ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಠೇವಣಿ ಕಳೆದುಕೊಳ್ಳುವ ಭೀತಿಯಿಂದ ಬಿಹಾರ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್‌: ಬಿಜೆಪಿ ಟೀಕೆ

Bihar Assembly Elections 2025: ಬಿಹಾರ ವಿಧಾನಸಭಾ ಚುನಾವಣೆಯ ಕಣದಿಂದ ಪ್ರಶಾಂತ್ ಕಿಶೋರ್ ಹಿಂದೆ ಸರಿದಿದ್ದಾರೆ. ಈ ಮೊದಲು ಅವರು ತಮ್ಮ ಜನ್ಮಸ್ಥಳ ಕಾರ್ಗಹರ್ ಅಥವಾ ರಾಘೋಪುರದಿಂದ ಕಣಕ್ಕೆ ಇಳಿಯುವುದಾಗಿ ಸುಳಿವು ನೀಡಿದ್ದರು. ಆದರೆ ಇದೀಗ ಅವರು ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ ಎಂಬುದು ಅವರಿಗೆ ಗೊತ್ತಿದೆ ಎಂದು ಬಿಜೆಪಿ ಹೇಳಿದೆ.

ಚುನಾವಣಾ ಕಣದಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್

-

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Assembly Elections) ಕಣದಿಂದ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Jan Suraaj Party founder Prashant Kishor) ಹಿಂದೆ ಸರಿದಿದ್ದಾರೆ. ತಾವು ಮುಂಬರುವ ಬಿಹಾರ (Bihar Election) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಮ್ಮ ಪಕ್ಷವು ಸಾಂಸ್ಥಿಕ ಕೆಲಸದತ್ತ ಗಮನಹರಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಕಿಶೋರ್ ಈ ಮೊದಲು ತಮ್ಮ ಜನ್ಮಸ್ಥಳವಾದ ಕಾರ್ಗಹರ್ ಅಥವಾ ರಾಘೋಪುರದಿಂದ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದರು. ಆದರೆ ಮಂಗಳವಾರ ಪಕ್ಷವು ಚಂಚಲ್ ಸಿಂಗ್ ಅವರನ್ನು ರಾಘೋಪುರ ವಿಧಾನಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ ಅನಂತರ ಕಿಶೋರ್ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ʼʼನಾನು ಸ್ಪರ್ಧಿಸುವುದಿಲ್ಲ. ಪಕ್ಷದ ಹಿತಾಸಕ್ತಿಗಾಗಿ ಮಾಡುತ್ತಿರುವ ಕೆಲಸವನ್ನು ಮುಂದುವರಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

ಪ್ರದೀಪ್ ಭಂಡಾರಿ ಅವರ ಎಕ್ಸ್‌ ಪೋಸ್ಟ್‌:



ಕಿಶೋರ್ ತಮ್ಮ ಜನ್ಮಸ್ಥಳ ಕಾರ್ಗಹರ್ ಅಥವಾ ರಾಘೋಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಸುಳಿವು ನೀಡಿದ್ದರು. ಆದರೆ ಜನ್ ಸುರಾಜ್ ತನ್ನ ಮೊದಲ ಪಟ್ಟಿಯಲ್ಲಿ ಕಾರ್ಗಹರ್‌ನಿಂದ ಭೋಜ್‌ಪುರಿ ಗಾಯಕ ರಿತೇಶ್ ಪಾಂಡೆ ಹಾಗೂ ರಾಘೋಪುರ ವಿಧಾನಸಭಾ ಸ್ಥಾನಕ್ಕೆ ಚಂಚಲ್ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಇದಾದ ಬಳಿಕ ಕಿಶೋರ್ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾದವ್ ಕುಟುಂಬದ ಭದ್ರಕೋಟೆ ರಾಘೋಪುರವನ್ನು ಆರ್‌ಜೆಡಿಯ ತೇಜಸ್ವಿ ಯಾದವ್ ಪ್ರತಿನಿಧಿಸುತ್ತಿದ್ದಾರೆ. 243 ಸದಸ್ಯರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ಇಲ್ಲಿಯವರೆಗೆ 116 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಎಲ್ಲ 243 ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ.

ಕಣಕ್ಕೆ ಇಳಿದವರ ಪೈಕಿ ಕುಮ್ರಾರ್‌ನ ಗಣಿತಜ್ಞ ಕೆ.ಸಿ. ಸಿನ್ಹಾ, ಕಾರ್ಗಹರ್‌ನ ಭೋಜ್‌ಪುರಿ ಗಾಯಕ ರಿತೇಶ್ ರಂಜನ್ ಪಾಂಡೆ, ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿಯ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು, ಮೊರ್ವಾದ ಡಾ. ಜಾಗೃತಿ ಠಾಕೂರ್ ಪ್ರಮುಖರು.

ಬಿಜೆಪಿ ಟೀಕೆ

ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿರುವ ಕಿಶೋರ್ ಅವರ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ, ಒಂದು ವೇಳೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ.

ಇದನ್ನೂ ಓದಿ: Supreme Court: ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅಸ್ತು; ಷರತ್ತು ಅನ್ವಯ

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ʼʼಬಿಹಾರದಲ್ಲಿ ತಮ್ಮ ಪಕ್ಷವು ಪ್ರಭಾವ ಬೀರುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಅವರಿಗೆ ತಿಳಿದಿದೆ. ಹೀಗಾಗಿ ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಒಂದು ವೇಳೆ ಅವರು ಹಾಗೆ ಮಾಡದೆ ಇದ್ದರೆ ಅವರು ಠೇವಣಿ ಕಳೆದುಕೊಳ್ಳುತ್ತಾರೆ. ಜನ್ ಸುರಾಜ್, ಆರ್‌ಜೆಡಿ, ಕಾಂಗ್ರೆಸ್ ಎಲ್ಲರಿಗೂ ಬಿಹಾರದ ನೆಲದ ಬಗ್ಗೆ ಗೊತ್ತಿದೆ. ಬಿಹಾರದ ಜನರು ಎನ್‌ಡಿಎ ಜತೆಗಿದ್ದಾರೆʼʼ ಎಂದು ತಿಳಿಸಿದ್ದಾರೆ.