Summer Fashion 2026: ಸಿಂಗಲ್ ಶೋಲ್ಡರ್ ಔಟ್ಫಿಟ್ಸ್ ಪ್ರಿಯರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಗ್ಲಾಮರಸ್ ಲುಕ್ ನೀಡುವ ಸಿಂಗಲ್ ಶೋಲ್ಡರ್ ಔಟ್ಫಿಟ್ಗಳು ಈ ಸಮ್ಮರ್ನಲ್ಲಿ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈ ಶೈಲಿಯ ಔಟ್ಫಿಟ್ಸ್ ಧರಿಸುವವರು ಯಾವ್ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಶ್ರೀಜಿತಾ ಘೋಷ್, ನಟಿ -
ಶೀಲಾ ಸಿ ಶೆಟ್ಟಿ
Apr 11, 2026 6:14 PM
1/5
ಸಿಂಗಲ್ ಶೋಲ್ಡರ್ ಫ್ಯಾಷನ್ವೇರ್ಸ್ ಸಮ್ಮರ್ ಸೀಸನಲ್ಲಿ ಟ್ರೆಂಡಿಯಾಗಿವೆ.
2/5
ಧರಿಸಿದಾಗ ಗ್ಲಾಮರಸ್ ಲುಕ್ ನೀಡುವ ಈ ಸಿಂಗಲ್ ಶೋಲ್ಡರ್ ಟಾಪ್ಗಳು ಹಾಗೂ ಔಟ್ಫಿಟ್ಗಳು ಈ ಸಮ್ಮರ್ನಲ್ಲಿ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
3/5
ಸಿಂಗಲ್ ಶೋಲ್ಡರ್ ಔಟ್ಫಿಟ್ಸ್
ಎಲ್ಲರಿಗೂ ಗೊತ್ತಿರುವಂತೆ ಸಿಂಗಲ್ ಶೋಲ್ಡರ್ ಔಟ್ಫಿಟ್ಗಳು ಹಾಗೂ ಟಾಪ್ಗಳು ಒಂದು ಕಡೆಯಲ್ಲಿ ಮಾತ್ರ ಸ್ಲೀವ್ ಹೊಂದಿರುತ್ತವೆ. ಇವನ್ನು ನೋಡಲು ಗ್ಲಾಮರಸ್ ಆಗಿ ಕಾಣಿಸುವಂತೆ ವಿನ್ಯಾಸ ಮಾಡಲಾಗಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
4/5
ಸಿಂಗಲ್ ಶೋಲ್ಡರ್ ಔಟ್ಫಿಟ್ಸ್ ಜಾದೂ
ಸಿಂಗಲ್ ಶೋಲ್ಡರ್ ಔಟ್ಫಿಟ್ಸ್ ಸೆಲೆಬ್ರೆಟಿಗಳ ಫೇವರೇಟ್ ಚಾಯ್ಸ್ನಲ್ಲಿವೆ ಕೂಡ. ಅಲ್ಲದೇ, ಇವನ್ನು ಸೆಲೆಬ್ರೆಟಿ ಔಟ್ಫಿಟ್ಸ್ ಕೆಟಗರಿಗೆ ಸೇರಿಸಲಾಗಿದೆ. ಹಾಗಾಗಿ ಸಾಮಾನ್ಯ ಹುಡುಗಿಯರು ಇವನ್ನು ಧರಿಸುವುದು ತೀರಾ ಕಡಿಮೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
5/5
ಸಿಂಗಲ್ ಶೋಲ್ಡರ್ ಔಟ್ಫಿಟ್ಸ್-ಟಾಪ್ ಧರಿಸುವವರು ಗಮನಿಸಬೇಕಾದ್ದು
- ಆದಷ್ಟೂ ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ಹೊಂದುವಂತದ್ದನ್ನು ಖರೀದಿಸಿ.
- ಸಿಂಗಲ್ ಶೋಲ್ಡರ್ ಧರಿಸುವುದರಿಂದ ಸಾಕಷ್ಟು ಎಕ್ಸ್ಪೋಸ್ ಆಗುವ ಸಾಧ್ಯತೆಯೇ ಹೆಚ್ಚು.
- ಇನ್ನರ್ವೇರ್ ಸರಿಯಾಗಿರುವುದನ್ನು ಹಾಕಿಕೊಳ್ಳುವುದು ಮುಖ್ಯ.
- ಆದಷ್ಟೂ ಬಾಡಿ ಫಿಟ್ ಇದ್ದರೂ ಉತ್ತಮ.
- ಬಾಡಿಕಾನ್ ಸಿಂಗಲ್ ಶೋಲ್ಡರ್ ಔಟ್ಫಿಟ್ಸ್ ಟ್ರೆಂಡಿಯಾಗಿವೆ.
- ಸಮ್ಮರ್ನಲ್ಲಿ ಚಾಲ್ತಿಯಲ್ಲಿರುವ ಕಲರ್ಸ್ ಹಾಗೂ ಡಿಸೈನ್ಸ್ ಚೂಸ್ ಮಾಡಿ.
- ತೀರಾ ಪ್ಲಂಪಿಯಾಗಿರುವವರಿಗೆ ಇವು ಸೂಕ್ತವಲ್ಲ!
- ಸಿಂಗಲ್ ಶೋಲ್ಡರ್ ಧರಿಸಿದಾಗ ಕಂಫರ್ಟಬಲ್ ಆಗದಿದ್ದಲ್ಲಿ ಕೂದಲನ್ನು ಒಂದು ಸೈಡ್ ಬಿಡಬಹುದು. ಕವರ್ ಆಗುತ್ತದೆ.