ಅವರು ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಚಿತ್ರೋದ್ಯಮಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ನಟಿಯ ಈ ಫೋಟೊ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಯೊಬ್ಬರು ಕ್ಯುಟ್ ಲುಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗಷ್ಟೆ ತೆರೆಕಂಡ ಕಿರೀಟಿ ರೆಡ್ಡಿ ಮತ್ತು ಶ್ರೀಲೀಲಾ ಅಭಿನಯದ ʼಜೂನಿಯರ್ʼ ಕನ್ನಡ-ತೆಲುಗು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ನಟಿ ಸದ್ಯ ʼಭಗತ್ ಸಿಂಗ್ʼ ತೆಲುಗು ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅನುರಾಗ್ ಬಸು ನಿರ್ದೇಶನದ ಭೂಷಣ್ ಕುಮಾರ್ ನಿರ್ಮಾಣದ ʼಆಶಿಕಿ 3ʼ ಹಿಂದಿ ಸಿನಿಮಾದಲ್ಲಿ ನಟ ಕಾರ್ತಿಕ ಆರ್ಯನ್ಗೆ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಜತೆಗೆ ರಣವೀರ್ ಸಿಂಗ್ ನಟನೆಯ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.