ತಮಿಳುನಾಡಿನಲ್ಲಿ ಮತ್ತೆ ಎನ್‌ಡಿಎ ಪ್ರಚಾರಕರಾಗಿ ಅಣ್ಣಾಮಲೈ ಆಯ್ಕೆ
ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ ಎಂಬ ವದಂತಿಯನ್ನು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ನಿರಾಕರಿಸಿದ್ದು, ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಲ್ಲಿ ಮತ್ತೆ ಎನ್‌ಡಿಎ ಪ್ರಚಾರಕರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಈ ಚುನಾವಣೆಯಲ್ಲಿ, ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ನನ್ನ ಪಾತ್ರವಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ) -
ಚೆನ್ನೈ: ತಮಿಳುನಾಡಿನಲ್ಲಿ (tamilnadu) ಮತ್ತೆ ಎನ್‌ಡಿಎ (NDA) ಪ್ರಚಾರಕರಾಗಿ ತಮಿಳುನಾಡು ಬಿಜೆಪಿಯ (BJP) ಮಾಜಿ ಅಧ್ಯಕ್ಷ (Tamil Nadu BJP Former president) ಕೆ. ಅಣ್ಣಾಮಲೈ (K. Annamalai) ಅವರನ್ನು ಆಯ್ಕೆ ಮಾಡಲಾಗಿದೆ. ಚೆನ್ನೈನಲ್ಲಿ (Chennai) ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ (PM Narendra Modi) ಸಭೆಯ ಬಳಿಕ ರಾಜ್ಯದ ಚುನಾವಣಾ ರಂಗದಲ್ಲಿ ಅಣ್ಣಾಮಲೈ ಪಾತ್ರದ ಕುರಿತು ಘೋಷಣೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಾವು ಎನ್‌ಡಿಎ ಪರ ಸಕ್ರಿಯ ಪ್ರಚಾರಕ್ಕೆ ಮರಳುವುದಾಗಿ ಘೋಷಿಸಿದರು. ಅಲ್ಲದೇ ಪಕ್ಷದಿಂದ ತಮಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದರು.
ಈ ಬಾರಿ ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಚುನಾವಣೆಯಲ್ಲಿ ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ನನ್ನ ಪಾತ್ರವಾಗಿದೆ. ರಾಜ್ಯಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕಾರ್ಯವನ್ನು ಪಕ್ಷವು ನನಗೆ ವಹಿಸಿದೆ ಎಂದು ತಿಳಿಸಿದರು.
ʼʼಇದು ಟ್ರೈಲರ್ ಮಾತ್ರʼʼ; ಪಂಜಾಬ್ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ವಿಡಿಯೊ ಮೂಲಕ ಸಂಸದ ರಾಘವ್ ಚಡ್ಡಾ ತಿರುಗೇಟು
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಇದ್ದುದರಿಂದ ಹಲವು ಊಹಾಪೋಹಗಳು ಹುಟ್ಟಿಕೊಂಡಿತ್ತು. ಪಕ್ಷದಿಂದ ಅವರನ್ನು ಹೊರಗಿಡಲಾಗಿದ್ದು, ಇದರಿಂದ ಅವರು ಹಿಂದೆ ಸರಿಯುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಈಗ ಮರಳಿ ಅವರು ಪಕ್ಷದ ಪ್ರಚಾರಕರಾಗಿ ಆಯ್ಕೆಯಾಗಿರುವುದು ಎಲ್ಲ ವದಂತಿಗಳಿಗೆ ತೆರೆ ಎಳೆದಂತಾಗಿದೆ.
2020ರಲ್ಲಿ ರಾಜಕೀಯ ಪ್ರವೇಶಿಸಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸೇರಿದ ಬಳಿಕ 2021ರಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಯಿತು. ಅತ್ಯಲ್ಪಾವಧಿಯಲ್ಲಿ ಅವರು ರಾಜ್ಯದ ಬಿಜೆಪಿ ಘಟಕಕ್ಕೆ ಶಕ್ತಿಯನ್ನು ತುಂಬಿದರು. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಕೆಲವು ರಾಜಕೀಯ ಘಟನೆಗಳಿಂದ ಅಣ್ಣಾಮಲೈ ಬಗ್ಗೆ ಬಿಜೆಪಿ ನಾಯಕತ್ವವು ನಿರಾಶೆಗೊಂಡಿದೆ ಎನ್ನಲಾಗಿತ್ತು. ಆದರೆ ಇದೀಗ 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತ್ತೆ ಅಣ್ಣಾಮಲೈ ಅವರನ್ನು ಪಕ್ಷ ಪ್ರಚಾರಕರನ್ನಾಗಿ ನೇಮಕ ಮಾಡಲಾಗಿದೆ.
ಕೈಯಲ್ಲಿ 40 ರೂ., ಬ್ಯಾಂಕಿನಲ್ಲಿ 44 ರೂ; ಕೇರಳದ ಅತ್ಯಂತ ಬಡ ಚುನಾವಣಾ ಅಭ್ಯರ್ಥಿ ಕುರಿತು ನಿಮಗೆ ಗೊತ್ತಾ?
ಚುನಾವಣೆಗೂ ಮುಂಚಿತವಾಗಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೂ ಮೊದಲು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕೆಲವು ಷರತ್ತು ಹಾಕಿದ್ದು, ಇದರಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅಣ್ಣಾಮಲೈ ಅವರನ್ನು ಪಕ್ಷ ಪ್ರಚಾರಕರನ್ನಾಗಿ ಮಾಡಿರುವುದು ಇದರ ಭಾಗ ಎಂದು ಪರಿಗಣಿಸಲಾಗುತ್ತಿದೆ.