Summer Fashion 2026: ಸಮ್ಮರ್ ಕೂಲ್ ಸ್ಟೈಲಿಂಗ್ಗೆ ಇಂಡೋ-ವೆಸ್ಟರ್ನ್ ಲುಕ್ನ ಗೌನ್ ಸಾಥ್
Lightweight Gowns: ಸಮ್ಮರ್ ಸೀಸನ್ನ ಕೂಲ್ ಲುಕ್ಗೆ ಸಾಥ್ ನೀಡುವಂತಹ ಇಂಡೋ-ವೆಸ್ಟರ್ನ್ ವಿನ್ಯಾಸದ ಅನಾರ್ಕಲಿ ಗೌನ್ನಂತೆ ಕಾಣಿಸುವಂತಹ ಲೈಟ್ವೈಟ್ ಗೌನ್ಗಳು ಎಂಟ್ರಿ ನೀಡಿವೆ. ಏನಿದರ ವಿಶೇಷತೆ? ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಸೋನಮ್ ಬಾಜ್ವಾ, ನಟಿ -
ಬೇಸಿಗೆಯ ಫ್ಯಾಷನ್ನಲ್ಲಿ ಕೂಲ್ ಆಗಿ ಕಾಣಿಸುವಂತಹ ನೋಡಲು ಅನಾರ್ಕಲಿ ಗೌನ್ನಂತೆಯೇ ಕಾಣಿಸುವ ಲೈಟ್ವೈಟ್ ಎಥ್ನಿಕ್ ಗೌನ್ಗಳು ಎಂಟ್ರಿ ನೀಡಿವೆ.
ಇಂಡೋ-ವೆಸ್ಟರ್ನ್ ಲುಕ್
ಹೌದು, ಈ ಸಮ್ಮರ್ ಸೀಸನ್ನಲ್ಲಿ ಧರಿಸಿದವರಿಗೆ ಆರಾಮ ಎಂದೆನಿಸುವಂತಹ ಇಂಡೋ-ವೆಸ್ಟರ್ನ್ ಶೈಲಿಯ ಅನಾರ್ಕಲಿ ಗೌನ್ನಂತೆ ಕಾಣಿಸುವ ಬಾಡಿಕಾನ್ ಲೈಟ್ವೈಟ್ ಗೌನ್ಗಳು ಎಂಟ್ರಿ ನೀಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಸೋನಂ ಬಾಜ್ವಾ ಸೇಜ್ ಗ್ರೀನ್ ಡಿಸೈನರ್ವೇರ್
ಅಂದಹಾಗೆ, ಇವೆಂಟ್ವೊಂದರಲ್ಲಿ ನಟಿ ಸೋನಂ ಬಾಜ್ವಾ ಧರಿಸಿದ್ದ ಈ ಶೈಲಿಯ ಗೌನ್ಗಳು ಸದ್ಯ ಈ ಸೀಸನ್ನ ಇಂಡೋ-ವೆಸ್ಟರ್ನ್ ಔಟ್ಫಿಟ್ ಪ್ರಿಯರಿಗೆ ಇಷ್ಟವಾಗಿದೆ. ಅದರಲ್ಲೂ ನೋಡುಗರಿಗೂ ಕೂಲ್ ಎಂದೆನಿಸುವ ಈ ಅನಾರ್ಕಲಿ ವಿನ್ಯಾಸದಂತೆ ಕಾಣಿಸುವ ಗೌನ್ ಡ್ರೆಸ್ ಎಲ್ಲಾ ವಯಸ್ಸಿನ ಮಾನಿನಿಯರಿಗೆ ಇಷ್ಟವಾಗಿದೆ.
ಅನಾರ್ಕಲಿ ಸ್ಟೈಲ್ ಗೌನ್ ವಿಶೇಷತೆ
ನೋಡಲು ತಕ್ಷಣಕ್ಕೆ ಅನಾರ್ಕಲಿ ಡ್ರೆಸ್ನಂತೆ ಕಂಡರೂ ಇದು ಅದಲ್ಲ! ಇದೇ ಕಾನ್ಸೆಪ್ಟನ್ನು ವೆಸ್ಟರ್ನ್ ಸ್ಲೀವ್ಲೆಸ್ ಔಟ್ಫಿಟ್ ಜತೆಗೆ ಮಿಕ್ಸ್ ಮ್ಯಾಚ್ ಮಾಡಿ ಪ್ರಯೋಗಾತ್ಮಕ ಡಿಸೈನರ್ವೇರ್ ವಿನ್ಯಾಸಗೊಳಿಸಲಾಗಿದೆ. ಗ್ರ್ಯಾಂಡ್ ಲುಕ್ ನೀಡುವುದರ ಜತೆಗೆ ಬೇಸಿಗೆಯ ಸೆಕೆಗೆ ಈ ಡ್ರೆಸ್ ಕಂಫರ್ಟಬಲ್ ಫೀಲ್ ನೀಡುತ್ತದೆ. ಹಾಗಾಗಿ ಸಾಕಷ್ಟು ಆನ್ಲೈನ್ ಬ್ರ್ಯಾಂಡ್ಗಳು ಈಗಾಗಲೇ ಈ ಶೈಲಿಯ ಔಟ್ಫಿಟ್ ಬಿಡುಗಡೆಗೊಳಿಸಿ, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಸ್ಟೈಲಿಂಗ್ ಹೇಗೆ?
- ಕೂಲ್ ಲುಕ್ಗೆ ಸಾಥ್ ನೀಡುವಂತಹ ಆಕ್ಸೆಸರೀಸ್ ಧರಿಸಿದರೇ ಸಾಕು!
- ಸಿಂಪಲ್ ಮೇಕಪ್ ಮಾಡಿ, ನೋಡಿ!
- ದುಪಟ್ಟಾ ಇಲ್ಲದಿದ್ದರೂ ಆಕರ್ಷಕವಾಗಿ ಕಾಣಿಸುತ್ತದೆ.
- ಹೆಚ್ಚು ಮೇಕೋವರ್ ಬೇಕಾಗಿಲ್ಲ!