Star Fashion 2026: ವೈಲ್ಡ್ ಲುಕ್ಗೆ ತಿರುಗಿದ ಚೀತಾ ಪ್ರಿಂಟೆಡ್ ಡ್ರೆಸ್ ಫ್ಯಾಷನ್
Cheetah Printed Dress: ಅನಿಮಲ್ ಪ್ರಿಂಟ್ಸ್ನಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿರುವ ಚೀತಾ ಪ್ರಿಂಟೆಡ್ ಡ್ರೆಸ್ಗಳು ಇದೀಗ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿರುವುದು ಮಾತ್ರವಲ್ಲ, ವೈಲ್ಡ್ ಲುಕ್ಗೆ ತಿರುಗಿವೆ. ಇದ್ಯಾವ ಲುಕ್? ಕಾರಣವೇನು? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಕಂಗನಾ ಶರ್ಮಾ, ನಟಿ -
ಚೀತಾ ಪ್ರಿಂಟೆಡ್ ಡ್ರೆಸ್ಗಳು ಇದೀಗ ವೈಲ್ಡ್ ಲುಕ್ಗೆ ತಿರುಗಿವೆ.
ಅನಿಮಲ್ ಪ್ರಿಂಟೆಡ್ನಲ್ಲಿ ಚೀತಾ ಪ್ರಿಂಟ್ಸ್ಗೆ ಮಾನ್ಯತೆ
ಹೌದು, ಇತ್ತೀಚೆಗೆ ಮತ್ತೊಮ್ಮೆ ಅನಿಮಲ್ ಪ್ರಿಂಟ್ಸ್ ಉಡುಗೆಗಳು ದಾಳಿ ಇಟ್ಟಿದ್ದು, ಸಾಮಾನ್ಯರನ್ನು ಮಾತ್ರವಲ್ಲ, ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ ಚೀತಾ ಪ್ರಿಂಟೆಡ್ ಡ್ರೆಸ್ಗಳು ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ. ಹಾಟ್ ಲುಕ್ಗೆ ಸಾಥ್ ನೀಡುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಕಂಗನಾ ಶರ್ಮಾರ ಚೀತಾ ಪ್ರಿಂಟೆಡ್ ಹಾಟ್ ಡ್ರೆಸ್
ಅಂದಹಾಗೆ, ಇತ್ತೀಚೆಗೆ ಇವೆಂಟ್ವೊಂದರಲ್ಲಿ ಧರಿಸಿ ಸುದ್ದಿಯಾಗಿದ್ದ ನಟಿ ಕಂಗನಾ ಶರ್ಮಾರ ಚೀತಾ ಪ್ರಿಂಟೆಡ್ ಡ್ರೆಸ್ ಅವರಿಗೆ ಹಾಟ್ ಲುಕ್ ನೀಡುವುದರೊಂದಿಗೆ ಈ ಶೈಲಿಯ ಉಡುಪನ್ನು ಹೀಗೂ ಡಿಸೈನ್ ಮಾಡಬಹುದು ಎಂಬುದನ್ನು ಭಾವಿ ಡಿಸೈನರ್ಗಳಿಗೆ ತೋರಿಸಿಕೊಟ್ಟಂತಿತ್ತು. ಅಷ್ಟು ಮಾತ್ರವಲ್ಲ, ವೈಲ್ಡ್ ಲುಕ್ ನೀಡಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜೀನತ್.
ಚೀತಾ ಪ್ರಿಂಟೆಡ್ ಉಡುಗೆಗಳ ಮರು ಹುಟ್ಟು
ಚೀತಾ ಪ್ರಿಂಟೆಡ್ ಉಡುಗೆಗಳ ಫ್ಯಾಷನ್ ಇವತ್ತಿನದಲ್ಲ! ಸಾಕಷ್ಟು ದಶಕಗಳ ಹಿಂದೆಯೇ ಇತ್ತು. ಅಲ್ಲದೇ ಈ ಉಡುಪುಗಳು ರೆಟ್ರೋ ಫ್ಯಾಷನ್ಗೆ ಸೇರಿದ್ದವು. ಆದರೆ, ಇದೀಗ ಡಿಸೈನರ್ಗಳು ಈ ಡ್ರೆಸ್ಗೆ ಹೊಸ ಲುಕ್ ನೀಡಿ ಸದ್ಯದ ಫ್ಯಾಷನ್ ಕೆಟಗರಿಗೆ ಸೇರಿಸಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
ವೈಲ್ಡ್ ಲುಕ್ ನೀಡುವ ಚೀತಾ ಪ್ರಿಂಟೆಡ್ ಡ್ರೆಸ್ಗಳಿವು
ಹಾಲ್ಟರ್ ನೆಕ್ಲೈನ್ ಇರುವ ಮ್ಯಾಕ್ಸಿ, ಕಟೌಟ್ ಇರುವ ಫ್ರಾಕ್, ಆಫ್ ಶೋಲ್ಡರ್ನ ಗೌನ್, ಟೂ ಪೀಸ್ ಕೋ ಆರ್ಡ್ ಸೆಟ್ನಂತೆ ಕಾಣಿಸುವ ಮಿನಿ, ಮಿಡಿ ಹಾಗೂ ಶಾರ್ಟ್ಸ್ ಡ್ರೆಸ್ಗಳು ವೈಲ್ಡ್ ನೀಡುವಂತಹ ಡ್ರೆಸ್ಗಳು ಇತ್ತೀಚೆಗೆ ಸೆಲೆಬ್ರೆಟಿಗಳ ಮೂಲಕ ಮತ್ತೊಮ್ಮೆ ರಾರಾಜಿಸುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಶಾ.