Star Fashion Review 2026: ನೆತ್ತಿಗೇರಿದ ಪ್ರಿಯಾ ವಾರಿಯರ್ ಕಿವಿಯೋಲೆಯ ಮಾಟಿ
ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಬಹುಭಾಷಾ ತಾರೆ ಪ್ರಿಯಾ ವಾರಿಯರ್ ಭಾರಿ ಗಾತ್ರದ ಜುಮ್ಕಾ ಸೆಟ್ ಧರಿಸಿದ್ದು, ಅದರೊಂದಿಗಿರುವ ಮಾಟಿ ಮಾತ್ರ ಅವರ ನೆತ್ತಿಗೇರಿದೆ. ಈ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಪ್ರಿಯಾ ವಾರಿಯರ್, ನಟಿ -
ನಟಿ ಪ್ರಿಯಾ ವಾರಿಯರ್ ಅವರ ಕಿವಿಯೋಲೆಯ ಮುತ್ತಿನ ಮಾಟಿ ಅವರ ನೆತ್ತಿಯನ್ನೇರಿದೆ.
ಜ್ಯುವೆಲರಿ ಪ್ರಿಯರ ಹುಬ್ಬೇರಿಸಿದ ಮಾಟಿ ಸ್ಟೈಲ್
ಹೌದು, ಬಹುಭಾಷಾ ತಾರೆ ಪ್ರಿಯಾ ವಾರಿಯರ್, ಇತ್ತೀಚೆಗೆ ಫ್ಯಾಷನ್ ಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಅವರು ಕಾಣಿಸಿಕೊಂಡಿರುವ ಟ್ರೆಡಿಷನಲ್ ಲುಕ್ಗೆ ಬಿಗ್ ಜುಮ್ಕಾ ಸೆಟ್ ಧರಿಸಿದ್ದಾರೆ. ಇದರೊಂದಿಗೆ ಅಟ್ಯಾಚ್ ಆಗಿರುವ ಮಾಟಿಯನ್ನು ಮಾಮೂಲಿನಂತೆ ಕೆಳ ಭಾಗದ ಕೂದಲಿಗೆ ಸಿಕ್ಕಿಸದೇ ನೆತ್ತಿಗೆ ಸಿಕ್ಕಿಸಿ, ಏರಿಸಿದ್ದಾರೆ. ಈ ಸ್ಟೈಲ್ ಜ್ಯುವೆಲರಿ ಪ್ರಿಯರ ಹುಬ್ಬೇರಿಸಿದೆ.
ಅರರೆ., ಇದ್ಯಾವ ಸ್ಟೈಲ್? ಯಾಕೆ ಹೀಗೆ ಧರಿಸಿದ್ದಾರೆ? ಎಂದು ಯೋಚಿಸುತ್ತಿದ್ದೀರಾ? ಗಮನಸೆಳೆಯಲು ಅವರು ಪಾಲಿಸಿರುವ ಸ್ಟೈಲಿಂಗ್ ತಂತ್ರ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪ್ರಿಯಾ ಲುಕ್ಗೆ ಸಾಥ್ ನೀಡಿರುವ ಟ್ರೆಡಿಷನಲ್ ಅಟೈರ್
ಫ್ಯಾಷನಿಸ್ಟಾಗಳ ಪ್ರಕಾರ, ಪ್ರಿಯಾ ವಾರಿಯರ್ ಮಸ್ಟರ್ಡ್ ಕಲರ್ನ ಬಾರ್ಡರ್ ಇರುವಂತಹ ಸಾದಾ ಸಿಲ್ಕ್ ಸೀರೆ ಧರಿಸಿದ್ದು ಈ ಸೀರೆಗೆ ಕ್ರಾಪ್ ಕಾರ್ಸೆಟ್ ಶೈಲಿಯ ಬ್ಯಾಕ್ ಟೈಯಿಂಗ್ ಅಪ್ಷನ್ ಇರುವಂತಹ ಬ್ಲೌಸ್ ಮ್ಯಾಚ್ ಮಾಡಿದ್ದಾರೆ. ಇದು ಅವರಿಗೆ ಸೀರೆಯಲ್ಲೂ ಗ್ಲಾಮರ್ಸ್ ಟಚ್ ನೀಡಿದೆ.
ಬನ್ ಹೇರ್ಸ್ಟೈಲ್ಗೆ ಮಾಟಿ
ಇನ್ನು, ಪ್ರಿಯಾರ ಬನ್ ಹೇರ್ಸ್ಟೈಲ್ ಸಿಂಪಲ್ ಆಗಿದ್ದು, ಅದಕ್ಕೆ ಮಲ್ಲಿಗೆ ಹೂವನ್ನು ಮುಡಿದಿದ್ದಾರೆ. ಜತೆಗೆ ಕಿವಿಯ ಬಿಗ್ ಜುಮ್ಕಾದ ಜತೆಯಿರುವ ಪರ್ಲ್ ಮಾಟಿಯನ್ನು ನೆತ್ತಿಯ ಕೂದಲಿಗೆ ಎಳೆದು ಸಿಕ್ಕಿಸಲಾಗಿದೆ. ಇದು ಅವರಿಗೆ ಟ್ರೆಡಿಷನಲ್ ಲುಕ್ ನೀಡಿದೆ ಎನ್ನುವುದಕ್ಕಿಂತಲೂ ಹೀಗೂ ಮಾಟಿಯನ್ನು ಇಷ್ಟು ಎತ್ತರಕ್ಕೆ ಸಿಕ್ಕಿಸಿ ಅಲಂಕರಿಸಬಹುದಾ? ಎಂಬುದನ್ನು ತೋರ್ಪಡಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪ್ರಿಯಾ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರ ಮಾತು
ಒಟ್ಟಾರೆ, ಪ್ರಿಯಾ ಅವರ ಈ ಲುಕ್ ಟ್ರೆಡಿಷನಲ್ ಆದರೂ ಅವರ ಈ ಮಾಟಿಯ ಸ್ಟೈಲಿಂಗ್ ಮಾತ್ರ ನೋಡುಗರಿಗೆ ಡಿಫರೆಂಟ್ ಎಂದೆನಿಸುವಂತೆ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ರಾಚಿ.