ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ; ನೋಂದಾಯಿತ ಕಾರ್ಮಿಕರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತೆ?

KBOCWWB: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರ ಸಬಲೀಕರಣಕ್ಕಾಗಿ ಹಲವು ಪ್ರಮುಖ ಸುಧಾರಣೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಾರ್ಮಿಕರಿಗಾಗಿ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಮಾಹಿತಿ ಇಲ್ಲಿದೆ.

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ; ಏನೇನು ಸೌಲಭ್ಯಗಳಿವೆ?

-

Prabhakara R
Prabhakara R Nov 12, 2026 5:10 PM

ಬೆಂಗಳೂರು: ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Santosh Lad) ಅವರ ನೇತೃತ್ವದಲ್ಲಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ಹಾಗೂ ಕಾರ್ಮಿಕ ಇಲಾಖೆಯು (Labour Department) ನೋಂದಾಯಿತ ಕಾರ್ಮಿಕರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮ, ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಾರ್ಮಿಕರಿಗೆ ಮಂಡಳಿಯಿಂದ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಸೌಲಭ್ಯಗಳು

  • ವಿವಿಧ ಪಿಂಚಣಿ ಸೌಲಭ್ಯಗಳು
  • ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ
  • ಹೆರಿಗೆ ಸಹಾಯಧನ ಮತ್ತು ತಾಯಿ ಮಗು ಸಹಾಯಹಸ್ತ
  • ಮದುವೆಗೆ ಸಹಾಯಧನ
  • ಹಲವು ಕಾಯಿಲೆಗಳ ಚಿಕಿತ್ಸೆಗೆ ನೆರವು.
  • ಸಂಚಾರಿ ಆರೋಗ್ಯ ಘಟಕಗಳ ನೆರವು
  • ಉಚಿತ ತರಬೇತಿ ಜೊತೆಗೆ ಟೂಲ್-ಕಿಟ್'
  • ಅಪಘಾತ ಸಂಬಂಧಿತ ಸೌಲಭ್ಯಗಳು.
  • ಅಂತ್ಯಕ್ರಿಯೆ ವೆಚ್ಚ ಮತ್ತು ಕುಟುಂಬಕ್ಕೆ ಆರ್ಥಿಕ ನೆರವು



ಕಾರ್ಮಿಕರಿಗೆ ಪೆನ್ಶನ್‌ ಕೂಡ ಇದೆ!

ನೋಂದಾಯಿತ ಕಾರ್ಮಿಕರಿಗೆ 60 ವರ್ಷ ತುಂಬಿದ ನಂತರ ಅವರಿಗೆ ತಿಂಗಳು ತಿಂಗಳು ಪಿಂಚಣಿ ಸಿಗುತ್ತದೆ. ಕಾರ್ಮಿಕರು ಒಂದು ವೇಳೆ ನಿಧನರಾದರೆ ಅವರ ಕುಟುಂಬಕ್ಕೆ 'ಕುಟುಂಬ ಪಿಂಚಣಿ, ಹಾಗೂ ಕೆಲಸದ ವೇಳೆ ಅಂಗವೈಕಲ್ಯಕ್ಕೆ ತುತ್ತಾದರೆ 'ದುರ್ಬಲತೆ ಪೆನ್ಷನ್' ಸಹ ನೀಡಲಾಗುತ್ತದೆ. 'ಕಲಿಕೆ ಭಾಗ್ಯ' ಸೌಲಭ್ಯ ಸಹ ಇದೆ. ಹೌದು, ಒಂದನೇ ಕ್ಲಾಸ್ ಓದುವವರಿಂದ ಹಿಡಿದು ಮೆಡಿಕಲ್, ಪಿಎಚ್ಡಿ, ಹಾಗೂ ಐಐಟಿವರೆಗೆ ಉನ್ನತ ವ್ಯಾಸಂಗ ಮಾಡುವವರೂ ಮಂಡಳಿಯಿಂದ ಸ್ಕಾಲರ್‌ ಶಿಪ್‌ ಪಡೆಯಬಹುದು.

ಇನ್ನು ಮಹಿಳಾ ಕಾರ್ಮಿಕರಾಗಿದ್ದಲ್ಲಿ ಅವರ ಮೊದಲ ಎರಡು ಹೆರಿಗೆಗೆ ಸಹಾಯಧನ ನೀಡಲಾಗುತ್ತದೆ. ಜತೆಗೆ, 'ತಾಯಿ-ಮಗು ಸಹಾಯಹಸ್ತ' ಯೋಜನೆಯಡಿ ವಿಶೇಷ ಸಹಾಯ ಸಿಗುತ್ತದೆ. ಕಾರ್ಮಿಕರ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಸಹಾಯಧನ ಕೂಡ ಲಭ್ಯವಿದೆ.

ಆರೋಗ್ಯ ಭಾಗ್ಯದಡಿ ಕಾಯಿಲೆಗಳ ಚಿಕಿತ್ಸೆಗೆ ಆರ್ಥಿಕ ನೆರವನ್ನು ಸಹ ಪಡೆಯಬಹುದು. ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೇ ಬಂದು ಸೌಲಭ್ಯ ನೀಡುವ 'ಸಂಚಾರಿ ಆಸ್ಪತ್ರೆ'ಗಳ ಸೌಲಭ್ಯವೂ ಇದೆ. ಉಚಿತ ತರಬೇತಿ ಹಾಗೂ 'ಟೂಲ್-ಕಿಟ್' ಅನ್ನು ನೀಡಲಾಗುತ್ತದೆ. ಇನ್ನು ಅಪಘಾತ ಸಂಬಂಧಿ ಸೌಲಭ್ಯಗಳಿವೆ. ದುರದೃಷ್ಟವಶಾತ್ ಕಾರ್ಮಿಕರು ತೀರಿಕೊಂಡ್ರೆ, ಅವರ ಅಂತ್ಯಕ್ರಿಯೆ ವೆಚ್ಚ ಮತ್ತು ಕುಟುಂಬಕ್ಕೆ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

ಹೆಚ್ಚಿನ ವಿವರಕ್ಕಾಗಿ 155214 ಸಂಖ್ಯೆಗೆ ಕರೆ ಮಾಡಿ:

ಈ ಎಲ್ಲಾ ಸೌಲಭ್ಯಗಳ ಬಗ್ಗೆ ಹೆಚ್ಚಿನ ವಿವರ ಪಡೆಯಲು 155214ಗೆ ಕರೆ ಮಾಡಿ. ಅಥವಾ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆ ಕಚೇರಿಗಳಿಗೆ ಇಲ್ಲವೇ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರ ಗಳಿಗೆ ನೇರವಾಗಿ ಭೇಟಿ ನೀಡಿ.