Yoga Fashion 2026: ಸೀಸನ್ನಲ್ಲಿ ಟ್ರೆಂಡಿಯಾದ ಯೋಗ ಕೋ-ಆರ್ಡ್ ಸೆಟ್ಗಳಿವು
Yoga Co-Ord Sets: ಪ್ರಿಂಟೆಡ್, ಮಾನೋಕ್ರೋಮ್ ಸೇರಿದಂತೆ ನಾನಾ ಬಗೆಯ ಯೋಗ ಕೋ -ಆರ್ಡ್ ಸೆಟ್ಗಳು ಈ ಸೀಸನ್ನಲ್ಲಿ ನಯಾ ರೂಪದಲ್ಲಿ ಆಗಮಿಸಿವೆ. ಯಾವ್ಯಾವ ಬಗೆಯವು ಬೇಡಿಕೆ ಸೃಷ್ಟಿಸಿಕೊಂಡಿವೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಕೃಪೆ: ಪಿಕ್ಸೆಲ್ -
ವೈವಿಧ್ಯಮಯ ಯೋಗ ಕೋ- ಆರ್ಡ್ ಸೆಟ್ಗಳು ಇದೀಗ ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ. ಅದರಲ್ಲೂ ವೆಸ್ಟರ್ನ್ ಶೈಲಿಯ ಈ ಕೋ -ಆರ್ಡ್ ಸೆಟ್ಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ.
ಟ್ರೆಂಡ್ನಲ್ಲಿರುವ ಯೋಗ ಕೋ- ಆರ್ಡ್ ಸೆಟ್ಸ್
ಪ್ರಿಂಟೆಡ್, ಮಾನೋಕ್ರೋಮ್, ಸಾಲಿಡ್ ಕಲರ್ಸ್, ಸಾದಾ, ಗ್ರಾಫಿಕ್ ಪ್ರಿಂಟ್ಸ್, ಬ್ರಶ್ ಸ್ಟ್ರೋಕ್ಸ್, ಜೆಮೆಟ್ರಿಕಲ್ ಪ್ರಿಂಟ್ಸ್ ನವು ಇದೀಗ ಕೋ- ಆರ್ಡ್ ಸೆಟ್ ಔಟ್ಫಿಟ್ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ.
ದುಬಾರಿಯಾಗಿರುವ ಯೋಗ ಕೋ - ಆರ್ಡ್ ಸೆಟ್ಸ್
ಆಯಾ ಬ್ರಾಂಡ್ನ ಡಿಸೈನ್ ಹಾಗೂ ಫ್ಯಾಬ್ರಿಕ್ಗೆ ತಕ್ಕಂತೆ ಇವುಗಳ ಬೆಲೆ ನಿಗಧಿಯಾಗಿರುತ್ತವೆ. ಹಾಗೆಂದು ಇವೇನು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿಲ್ಲ. ಬದಲಿಗೆ ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಮಾರಾಟಗಾರರಾದ ಜಯಂತ್.
ಕೋ ಆರ್ಡ್ ಸೆಟ್ಸ್ ನಲ್ಲಿ ಜೆನ್ ಜಿ ಯೋಗ
ಜೆನ್ ಜಿ ಯುವತಿಯರು ಹಾಗೂ ಕಾಲೇಜು ಹುಡುಗಿಯರು ಮತ್ತು ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಸೇರಿದಂತೆ ಹೈ ಫ್ಯಾಷನ್ ಟಚ್ ಬಯಸುವವರು ಹೆಚ್ಚಾಗಿ ವೆಸ್ಟರ್ನ್ ಲುಕ್ ನೀಡುವ ಕೋ -ಆರ್ಡ್ ಸೆಟ್ಗಳನ್ನೇ ಖರೀದಿಸುತ್ತಿರುವುದು ಹೆಚ್ಚಾಗಿದೆ.
ವೆಸ್ಟರ್ನ್ ಲುಕ್ ನೀಡುವ ಯೋಗ ಕೋ ಆರ್ಡ್ ಸೆಟ್ಸ್
ಅವುಗಳಲ್ಲಿ, ಕ್ರಿಸ್ ಕ್ರಾಸ್ ಕ್ರಾಪ್ ಫಿಟ್ಟಿಂಗ್ ಟಾಪ್, ಬ್ರಿಥೆಬಲ್ ಪ್ಯಾಂಟ್ನಂತವು ಹೆಚ್ಚು ಮಾರಾಟವಾಗುತ್ತಿವೆ. ಸಾಲಿಡ್ ಕಲರ್ನವು ಪ್ರಿಂಟೆಡ್ಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.
ಯೋಗ ಕೋ- ಆರ್ಡ್ ಸೆಟ್ ಪ್ರಿಯರಿಗೆ ಟಿಪ್ಸ್
- ಬ್ರ್ಯಾಂಡೆಡ್ ಕೋ- ಆರ್ಡ್ ಸೆಟ್ಸ್ ಆಯ್ಕೆ ಮಾಡಿ. ಇವು ನಿಮಗೆ ಕಂಫರ್ಟಬಲ್ ಫೀಲ್ ನೀಡುತ್ತವೆ.
- ಫ್ಯಾಬ್ರಿಕ್ನ ಗುಣಮಟ್ಟಕ್ಕೆ ಆದ್ಯತೆ ನೀಡಿ.
- ಆದಷ್ಟೂ ಕೊಂಚ ಲೂಸಾಗಿರುವ ಕೋ -ಆರ್ಡ್ ಸೆಟ್ ಆಯ್ಕೆ ಮಾಡಿ. ಇಲ್ಲವಾದಲ್ಲಿ ಧರಿಸಿದಾಗ ಉಸಿರುಗಟ್ಟಬಹುದು.
- ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಇವುಗಳನ್ನು ಧರಿಸಿ.