ಭಾರತ ಪಾಕಿಸ್ತಾನವಾಗದಿರಲು ಹಿಂದೂಗಳು 4 ಮಕ್ಕಳನ್ನು ಹೊಂದಬೇಕು; ಕರೆ ಕೊಟ್ಟ ಬಿಜೆಪಿ ನಾಯಕಿ
ಭಾರತ ಪಾಕಿಸ್ತಾನವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಹಿಂದೂಗಳು ನಾಲ್ಕು ಮಕ್ಕಳನ್ನು ಹೊಂದಬೇಕು. ಮೌಲಾನಾಗಳಿಗೆ 4 ಹೆಂಡತಿಯರು, 19 ಮಕ್ಕಳು ಇರುವಾಗ ಹಿಂದೂಸ್ತಾನ್ ಅನ್ನು ರಕ್ಷಿಸಲು ಎಲ್ಲಾ ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕು ಎಂದು ಬಿಜೆಪಿ ನಾಯಕಿ ನವನೀತ್ ರಾಣಾ ಮನವಿ ಮಾಡಿದ್ದಾರೆ.
ನವನೀತ್ ರಾಣಾ (ಸಂಗ್ರಹ ಚಿತ್ರ) -
ನವದೆಹಲಿ: ದೇಶವು ಜನಸಂಖ್ಯೆಯಲ್ಲಿ ಪಾಕಿಸ್ತಾನವಾಗಿ (pakistan) ಬದಲಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಹಿಂದೂಗಳು (hindu) ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕು. ಮೌಲಾನಾಗಳಿಗೆ 4 ಹೆಂಡತಿಯರು, 19 ಮಕ್ಕಳು ಇರುವಾಗ ಹಿಂದೂಸ್ತಾನವನ್ನು (hindustan) ರಕ್ಷಿಸಲು ಎಲ್ಲಾ ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕು ಎಂದು ಬಿಜೆಪಿ ನಾಯಕಿ (BJP leader) ನವನೀತ್ ರಾಣಾ (Navneet Rana) ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂಲಕ ನಾನು ಎಲ್ಲ ಹಿಂದೂಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಅನ್ಯ ಧರ್ಮದ ಕೆಲವರು ಜನರು ಬಹಿರಂಗವಾಗಿ ತಮಗೆ ನಾಲ್ಕು ಹೆಂಡತಿಯರು, 19 ಮಕ್ಕಳಿದ್ದಾರೆ ಎಂದು ಹೇಳುತ್ತಾರೆ. ನಾವು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಿಂದೂಸ್ತಾನವನ್ನು ಪಾಕಿಸ್ತಾನವನ್ನಾಗಿ ಮಾಡಲು ಯೋಜಿಸುತ್ತಿದ್ದಾರೆ, ಹಾಗಾದರೆ ನಾವು ಕೇವಲ ಒಂದು ಮಗುವಿನಿಂದ ಏಕೆ ತೃಪ್ತರಾಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
#WATCH | Amravati, Maharashtra: BJP leader Navneet Rana says, "... I appeal to all the Hindus that if they (Muslims) are giving birth to 19 children, then we should give birth to 3 to 4 children in India. They are on the path to turn India into Pakistan..." (23.12) pic.twitter.com/ur3QHeJZyG
— ANI (@ANI) December 24, 2025
ಬಿಜೆಪಿ ನಾಯಕಿಯ ಈ ಹೇಳಿಕೆ ಇದೀಗ ವಿವಾದವನ್ನು ಉಂಟು ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಇಂತಹ ಹುಚ್ಚು ಚಿಂತನೆ ಕೊನೆಯಾಗಬೇಕು ಎಂದು ತಿಳಿಸಿದ್ದಾರೆ.
#WATCH | Madurai, Tamil Nadu | On BJP leader Navneet Rana's statement, Congress MP Manickam Tagore says, "... We should be scientific in numbers, not have such a superstitious or unscientific manner. India's population growth is an alarming story... Those states which are unable… https://t.co/fqiXAHA0oz pic.twitter.com/6ywV57GxMs
— ANI (@ANI) December 24, 2025
ವಿವಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಪ್ರಶ್ನೆ; ಪ್ರೊಫೆಸರ್ ಸಸ್ಪೆಂಡ್
ಭಾರತದ ಜನಸಂಖ್ಯಾ ಬೆಳವಣಿಗೆಯು ಆತಂಕಕಾರಿಯಾಗಿದೆ. ಜನಸಂಖ್ಯೆಯನ್ನು ಸ್ಥಿರಗೊಳಿಸಲು ಸಾಧ್ಯವಾಗದೆ ರಾಜ್ಯಗಳು ಬಳಲುತ್ತಿವೆ. ಭಾರತದ ಜನಸಂಖ್ಯೆ ಸ್ಥಿರವಾಗಿರಲು ಮತ್ತು ಜನನ ಪ್ರಮಾಣದಲ್ಲಿನ ಕುಸಿತವನ್ನು ತಡೆಯಲು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಲವಾರು ಸಂದರ್ಭಗಳಲ್ಲಿ ಭಾರತೀಯರನ್ನು ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದರು.
ಶಾಸಕ ರವಿ ರಾಣಾ ಅವರನ್ನು 2011 ವಿವಾಹವಾಗಿರುವ ನವನೀತ್ ರಾಣಾ ಅವರಿಗೆ ರನ್ವೀರ್ ರಾಣಾ ಮತ್ತು ಆರೋಹಿ ರಾಣಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕನ್ನಡ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ನವನೀತ್ ರಾಣಾ ಅವರು 2014ರಲ್ಲಿ ರಾಜಕೀಯ ಪ್ರವೇಶ ಪಡೆದರು. ಆರಂಭದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಇವರು 2019 ರಿಂದ 2024ರವರೆಗೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದಲ್ಲಿದ್ದು, 2024ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2024 ರ ಚುನಾವಣೆಯಲ್ಲಿ ಅಮರಾವತಿಯಿಂದ ಬಿಜೆಪಿ ಟಿಕೆಟ್ ಪಡೆದು ಕಣಕ್ಕೆ ಇಳಿದು ಕಾಂಗ್ರೆಸ್ ಅಭ್ಯರ್ಥಿ ಬಲ್ವಂತ್ ವಾಂಖೆಡೆ ವಿರುದ್ಧ 19,731 ಮತಗಳ ಅಂತರದಿಂದ ಸೋತರು.