Star Saree Fashion Review 2026: ಪಟೋಲಾ ಸಿಲ್ಕ್ ಸೀರೆಯಲ್ಲಿ ಕಂಗನಾ ಟ್ರೆಡಿಷನಲ್ ಲುಕ್
ಭಾರತ್ ಭಾಗ್ಯ ವಿಧಾತ ಸಿನಿಮಾ ಇವೆಂಟ್ವೊಂದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಉಟ್ಟಿದ್ದ ಇಕ್ಕತ್ ಪಟೋಲಾ ಸಿಲ್ಕ್ ಸೀರೆ ಇದೀಗ ಟ್ರೆಡಿಷನಲ್ ಲುಕ್ ಬಯಸುವ ಮಾನಿನಿಯರನ್ನು ಸೆಳೆದಿದೆ. ಈ ಸೀರೆಯಲ್ಲಿ ಅವರ ಲುಕ್ ಹೇಗಿತ್ತು? ಇಲ್ಲಿದೆ ವಿವರ.
ಚಿತ್ರಗಳು: ಕಂಗನಾ ರಾಣಾವತ್, ನಟಿ -
ಕಂಗನಾ ರಾಣಾವತ್ ಉಟ್ಟ ಟ್ರೆಡಿಷನಲ್ ಇಕ್ಕತ್ ಪಟೋಲಾ ಸೀರೆ ಇದೀಗ ಮತ್ತೊಮ್ಮೆ ಮಾನಿನಿಯರನ್ನು ಆಕರ್ಷಿಸಿದೆ.
ಸೀರೆ ಪ್ರಿಯರ ಮನಗೆದ್ದ ಕಂಗನಾರ ಪಟೋಲಾ ಸೀರೆ
ಹೌದು, ಜೋಧ್ಪುರ್ನಲ್ಲಿ ನಡೆದ ತಮ್ಮ ಭಾರತ್ ಭಾಗ್ಯ ವಿಧಾತ ಸಿನಿಮಾ ಇವೆಂಟ್ನಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಉಟ್ಟಿದ್ದ ಪಕ್ಕಾ ಟ್ರೆಡಿಷನಲ್ ಲುಕ್ ನೀಡುವ ಇಕ್ಕತ್ ಪಟೋಲಾ ಸಿಲ್ಕ್ ಸೀರೆ ಇದೀಗ ಇದ್ದಕ್ಕಿದ್ದಂತೆ ಬೇಡಿಕೆ ಸೃಷ್ಟಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಆನ್ಲೈನ್ನಲ್ಲಿ ಶಾಪಿಂಗ್ ಪ್ರಿಯರು ಸೀರೆಯ ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್.
ಕಂಗನಾ ಉಟ್ಟ ರೆಡ್ ಇಕ್ಕತ್ ಪಟೋಲಾ ಸೀರೆ
ಕಂಗನಾ ಉಟ್ಟಿದ್ದ ರೆಡ್ ಕಲರ್ನ ಗುಜರಾತಿ ಡಬ್ಬಲ್ ಇಕ್ಕತ್ ಪಟೋಲಾ ಸಿಲ್ಕ್ ಸೀರೆಯು ಒಡಲ ತುಂಬೆಲ್ಲಾ ಫ್ಲೋರಲ್ ವಿನ್ಯಾಸ ಸೇರಿದಂತೆ ನಾನಾ ಡಿಸೈನ್ ಒಳಗೊಂಡಿದೆ. ಮಲ್ಟಿ ಕಲರ್ನ ಈ ಸೀರೆಯಲ್ಲಿ ಜೆಮೆಟ್ರಿಕ್ ಡಿಸೈನ್ಸ್ ಜತೆಗೆ ಆನೆಗಳ ಚಿತ್ತಾರವಿದೆ. ಕ್ರಿಮ್ಸನ್ ರೆಡ್ ಬಾರ್ಡರ್ ಪಲ್ಲು ಅತ್ಯಾಕರ್ಷಕವಾಗಿದೆ. ಇದಕ್ಕೆ ಧರಿಸಿರುವ ಎಂಬಾಲಿಶ್ಡ್ ಬ್ಲೌಸ್ ಮಲ್ಟಿ ಕಲರ್ನ ಟಾಸೆಲ್ಸ್ ಹೊಂದಿದೆ ಎಂದು ವಿವರಿಸುತ್ತಾರೆ ಫ್ಯಾಷನ್ ವಿಮರ್ಶಕರು.
ರಾಯಲ್ ಲುಕ್ ನೀಡಿದ ಜ್ಯುವೆಲರಿಗಳು
ಗ್ರೀನ್ ಬೀಡ್ಸ್ ಹೊಂದಿರುವ ಗೋಲ್ಡ್ ಕುಂದನ್ ಚೋಕರ್ ಸೆಟ್, ಮ್ಯಾಚಿಂಗ್ ಜುಮ್ಕಾ, ಕಂಗನ್ ಹಾಗೂ ಇಯರಿಂಗ್ಸ್ ಕಂಗನಾಗೆ ರಾಯಲ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ಮಿಂಚು.
ಗುಜರಾತಿ ಸ್ಟೈಲ್ ಡ್ರೇಪಿಂಗ್
ಕಂಗನಾ ಉಟ್ಟಿರುವ ಗುಜರಾತಿ ಸ್ಟೈಲ್ನ ಈ ಸೀರೆಯ ಡ್ರೇಪಿಂಗ್ ಬಹಳ ಸುಲಭ ಎನ್ನುವ ಸ್ಟೈಲಿಸ್ಟ್ಗಳು ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ನೀಡಿದ್ದಾರೆ.
ಪಟೋಲಾ ಸೀರೆ ಪ್ರಿಯರಿಗೆ ಟಿಪ್ಸ್
- ಗುಜರಾತಿ ಡ್ರೇಪಿಂಗ್ ಸ್ಟೈಲ್ ನಾರ್ತ್ ಇಂಡಿಯನ್ ಲುಕ್ ನೀಡುತ್ತದೆ.
- ಈ ಸ್ಟೈಲಿಂಗ್ಗೆ ಆಕ್ಸೆಸರೀಸ್ ಕೂಡ ಅಲ್ಲಿಯ ಕಡೆಯದ್ದೇ ಧರಿಸಿದರೇ ಉತ್ತಮ.
- ಪಟೋಲಾ ಸೀರೆ ಗ್ರ್ಯಾಂಡ್ ಲುಕ್ ನೀಡುವುದರಿಂದ ಆದಷ್ಟೂ ಚೋಕರ್ನಂತಹ ಜ್ಯುವೆಲರಿ ಧರಿಸಬೇಕು.