Star Fashion 2026: ಸಿಂಪಲ್ ಪಿಂಕ್ ಸೀರೆಯಲ್ಲಿ ಪರಿಣಿತಿ ಚೋಪ್ರಾ ಕಮ್ಬ್ಯಾಕ್
Parineeti Chopra Saree Fashion: ಬಹುಕಾಲದ ನಂತರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ವೈಬ್ರೆಂಟ್ ಪಿಂಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಸೀರೆಯ ಲುಕ್ ಹೇಗಿದೆ? ಫ್ಯಾಷನಿಸ್ಟಾಗಳು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ನಟಿ ಪರಿಣಿತಿ ಚೋಪ್ರಾ, (ಫೋಟೊಕೃಪೆ: ಸ್ಮೈಲ್ಪ್ಲೀಸ್) -
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಪಿಂಕ್ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಬಹುಕಾಲದ ನಂತರ ಅದರಲ್ಲೂ ಮಗುವಾದ ಸಾಕಷ್ಟು ದಿನಗಳ ಬಳಿಕ ಪರಿಣಿತಿ ಚೋಪ್ರಾ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದು, ಫಾಲೋವರ್ಗಳ ಕಣ್ಣು ಕುಕ್ಕಿದೆ.
ಪರಿಣಿತಿಯ ಸೀರೆಯ ಫೋಟೋಶೂಟ್
ಅಂದಹಾಗೆ, ಪರಿಣಿತಿ ಚೋಪ್ರಾ ಮದುವೆಯಾದ ನಂತರ ಸಿನಿಮಾಗಳಿಂದ ಹಾಗೂ ಪ್ರೊಫೆಷನಲ್ ಫ್ಯಾಷನ್ ಫೋಟೊ ಶೂಟ್ಗಳಿಂದಲೂ ದೂರವೇ ಉಳಿದಿದ್ದರು. ಇನ್ನು, ಕಪಿಲ್ ಶರ್ಮಾರ ಶೋನಲ್ಲಿ ಕಾಣಿಸಿಕೊಂಡದ್ದು ಹೊರತುಪಡಿಸದರೇ ನಂತರ ಮಗುವಿನ ಆರೈಕೆಯಲ್ಲೆ ಬ್ಯುಸಿಯಾಗಿದ್ದರು. ಇದೀಗ ಈ ಸೀರೆಯ ಫೋಟೊಶೂಟ್ ಫೋಟೊಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಕಮ್ಬ್ಯಾಕ್ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ಸ್ಟೈಲಿಸ್ಟ್ಗಳು.
ಫೋಟೊಶೂಟ್ಗೆ ಸೀರೆಯೇ ಯಾಕೆ?
ಮಗುವಾದ ನಂತರ ಸೀರೆಯ ಫೋಟೊಶೂಟ್ನಲ್ಲಿ ಕಾಣಿಸಿಕೊಂಡಿರುವ ಪರಿಣಿತಿ, ವೆಸ್ಟರ್ನ್ ಔಟ್ಫಿಟ್ ಬದಲು ಸೀರೆಯನ್ನು ಆಯ್ಕೆ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಪರಿಣಿತಿ ಚೋಪ್ರಾ ಪಿಂಕ್ ಸೀರೆ
ಈ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಪಿಂಕ್ ಸಾದಾ ಸೀರೆ ಅದಕ್ಕೆ ಹಾಫ್ ವೈಟ್ನ ದೇಸಿ ಲುಕ್ ನೀಡುವ ಫುಲ್ ಸ್ಲೀವ್ ಬ್ಲೌಸ್ ಧರಿಸಿರುವ ಪರಿಣಿತಿಯವರಿಗೆ ಈ ಲುಕ್ ಡಿಸೆಂಟ್ ಲುಕ್ ನೀಡಿದೆ.
ಪರಿಣಿತಿಯವರ ಹೆವ್ವಿ ನೆಕ್ಲೇಸ್, ಕಡಗ ಹಾಗೂ ಸ್ಟಡ್ಸ್ ಎಲಿಗೆಂಟಾಗಿ ಕಾಣುವಂತೆ ಬಿಂಬಿಸಿದೆ. ಅವರ ಮೇಕೋವರ್ ಕೂಡ ತೀರಾ ಸಿಂಪಲ್ ಆಗಿದೆ ಎಂದಿರುವ ಫ್ಯಾಷನ್ ವಿಶ್ಲೇಷಕರು, ಪರಿಣಿತಿ ಮತ್ತೊಂದಿಷ್ಟು ಪ್ರಯೋಗಾತ್ಮಕವಾಗಿ ಕಾಣಿಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.