ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's Player of the Month award: ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಮಂಧಾನ ನಾಮ ನಿರ್ದೇಶನ

ನೊಮನ್ ಲಾಹೋರ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಒಳಗೊಂಡಂತೆ ಸರಣಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಮೂರನೇ 10 ವಿಕೆಟ್ ಗಳಿಕೆಯಾಗಿದೆ.

ಐಸಿಸಿ ತಿಂಗಳ ಆಟಗಾರ ಪಟ್ಟಿಯಲ್ಲಿ ಭಾರತೀಯರಿಲ್ಲ

ಐಸಿಸಿ ತಿಂಗಳ ಆಟಗಾರ್ತಿ: ಮಂಧಾನ ನಾಮ ನಿರ್ದೇಶನ -

Abhilash BC
Abhilash BC Nov 6, 2025 11:00 PM

ದುಬೈ: ಐಸಿಸಿಯ ಅಕ್ಟೋಬರ್ ತಿಂಗಳ ಆಟಗಾರ್ತಿ ಪ್ರಶಸ್ತಿಗೆ(Women's Player of the Month award) ಟೀಮ್‌ ಇಂಡಿಯಾದ ಸ್ಮೃತಿ ಮಂಧಾನ(Smriti Mandhana), ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್‌(Laura Wolvaardt) ಮತ್ತು ಆಸ್ಟ್ರೇಲಿಯಾದ ಬ್ಯಾಟರ್ ಆಶ್ಲೇ ಗಾರ್ಡನರ್‌ ನಾಮನಿರ್ದೇಶನಗೊಂಡಿದ್ದಾರೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಈ ಮೂವರು ಆಟಗಾರ್ತಿಯರು ತಮ್ಮ ತಂಡದ ಪರ ಕೆಲವು ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದ್ದರು.

ಮಂಧಾನ ಆಸ್ಟ್ರೇಲಿಯಾ ಎದುರು 80 ರನ್, ಇಂಗ್ಲೆಂಡ್ ವಿರುದ್ಧ 88 ರನ್ ಗಳಿಸಿದ್ದರು. ಲಾರಾ ವೋಲ್ವಾರ್ಟ್‌ ಸೆಮಿ ಫೈನಲ್‌ ಮತ್ತು ಫೈನಲ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ಫೈನಲ್‌ ಪಂದ್ಯದ ಪ್ರದರ್ಶನ ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಕಾರಣ ಫೈನಲ್‌ ನಡೆದದ್ದು ನವೆಂಬರ್‌ ತಿಂಗಳಿನಲ್ಲಿ.

ಪುರುಷರ ವಿಭಾಗದಲ್ಲಿ ಯಾವದೇ ಭಾರತೀಯ ಆಟಗಾರ ನಾಮನಿರ್ದೇಶನಗೊಳ್ಳಲಿಲ್ಲ. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಸೆನುರನ್ ಮುತ್ತುಸಾಮಿ, ಪಾಕಿಸ್ತಾನದ ಸ್ಪಿನ್ನರ್ ನೋಮನ್ ಅಲಿ ಮತ್ತು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ನಾಮನಿರ್ದೇಶನಗೊಂಡರು.

ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುತ್ತುಸಾಮಿ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಲಾಹೋರ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 174 ರನ್‌ಗೆ 11 ವಿಕೆಟ್‌ ಉರುಳಿಸಿದ್ದರು. ಎರಡನೇ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 89 ರನ್ ಗಳಿಸಿ ತಮ್ಮ ತಂಡವು ನಿರ್ಣಾಯಕ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸಲು ಸಹಾಯ ಮಾಡಿದರು.

ಇದನ್ನೂ ಓದಿ IND vs SA: ಭಾರತ ಟೆಸ್ಟ್‌ ತಂಡದಿಂದ ಔಟ್‌! ಮೊಹಮ್ಮದ್‌ ಶಮಿ ವೃತ್ತಿ ಜೀವನ ಅಂತ್ಯ?

ನೊಮನ್ ಲಾಹೋರ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಒಳಗೊಂಡಂತೆ ಸರಣಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಮೂರನೇ 10 ವಿಕೆಟ್ ಗಳಿಕೆಯಾಗಿದೆ.



ರಶೀದ್ ಖಾನ್ ಅಕ್ಟೋಬರ್ ತಿಂಗಳಲ್ಲಿ ಐದು ಟಿ20ಐಗಳಲ್ಲಿ ಒಂಬತ್ತು ಮತ್ತು ಬಾಂಗ್ಲಾದೇಶ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಒಳಗೊಂಡಂತೆ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ 5/17 ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅಲ್ಲದೆ ಬಾಂಗ್ಲಾದೇಶವನ್ನು ಅಫ್ಘಾನಿಸ್ತಾನ ವೈಟ್‌ವಾಶ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.