Summer Fashion 2026: ಸಮ್ಮರ್ ವೆಡ್ಡಿಂಗ್ ಫ್ಯಾಷನ್ಗೆ ಕಾಲಿಟ್ಟ ಸ್ಟ್ರಾಪ್ ಕುರ್ತಾ-ಧೋತಿ
Summer Wedding Fashion: ಬೇಸಿಗೆಯ ಸೆಕೆಗೆ ಹೊಂದುವಂತಹ ಸ್ಟ್ರಾಪ್ ವಿನ್ಯಾಸದ ಕುರ್ತಾ –ಧೋತಿ ಡಿಸೈನರ್ವೇರ್ಸ್ ಇದೀಗ ಈ ಸೀಸನ್ನ ವೆಡ್ಡಿಂಗ್ ಫ್ಯಾಷನ್ಗೆ ಲಗ್ಗೆ ಇಟ್ಟಿವೆ. ಈ ಔಟ್ಫಿಟ್ ವಿಶೇಷತೆಯೇನು? ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಅಂಕಿತಾ ಶರ್ಮಾ, ನಟಿ -
ವೆಡ್ಡಿಂಗ್ ಫ್ಯಾಷನ್ಗೆ ಸ್ಟ್ರಾಪ್ ಕುರ್ತಾ-ಧೋತಿ ಡಿಸೈನರ್ವೇರ್ಸ್ ಎಂಟ್ರಿ ನೀಡಿವೆ.
ಈ ಬೇಸಿಗೆಯ ಸೆಕೆಗೆ ಹೊಂದುವಂತಹ ಸ್ಟ್ರಾಪ್ ವಿನ್ಯಾಸದ ಕುರ್ತಾ –ಧೋತಿ ಫ್ಯಾಷನ್ ಹೊಸ ರೂಪದಲ್ಲಿ ವೆಡ್ಡಿಂಗ್ ಫ್ಯಾಷನ್ಗೆ ಲಗ್ಗೆ ಇಟ್ಟಿದ್ದು, ಎದ್ದು ಕಾಣುವಂತಹ ಕಲರ್ಗಳಲ್ಲಿ ಹಾಗೂ ಗ್ರ್ಯಾಂಡ್ ಡಿಸೈನ್ನಲ್ಲಿ ಕಾಣಿಸಿಕೊಂಡಿವೆ.
ಸ್ಟ್ರಾಪ್ ಕುರ್ತಾ –ಧೋತಿಯಲ್ಲಿ ಅಂಕಿತಾ ಶರ್ಮಾ
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಅಂಕಿತಾ ಶರ್ಮಾ ಧರಿಸಿದ್ಧ ವೈಬ್ರೆಂಟ್ ಹಸಿರು ವರ್ಣದ ಗ್ರ್ಯಾಂಡ್ ಲುಕ್ ಹೊಂದಿದ್ದ ಸ್ಟ್ರಾಪ್ ಹೊಂದಿದ ಕುರ್ತಾ ಹಾಗೂ ಧೋತಿ ಫ್ಯಾಷನ್ ಹುಡುಗಿಯರನ್ನು ಸೆಳೆದಿದೆ. ಅಲ್ಲದೇ, ಈ ಫ್ಯಾಷನ್ ಟ್ರೆಂಡಿಯಾಗಲು ಕಾರಣವಾಗಿದೆ.
ಸ್ಟ್ರಾಪ್ ಕುರ್ತಾ-ಧೋತಿ ಡಿಸೈನರ್ವೇರ್ಸ್
ಅಂದಹಾಗೆ, ಇತರೇ ಸೀಸನ್ನಲ್ಲಿ ತೀರಾ ಕಾಮನ್ ಆಗಿದ್ದ, ಈ ಕುರ್ತಾ –ಧೋತಿ ಡಿಸೈನರ್ವೇರ್ಸ್ ಈ ಸೀಸನ್ಗೆ ಹೊಂದುವಂತೆ ಕೊಂಚ ರೂಪ ಬದಲಿಸಿ ಬಂದಿವೆ. ಈ ವೆಡ್ಡಿಂಗ್ ಗ್ರ್ಯಾಂಡ್ ಡಿಸೈನರ್ವೇರ್ ಕೆಟಗರಿಯಲ್ಲಿ, ಸ್ಲೀವ್ ಬದಲು ಸ್ಟ್ರಾಪ್ ಡಿಸೈನ್ನಲ್ಲಿ ಕಾಣಿಸಿಕೊಂಡಿವೆ. ಸೆಕೆಯನ್ನು ತಡೆಯುವಂತಹ ಈ ಡಿಸೈನ್ಗಳು ಸದ್ಯ ಜೆನ್ ಜಿ ಹುಡುಗಿಯರಿಗೆ ಪ್ರಿಯವಾಗಿವೆ ಎನ್ನುತ್ತಾರೆ ಡಿಸೈನರ್ಸ್.
ಗ್ರ್ಯಾಂಡ್ ಲುಕ್ ನೀಡುವ ಸ್ಟ್ರಾಪ್ ಕುರ್ತಾ-ಧೋತಿ ಸ್ಟೈಲಿಂಗ್ ಹೇಗೆ?
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸ ಆಯ್ಕೆ ಮಾಡಿ.
- ಸ್ಟ್ರಾಪ್ ಕುರ್ತಾಗಳು ದೇಹದ ಮೇಲ್ಭಾಗವನ್ನು ಎಕ್ಸ್ಪೋಸ್ ಮಾಡುತ್ತವೆ ಎಂಬುದು ಗಮನದಲ್ಲಿರಲಿ.
- ದುಪಟ್ಟಾಗಳನ್ನು ಬಳಸಿದಲ್ಲಿ ಅಗತ್ಯವಿದ್ದಾಗ ಹೊದ್ದುಕೊಳ್ಳಬಹುದು.
- ಆದಷ್ಟೂ ಸ್ಟ್ರಾಪ್ ಡಿಸೈನ್ ನಿಮಗೆ ಫಿಟ್ ಆಗಿ ಹೊಂದುಕೊಳ್ಳುವಂತಿರಲಿ.
- ಟ್ರೆಂಡಿಯಾಗಿರುವ ಕಲರ್ಸ್, ವಿನ್ಯಾಸವನ್ನು ಆಯ್ಕೆ ಮಾಡಿ.
- ಇಂಡೋ-ವೆಸ್ಟರ್ನ್ ಲುಕ್ ನೀಡುತ್ತದೆ.