ದಿನ ಭವಿಷ್ಯ, ಸೆಪ್ಟೆಂಬರ್ 25, 2026: ಇಂದು ಹೊಸ ಆದಾಯದ ಮೂಲ ತೆರೆದುಕೊಳ್ಳಬಹುದು!
Horoscope Today September 25th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಪೂರ್ವಬಾದ್ರ ಪದ ನಕ್ಷತ್ರದ ಸೆಪ್ಟೆಂಬರ್ 25ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪೂರ್ವಬಾದ್ರ ಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಮಾತುಕತೆಯಲ್ಲಿ ಇಂದು ತೊಂದರೆ ಎದುರಾಗಬಹುದು. ಹೀಗಾಗಿ ಯೋಚಿಸಿ ನೀವು ಮಾತನಾಡಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ದೊಡ್ಡದಾದ ಪ್ರಗತಿಯನ್ನು ನೀವು ಕಾಣಬಹುದು. ಪ್ರತಿಷ್ಠೆ ಹಾಗೂ ಗೌರವ ಇಂದು ಹೆಚ್ಚಾಗಬಹುದು.
ಮಿಥುನ ರಾಶಿ: ಇಂದು ಕಷ್ಟಕದ ದಿನವಾಗಲಿದೆ. ಪ್ರೀತಿ ಪ್ರೇಮ ಪ್ರಕರಣದಲ್ಲಿ ತೊಂದರೆ ಎದುರಾಗಬಹುದು. ಯಾವುದೇ ಮುಖ್ಯ ನಿರ್ಧಾರವನ್ನು ಇಂದು ಕೈಗೊಳ್ಳುವುದು ಸರಿಯಲ್ಲ.
ಕಟಕರಾಶಿ: ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
ಸಿಂಹ ರಾಶಿ: ಇಂದು ಕಷ್ಟದ ದಿನವಾಗಲಿದೆ. ಎರಡು ತಿಂಗಳು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಒಳಿತಲ್ಲ. ಯಾರ ಸಹಕಾರ ಕೂಡ ನಿಮಗೆ ಸಿಗದೇ ಇರಬಹುದು.
ಕನ್ಯಾ ರಾಶಿ: ಇಂದು ಉತ್ತಮ ದಿನವಾಗಿದ್ದು, ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗುತ್ತದೆ. ಇಂದು ಧನಾಗಮನದ ಸೂಚನೆ ಕೂಡ ಇದೆ.
ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ; ಇಲ್ಲವಾದರೆ ಎದುರಾಗಬಹುದು ಸಮಸ್ಯೆಗಳು!
ತುಲಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಧನ ವ್ಯಯವಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಹೆಚ್ಚಿನ ನಿಗಾ ವಹಿಸಿದರೆ ಉತ್ತಮ.
ವೃಶ್ಚಿಕ ರಾಶಿ: ಇಂದು ಕಷ್ಟದ ಗೋಚರವಾಗಲಿದೆ. ಮಾತುಕತೆಯಲ್ಲಿ ವ್ಯವಹಾರ ನಡೆಸುವಾಗ ಜಾಗೃತರಾಗಿ ಇರಬೇಕಾಗುತ್ತದೆ. ವ್ಯವಹಾರ ಮಾಡುವ ಮುನ್ನ ಬಹಳಷ್ಟು ಯೋಚಿಸಬೇಕಾಗುತ್ತದೆ.
ಧನು ರಾಶಿ: ಇಂದು ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಪ್ರೀತಿ ಪಾತ್ರರಿಂದ ಹೆಚ್ಚಿನ ಲಾಭ ಕಾಣುತ್ತೀರಿ.
ಮಕರ ರಾಶಿ: ಹೆಚ್ಚಿನ ಯಶಸ್ಸು ಸಿಗುವ ದಿನವಾಗಲಿದೆ. ಕೆಲಸದಲ್ಲಿ ಪ್ರಗತಿ, ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಹೆಚ್ಚಿನ ಲಾಭ ಕಾಣುತ್ತೀರಿ.
ಕುಂಭ ರಾಶಿ: ಇಂದು ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಪಾರ್ಟನರ್‌ಶಿಪ್ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತೀರಿ.
ಮೀನ ರಾಶಿ: ಇಂದು ಯಶಸ್ಸು ನಿಮ್ಮದಾಗುತ್ತದೆ. ಹಿಂದಿನ ದಿನದಲ್ಲಿ ಇದ್ದ ಕಷ್ಟಗಳೆಲ್ಲ ಇಂದು ನಿವಾರಣೆಯಾಗುತ್ತದೆ.